Breaking News

ಬೈಕ್ ಗೆ ಟಿಪ್ಪರ್ ಡಿಕ್ಕಿ ಸ್ಥಳದಲ್ಲೇ ಪತ್ನಿಯ ಸಾವು ಪತಿಗೆ ಗಂಭೀರ ಗಾಯ…

ಟಳಗಾವಿ – ಬೆಳಗಾವಿ ತಾಲ್ಲೂಕಿನ ಕಾವಳೆವಾಡಿ ಗ್ರಾಮದ ಚವಾಟಾ ,ದೇವರ ಜಾತ್ರೆ ಮುಗಿಸಿ ಬೈಕ್ ಮೇಲೆ ಮರಳಿ ಬರುವಾಗ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು ಪತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬಿಜಗರಣಿ ಗ್ರಾಮದ ಇಂದಿರಾ ನಗರದ ಪ್ರಾಥಮಿಕ ಶಾಲೆಯ ಬಳಿ ಇಂದು ಮದ್ಯಾಹ್ನ ಈ ಅಪಘಾತ ಸಂಭವಿಸಿದೆ

ಮಂಡೊಳ್ಳಿ ಗ್ರಾಮದ ಮಂದಾ ಭಾರತ ಪಾಟೀಲ ಮತ್ತು ಭಾರತ ಭರಮಾ ಪಾಟೀಲ ಎಂಬ ದಂಪತಿಗಳು ಕಾವಳೆವಾಡಿ ಗ್ರಾಮದಲ್ಲಿ ಜರುಗಿದ ,ಚವಾಟಾ ಜಾತ್ರೆ ಮುಗಿಸಿ ಮಂಡೊಳ್ಳಿ ಗ್ರಾಮಕ್ಕೆ ಮರಳಿ ಬರುವಾಗ ಬಿಜಗರಣಿ ಗ್ರಾಮದ ಬಳಿ ಅಪಘಾತ ಸಂಭವಿಸಿ ಮಂದಾ ಭಾರತ ಪಾಟೀಲ (38) ಸ್ಥಳದಲ್ಲೇ ಮೃತಪಟ್ಟಿದ್ದು ಇವಳ ಪತಿ ಭಾರತ ಭರಮಾ ಪಾಟೀಲ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Check Also

ಇಂದು ಶ್ರೀ ರೇಣುಕಾ ಯಲ್ಲಮ್ಮದೇವಿ ದರ್ಶನ,ನಾಳೆ ಬೆಳಗಾವಿ ದರ್ಶನ….!!!

ಬೆಳಗಾವಿ – ಮಾಜಿ ಸಚಿವ ಹಾಲಿ ವಿಧಾನಪರಿಷತ್ತ್ ಸದಸ್ಯ ಸಿಟಿ ರವಿ ಇಂದು ಸಂಜೆ ಸವದತ್ತಿ ಯಲ್ಲಮ್ಮದೇವಿಯ ದರ್ಶನ ಪಡೆದು …

Leave a Reply

Your email address will not be published. Required fields are marked *