Breaking News

ಬಸ್ ನಿಲ್ಲಿಸು..ನಿಲ್ಲಿಸು..ಅಂತಾ ಚೀರಾಡಿದ್ರೂ ಆ ಚಾಲಕ ಕೇಳಲೇ ಇಲ್ಲ…!!

ಬೆಳಗಾವಿ- ನಿನ್ನೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರಸ್ತೆ ಜಲಾವೃತಗೊಂಡು ರಸ್ತೆ ಹಳ್ಳವಾಗಿದೆ,ಶಾಲಾ ಮಕ್ಕಳ ಬಸ್ ಚಾಲಕ ಈ ರಸ್ತೆಯಲ್ಲಿ ಬಸ್ ಚಲಾಯಿಸಿ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಹುಕ್ಕೇರಿ ತಾಲ್ಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲಾ ಬಸ್ ಜಲಾವೃತಗೊಂಡ ರಸ್ತೆ ಸಮೀಪ ಬಂದಾಗ,ಅಲ್ಲಿದ್ದ ಸಾರ್ವಜನಿಕರು ಬಸ್ ನಿಲ್ಲಿಸುವಂತೆ ಚೀರಾಡಿದ್ರೂ ಇದನ್ನು ಲೆಕ್ಕಿಸದೇ ಬಸ್ ಜಲಾವೃತ ರಸ್ತೆಯಲ್ಲೇ ಚಲಾಯಿಸಿದ್ದಾನೆ.ಬಸ್ ನೀರಿನಲ್ಲಿ ಸಿಲುಕಿ ಪಲ್ಟಿಯಾಗುವ ಪರಿಸ್ಥಿತಿಗೆ ತಲುಪಿತ್ತು, ನಂತರ ಸಾರ್ವಜನಿಕರು ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಸ್ ನಲ್ಲಿ 20 ವಿಧ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು, ಚಾಲಕನ ಚೆಲ್ಲಾಟದಿಂದ ಮುಗ್ದ ವಿಧ್ಯಾರ್ಥಿಗಳ ತೊಂದರೆ ಅನುಭವಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Check Also

46 ಜನ ಎಂಇಎಸ್ ಮುಖಂಡರು ಸೇರಿ 1500 ಜನರ ವಿರುದ್ಧ ಕೇಸ್

ಬೆಳಗಾವಿ – ಕನ್ನಡ ರಾಜ್ಯೋತ್ಸವ ದಿನವೇ ಎಂಇಎಸ ಕರಾಳ ದಿನಾಚರಣೆ ಮಾಡುವ ಮೂಲಕ ಪುಂಡಾಟಿಕೆ ಪ್ರದರ್ಶಿಸಿದ 46 ಜನ ಎಂಇಎಸ …

Leave a Reply

Your email address will not be published. Required fields are marked *