ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ನಡೆಯುತ್ತಿರುವ ಆರೋಪ,ಪ್ರತ್ಯಾರೋಪ,ವಾಕ್ಸಮರ ನೋಡಿದ್ರೆ ಈ ಕ್ಷೇತ್ರದಲ್ಲಿ ಇವತ್ತೇ ಚುನಾವಣೆ ಘೋಷಣೆ ಆದಂತೆ ಕಾಣುತ್ತಿದೆ.
ಮಾಜಿ ಶಾಸಕ ಸಂಜಯ ಪಾಟೀಲ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ರು,ಇದಕ್ಕೆ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿಗಳು ತಿರಗೇಟು ನೀಡಿದ್ರು,ಈ ವಾಕ್ಸಮರ ಮುಗಿಯುತ್ತಿದ್ದಂತೆಯೇ ಈಗ ರೋಡ್ ಪಾಲಿಟೀಕ್ಸ್ ಶುರುವಾಗಿದೆ. ಬಿಜೆಪಿ ಯುವ ಮುಖಂಡ ಧನಂಜಯ ಜಾಧವ ನೇತ್ರತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದ ಉಚಗಾಂವ-ಬೆಕ್ಕಿನಕೇರಿ ರಸ್ತೆಯಲ್ಲಿ ರಸ್ತೆಗುಂಡಿಗಳನ್ನು ತುಂಬುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಇದಕ್ಕು ಮೊದಲು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಲ್ಲೆಲ್ಲಿ ರಸ್ತೆಗಳು ಹಾಳಾಗಿವೆಯೋ ಅಂತಹ ರಸ್ತೆಗಳಲ್ಲಿ ಕೆಲವು ಅನಾಮಿಕರು ರಸ್ತೆಗಳು ಹಾಳಾಗಿವೆ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಏನೂ ಮಾಡಿಲ್ಲ ಎಂದು ಸಂದೇಶ ಸಾರುವ ಬ್ಯಾನರ್ ಹಾಕಿದ್ರು, ಇದು ಬಿಜೆಪಿಯ ಕೃತ್ಯ ಎಂದು ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಆರೋಪಿಸಿದ್ದರು.
ಇದಕ್ಕೆ ಮಾಜಿ ಶಾಸಕ ಸಂಜಯ ಪಾಟೀಲ ಬ್ಯಾನರ್ ಹಚ್ಚಿದ್ದು ಬಿಜೆಪಿ ಕಾರ್ಯಕರ್ತರಲ್ಲ,ಬ್ಯಾನರ್ ಹಚ್ಚಿದವರು ಮರಾಠಿಗರು ಎಂದು ಹೇಳಿಕೆ ನೀಡುತ್ತಾರೆ,ಇದಕ್ಕೆ ಸಂಜಯ ಪಾಟೀಲ ವಿರುದ್ಧ ಶಿವಸೇನೆ,ಕಾರ್ಯಕರ್ತರು ಪ್ರತಿಭಟಿಸುತ್ತಾರೆ.
ಬಿಜೆಪಿ ಯುವ ಮುಖಂಡ ಧನಂಜಯ ಜಾಧವ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಸಮರ ಸಾರಿದ್ದಾರೆ.ಸ್ವಂತ ಖರ್ಚಿನಲ್ಲಿ ಟಿಪ್ಪರ್ ತುಂಬಾ ಜೆಲ್ಲಿ ಕಲ್ಲು,ಸಿಮೆಂಟು ತಂದು ರಸ್ತೆ ಗುಂಡಿಗಳನ್ನು ತುಂಬುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ.
ಒಟ್ಟಾರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸದ್ಯಕ್ಕೆ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಗಮನಿಸಿದ್ರೆ ಬಹುಶ ಈ ಕ್ಷೇತ್ರದಲ್ಲಿ ಈಗಿನಿಂದಲೇ ಚುನಾವಣೆ ಘೋಷಣೆ ಆದಂತೆ ಕಾಣುತ್ತಿದೆ.
ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್ ಯಾರಿಗೆ ಸಿಗುತ್ತದೆ ಎಂದು ಘೋಷಣೆ ಆಗುವವರೆಗೂ ಈ ಕ್ಷೇತ್ರದಲ್ಲಿ ಆರೋಪ,ಪ್ರತ್ಯಾರೋಪ, ಪ್ರತಿಭಟನೆಗಳು, ನಡೆಯುವದು
ಯಾಕಂದ್ರೆ ಬಿಜೆಪಿ ಟಿಕೆಟ್ ಗಾಗಿ ಧನಂಜಯ ಜಾಧವ ಮತ್ತು,ಸಂಜಯ ಪಾಟೀಲ ಅವರ ನಡುವೆ ಸಂಘರ್ಷ ನಡೆತುತ್ತಿದೆಯೋ ? ಅಥವಾ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಸಂಘರ್ಷ ನಡೆಯುತ್ತಿದೆಯೋ ಅನ್ನೋದು ಅರ್ಥವಾಗುತ್ತಿಲ್ಲ.