ಬೆಳಗಾವಿ- ನಾಲ್ವರು ಬಾಲಕರು ಸೇರಿಕೊಂಡು ಓರ್ವ ಬಾಲಕನನ್ನು ತಲವಾರ್ ನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಕ್ಕದ ಮಲ್ಲಾಪೂರ ಗ್ರಾಮದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಗೆಳೆಯರ ಮದ್ಯೆ ವಾಗ್ವಾದ ಆಗಿದೆ.ಇದು ವಿಕೋಪಕ್ಕೆ ಹೋಗಿ ನಾಲ್ಚರು ಬಾಲಕರು ಸೇರಿಕೊಂಡು ಮಲ್ಲಾಪೂರ ಗ್ರಾಮದ 16 ವರ್ಷದ ಪ್ರಜ್ವಲ್ ಸುಂಕದ ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಪ್ರಜ್ವಲ್ ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಆದ್ರೆ ಕೊನೆಗೂ ಪ್ರಜ್ವಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕೊಲೆಗೆ ಕಾರಣ ಏನು ? ಎಂಬುದು ಇನ್ನುವರೆಗೆ ಗೊತ್ತಾಗಿಲ್ಲ, ಸ್ಥಳಕ್ಕೆ ಕಿತ್ತೂರು ಪೋಲೀಸರು ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ