ಆನ್ ಲೈನ್ ನಲ್ಲಿ ತಂದೆ ಜಾಕೆಟ್ ಕೂಡಿಸಿಲ್ಲಿ ಅಂತಾ ಆತ್ಮಹತ್ಯೆ ಮಾಡಿಕೊಂಡ ಮಗ….
ಬೆಳಗಾವಿ- ಮಗ ಆನ್ ಲೈನ್ ನಲ್ಲಿ ಜಾಕೆಟ್ ಚಾಯ್ಸ್ ಮಾಡಿ ಜಾಕೆಟ್ ಕೊಡಿಸುವಂತೆ ತಂದೆಗೆ ಹೇಳಿದ ಆದ್ರೆ ತಂದೆ ಜಾಕೇಟ್ ಕೊಡಿಸದೇ ಇರುವದರಿಂದ ಐದಿನೈದು ವರ್ಷ ವಯಸ್ಸಿನ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲ್ಲೂಕಿನ ಬಸುರ್ತೆ ಗ್ರಾಮದಲ್ಲಿ ನಡೆದಿದೆ.
ಸುಭಾಷ್ ಗಜಾನನ ಹನ್ನೂರಕರ ಬಸೂರ್ತೆ ಗ್ರಾಮದವನಾಗಿದ್ದು 15 ವರ್ಷ ,ಒಂಬತ್ತನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಂದು ಬೆಳಿಗ್ಗೆ ಮನೆಯ ಹುಕ್ ಗೆ ಹಗ್ಗ ಕಟ್ಟಿ ಜಂಪ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಇಂದು ಬೆಳಿಗ್ಗೆ ಮನೆಯಲ್ಲಿ ತಾಯಿ ಬಟ್ಟೆಗಳನ್ನು ಹಿತ್ತಲಲ್ಲಿ ಒಣಗಿಸಲು ಹಾಕುವಾಗ,ಮನೆಯಲ್ಲಿದ್ದ ತಂಗಿಗೆ ಚಾಕಲೇಟ್ ತರುವಂತೆ ಅಂಗಡಿಗೆ ಕಳುಹಿಸಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿನ್ನೆಯಷ್ಟೇ ಸುಭಾಷ್ ಆನ್ ಲೈನ್ ನಲ್ಲಿ ಜಾಕೇಟ್ ಚಾಯ್ಸ್ ಮಾಡಿ ಅದನ್ನು ಕೊಡಿಸುವಂತೆ ಪಟ್ಟು ಹಿಡಿದಿದ್ದ,ಆದ್ರೆ ತಂದೆ ಆನ್ ಲೈನ್ ನಲ್ಲಿ ಜಾಕೇಟ್ ಖರೀಧಿಸುವದು ಬೇಡ ,ನಾನೇ ಅಂಗಡಿಯಿಂದ ಜಾಕೇಟ್ ತರುವದಾಗಿ ಹೇಳಿದ್ದ ,ಆದ್ರೆ ತಂದೆ ಇಂದು ಅಂಗಡಿಯಿಂದ ಜಾಕೇಟ್ ತರದೇ ಇರುವದರಿಂದ ಮಗ ಸುಭಾಷ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ