Breaking News

ಶಾಲಾ ಆವರಣದಲ್ಲಿಯೇ ಕುಸಿದು ಬಿದ್ದು ವಿದ್ಯಾರ್ಥಿನಿಯ ಸಾವು

ಬೆಳಗಾವಿ-ಬೆಳಗಾವಿ ನಗರದ ಪ್ರಸಿದ್ಧ ಸೆಂಟ್ ಜೋಸೆಫ್ ಕಾನ್ವೆಂಟ್ ಇಂಗ್ಲೀಷ ಮಾದ್ಯಮ ಶಾಲೆಯ ಐದನೇಯ ತರಗತಿಯ ವಿಧ್ಯಾರ್ಥಿನಿಯೊಬ್ಬಳು ಶಾಲಾ ಆವರಣದಲ್ಲಿಯೇ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನೊಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ
ಶಾಲೆಯಲ್ಲಿ ಬೆಳಿಗ್ಗೆ 9-30 ಕ್ಕೆ ಶಾಲೆಯ ಆವರಣದಲ್ಲಿ ದೈಹಿಕ ಶಿಕ್ಷಣ ತರಗತಿಯ ಪರೇಡ್ ನಡೆಯುತ್ತಿರುವಾಗ ಕುಸಿದು ಬಿದ್ದ ಐದನೇಯ ತರಗತಿಯ ಮಿಸ್ಬಾ ಎಂಬ ಬಾಲಕಿ ರಕ್ತದ ವಾಂತಿ ಮಾಡಿಕೊಂಡು ಸ್ಥಳದಲ್ಲಿಯೇ ಸಾವನೊಪ್ಪಿದ್ದಾಳೆ ಈ ಘಟನೆಯಿಮದಾಗಿ ಶಾಲೆಯಲ್ಲಿ ಸುಮಾರು ಎರಡು ಘಂಟೆಗಳ ಕಾಲ ಸೂತಕದ ಛಾಯೆ ಆವರಿಸಿತ್ತು
ಕ್ಯಾಂಪ್ ನಿವಾಸಿಯಾಗಿದ್ದ ಮಿಸ್ಬಾ ಹಲವಾರು ದಿನಗಳಿಂದ ಹೃದಯ ರೋಗದಿಂದ ಬಳಲುತ್ತಿದ್ದಳು ಈ ವಿಷಯ ಶಾಲೆಯ ಶಿಕ್ಷರಿಗೂ ಗೊತ್ತಿತ್ತು ಆದರೂ ಬಾಲಿಕಿ ಆರೋಗ್ಯದ ಕುರಿತು ಕಾಳÀಜಿ ವಹಿಸದ ಶಿಕ್ಷಕರು ಬಾಲಕಿಯನ್ನು ದೈಹಿಕ ಶಿಕ್ಷಣದ ತರಗತಿಯ ಪರೆಡ್‍ನಲ್ಲಿ ಭಾಗವಹಿಸಲು ಅನುಮತಿ ನಿಡಿದ್ದು ಯ್ಯಾಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ
ಬಾಲಕಿಯ ಪೋಷಕರು ಹಲವಾರು ದಿನಗಲಿಂದ ಬಾಲಕಿಗೆ ಚಿಕಿತ್ಸೆ ನೀಡುತ್ತಿದ್ದರು ಎಂದು ತಿಳಿದು ಬಂದಿದೆ ,ಶಿಕ್ಷಣ ಇಲಾಕೆ ಶಾಲಾ ಮಕ್ಕಳ ಆರೋಗ್ಯ ತಪಾಸನೆ ಮಾಡಲು ಕೋಟ್ಯಾಂತರ ರೂ ಖರ್ಚು ಮಾಡುತ್ತಿದೆ ಆದರೂ ಶಾಲಾ ಮಕ್ಕಲು ಹಲವಾರು ಸಮಸ್ಯಗಳನ್ನು ಎದುರಿಸುತ್ತಿದ್ದಾರೆ
ಐದನೇಯ ತರಗತಿಯ ಬಾಲಕಿ ಮಿಸ್ಬಾ ಸಾವಿನ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ತನಿಖೆ ಮಾಡಿಸಿದರೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಬಯಲಾಗಬಹುದು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *