ಬೆಳಗಾವಿ- ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಇಂದು ಬುಧವಾರ ಬೆಳಿಗ್ಗೆ ಎಂಟು ಘಂಟೆಗೆ ಬೆಳಗಾವಿ-ಖಾನಾಪೂರ ರಸ್ತೆಯಲ್ಲಿ ನಡೆದಿದೆ
ಬೆಳಗಾವಿ- ಖಾನಾಪೂರ ರಸ್ತೆಯ ಜಾಧವ ನಗರ ಸಮೀಪ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹತ್ತಿರ ಈ ಅಪಘಾತ ಸಂಭವಿಸಿದ್ದು,48 ವರ್ಷ ವಯಸ್ಸಿನ ಕರನಸಿಂಗ್ ರಜಪೂತ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಕರಣಸಿಂಗ್ ರಜಪೂತ ಜಾಧವ ನಗರದಿಂದ ಉದ್ಯಮಬಾಗ್ ಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ಬೆಳಗಾವಿ -ಖಾನಾಪೂರ ರಸ್ತೆಯಲ್ಲಿ ಓಡಾಡುವ ಟ್ಯಾಂಕರ್ ಗಳಿಗೆ ಈಗಾಗಲೇ ಅನೇಕ ಜನ ಬಲಿಯಾಗಿದ್ದು ಈ ಟ್ಯಾಂಕರ್ ಇಂದು ಇನ್ನೊಂದು ಬಲಿ ಪಡೆದಿದೆ.
ದೇಸೂರು ಆಯಿಲ್ ಡಿಪೋಗಳಿಂದ ಪೆಟ್ರೋಲ್,ಡಿಸೈಲ್ ಸಾಗಿಸುವ ಟ್ಯಾಂಕರ್ ಗಳು ಒಂದು ದಿನದಲ್ಲಿ ಅತೀ ಹೆಚ್ಚು ಟ್ರಿಪ್ ಮಾಡುವ ಭರಾಟೆಯಲ್ಲಿ ಅತೀ ವೇಗದಲ್ಲಿ ಚಲಿಸುತ್ತವೆ.ಬೆಳಗಾವಿ ಟ್ರಾಫಿಕ್ ಪೋಲೀಸರು ಟ್ಯಾಂಕರ್ ಗಳ ವೇಗಕ್ಕೆ ಲಗಾಮು ಹಾಕುವದು ಅಗತ್ಯವಾಗಿದೆ.
ಬೆಳಗಾವಿ ದಕ್ಷಿಣ ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ