ವ್ಯಾಪಾರಿಯನ್ನು ಕಿಡ್ನ್ಯಾಪ್ ಮಾಡಿ ಸುಲಿಗೆ ಮಾಡಿದ ಏಳು ಜನ ಅರೆಸ್ಟ್….
ಬೆಳಗಾವಿ – ಕಳೆದ ವಾರ ಬೆಳಗಾವಿ ಜಿಲ್ಲೆಯ ಮುರುಗೋಡ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಾಪಾರಿಯನ್ನು ಕಿಡ್ನ್ಯಾಪ್ ಮಾಡಿ ಸುಲಿಗೆ ಮಾಡಿದ ಏಳು ಜನ ಆರೋಪಿಗಳನ್ನು ಮುರುಗೋಡ ಪೋಲೀಸ್ರು ಅರೆಸ್ಟ್. ಮಾಡಿದ್ದಾರೆ.
ಏಳು ಜನ ಸುಲಿಗೆಕೋರರು ಕೂಡಿಕೊಂಡು ವ್ಯಾಪಾರಿಯೊಬ್ಬನನ್ನು ಅಪಹರಿಸಿ,ಆತನಿಗೆ ಬೆದರಿಸಿ ಒಂದು ಲಕ್ಷ ರೂ ಸುಲಿಗೆ ಮಾಡಿದ್ದಾರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಮುರುಗೋಡ ಠಾಣೆಯ ಪೋಲೀಸ್ರು ಏಳು ಜನ ದರೋಡೆಖೋರರನ್ನು ಪತ್ತೆ ಮಾಡಿ ಅವರಿಂದ ಅರವತ್ತು ಸಾವಿರ ನಗದು ಐದು ಮೊಬೈಲ್, ಒಂದು ಕಾರು,ಒಂದು ಚಾಕು ವಶಪಡಿಸಿಕೊಂಡಿದ್ದಾರೆ.
ವ್ಯಾಪಾರಿಯನ್ನು ಕಿಡ್ನ್ಯಾಪ್ ಮಾಡಿ ಒಂದು ಲಕ್ಷ ರೂ ಸುಲಿಗೆ ಮಾಡಿದ್ದ, 1);ಶ್ರೀಶೈಲ ಹೊಂಡಪ್ಪನವರ, 2)ರಮೇಶ್ ಚಂದರಗಿ 3)ಬಂದೇನವಾಜ್ ಅತ್ರಾರ್ 4)ಇಮ್ರಾನ್ ಖತಬೋದ್ದೀನ್ ಮುಲ್ಲಾ 5)ಮಲ್ಲಪ್ಪ ಉದ್ದಪ್ಪಾ ಕೋಮಾರ್ 6)ನಾಗಪ್ಪಾ ನಿಂಗಪ್ಪಾ ರಂಗಣ್ಣವರ7) ಬಾಳೇಶ್ ಮಹಾದೇವ ಹೊಂಡಪ್ಪನವರ ಒಟ್ಟು ಏಳು ಜನ ಸುಲಿಗೆಕೋರರನ್ನು ಪೋಲೀಸ್ರು ಬಂಧಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ






