ಬೆಳಗಾವಿಯ ಆಝಾದ್ ನಗರದಲ್ಲಿ ಯುವಕರ ನಡುವೆ ಫೈಟ್….
ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ದಿನಾಂಕ ಘೋಷಣೆ ಆಗಿಲ್ಲ,ಚುನಾವಣೆ ನಡೆಯುವ ಲಕ್ಷಣ ಗಳೂ ಕಾಣುತ್ತಿಲ್ಲ ಆದ್ರೆ ಬೆಳಗಾವಿಯ ಕೆಲವು ವಾರ್ಡುಗಳಲ್ಲಿ ಭವಿಷ್ಯದ ಕಾರ್ಪೋರೇಟರ್ ಗಳ ನಡುವೆ ಜಗಳ ಶುರುವಾಗಿದೆ.
ನಾನು ದೊಡ್ಡವನು,ನೀನು ದೊಡ್ಡವನ್ನು ಅಂತಾ ಬೆಳಗಾವಿಯ ಆಝಾದ್ ನಗರದಲ್ಲಿ ಕಳೆದು ಒಂದು ವಾರದ ಹಿಂದೆಯೇ ಯುವಕರ ಎರಡು ಗುಂಪುಗಳ ಮದ್ಯ ಫೈಟ್ ಶುರುವಾಗಿತ್ತು,ಯುವಕರ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಅಟ್ಯಾಕ್ ಮಾಡಿತ್ತು. ಇಂದು ಇದೇ ಜಗಳ ಮತ್ತೆ ಮರುಕಳಿಸಿದೆ.ಈ ಹಿಂದೆ ಅಟ್ಯಾಕ್ ಮಾಡಿದ ಯುವಕರ ಮೇಲೆ ಸೇಡು ತೀರಿಸಲು ಮತ್ತೊಂದು ಗುಂಪು ಅಟ್ಯಾಕ್ ಮಾಡಿದೆ.
ವಾರ್ಡಿನಲ್ಲಿ ವರ್ಚಸ್ಸು ಸಾಧಿಸಲು ನಡೆದಿರುವ ಈ ಫೈಟ್ ನಲ್ಲಿ ಒಬ್ಬ ಎಂಬ ಯುವಕ ಗಾಯಗೊಂಡಿದ್ದಾನೆ.ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.