Breaking News

ರಾಜರಥದಲ್ಲಿ ಗುರು…ಕೈತುತ್ತು ಊಟ…ಇದು ರಿಯಲ್ ನೋಟ…!!

ಬೆಳಗಾವಿ: ಪುಷ್ಪಗಳಿಂದ ಸಿಂಗರಿಸಿದ ರಥದಲ್ಲಿ ಆಸೀನರಾಗಿದ್ದ ಗುರುಗಳು… ಬೀದಿ ಬೀದಿಗಳಲ್ಲಿ ಅದ್ದೂರು ಮೆರವಣಿಗೆ… ಶಿಷ್ಯರಿಂದ ಹೂಮಳೆ…ಬಳಿಕ ಅಕ್ಷರ ಕಲಿಸಿದ ಗುರುಗಳಿಗೆ ಕೈತುತ್ತು ತಿನ್ನಿಸಿ ಸಾರ್ಥಕತೆ ಮೆರೆದ ವಿದ್ಯಾರ್ಥಿಗಳು…

ಇದು ಯಾವುದೋ ಕಾಲದ ಕತೆಯನ್ನಾಧರಿಸಿದ ಸಿನಿಮಾ ದೃಶ್ಯ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಎಲ್ಲ ಸಂಬಂಧಗಳು ಯಾಂತ್ರಿಕವಾಗಿರುವ ಇಂದಿನ ದಿನಗಳಲ್ಲಿ ಹುಕ್ಕೇರಿಯಲ್ಲಿ ಇಂದು ಕಂಡುಬಂದ ದೃಶ್ಯ.
ಹೌದು, ಶ್ರೀ ಕಾಡಸಿದ್ದೇಶ್ವರ ಪ್ರೌಢಶಾಲೆಯ 1988-89 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪುನರ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ನೋಡಿದ ಪ್ರತಿಯೊಬ್ಬರಲ್ಲಿ ಸಿನಿಮಾ ದೃಶ್ಯಗಳಲ್ಲಿ ನೋಡಿದ್ದ ಗುರುಕುಲಗಳಲ್ಲಿ ಶಿಷ್ಯರು ವಿದ್ಯೆ ಕಲಿಸಿದ ಋಷಿಮುನಿಗಳಿಗೆ ಕೊಡುತ್ತಿದ್ದ ಆದರಾತಿಥ್ಯ ಕಣ್ಮುಂದೆ ಹಾದು ಹೋಯಿತು.
ಪುನರ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಸುಮಾರು 200ಕ್ಕೂ ಹೆಚ್ಚು ಸಹಪಾಠಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೆಳೆಯರೊಂದಿಗೆ ನಕ್ಕು ನಲಿದರು. ಹಳೆಯ ದಿನಗಳನ್ನು ಪರಸ್ಪರ ಮೆಲುಕು ಹಾಕಿಕೊಂಡರು.

ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಮೂಲಕ ಬಾಲ್ಯದ ಗೆಳೆಯರೊಂದಿಗೆ ಮನಸ್ಸು ಹಗುರ ಮಾಡಿಕೊಂಡರು. ಎಲ್ಲ ಸಹಪಾಠಿಗಳಿಗೂ ವಿಶೇಷ ಡ್ರೆಸ್ ಕೋಡ್ ಮಾಡಲಾಗಿತ್ತು.
ಶಾಲೆಯ ವಿದ್ಯಾರ್ಥಿಯೂ ಆಗಿದ್ದ, ಈಗ ಬೆಳಗಾವಿಯಲ್ಲಿ ಡಿ.ಕೆ.ಮೋಟಿವ್ ಸಂಸ್ಥೆಯನ್ನು ತೆರೆದಿರುವ ಹಿರಿಯ ಪತ್ರಕರ್ತ ದಿಲೀಪ ಕುರುಂದವಾಡೆ ಮತ್ತು ಅವರ ತಂಡ ಅತ್ಯಂತ ಕ್ರಿಯಾಶೀಲವಾಗಿ ಮತ್ತು ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿ ಅಷ್ಟೇ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಕಾರ್ಯಕ್ರಮದ ವೇದಿಕೆಯಲ್ಲಿ ಅಂದಿನ‌ ಶಿಕ್ಷಕ- ಶಿಕ್ಷಕಿಯರನ್ನು ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳು ಅವರಿಗೆ ಕೈತುತ್ತು ತಿನ್ನಿಸುವ ಮೂಲಕ ಸಾಂಕೇತಿಕವಾಗಿ ಕೃತಜ್ಞತೆ ಮೆರೆದರು. ಇದಕ್ಕೂ‌ ಮುಂಚೆ ರಾಜರಥದಲ್ಲಿ ಮೆರವಣಿಗೆ ಮೂಲಕ ಎಲ್ಲ ಶಿಕ್ಷಕರನ್ನು ವೇದಿಕೆಗೆ ಕರೆತರಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ‌ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ತಮ್ಮ ಬಾಲ್ಯದ ಮತ್ತು ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. “ಇಂದಿನ ಕಂಪ್ಯೂಟರ್ ಮತ್ತು ಇಂಟರ್ನೆಟ್ ಯುಗದಲ್ಲಿ ನಮ್ಮ ಹಳೆಯ ಸಂಪ್ರದಾಯಗಳು ಮಾಸಿ ಹೋಗುತ್ತಿವೆ. ತಂದೆ-ತಾಯಿ ಮತ್ತು ಗುರುಗಳ ಬಗೆಗಿನ ಗೌರವ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸಹಕಾರಿಯಾಗುತ್ತದೆ’ ಎಂದರು.

‘ಮಧ್ಯವಯಸ್ಸಿನ ಬಿಕ್ಕಟ್ಟುಗಳು ಮತ್ತು ಪರಿಹಾರ’ ವಿಷಯದ ಬಗ್ಗೆ ದಿಲೀಪ ಕುರುಂದವಾಡೆ ಅವರು ಜೀವಂತ ಉದಾಹರಣೆಗಳನ್ನು ನೀಡುವ ಮೂಲಕ ಮಾರ್ಮಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ದಿಲೀಪ ಕುರುಂದವಾಡೆ ಮತ್ತು ‌ಅವರ ಧರ್ಮಪತ್ನಿ ಆರತಿ ಅವರನ್ನು ಸಹಪಾಠಿಗಳಿಂದ ಹೃದಯಸ್ಪರ್ಶಿಯಾಗಿ‌ ಸನ್ಮಾನಿಸಲಾಯಿತು.
ಮುಂಬಯಿನಿಂದ ಆಗಮಿಸಿದ್ದ ಮ್ಯೂಜಿಕಲ್ ಥೆರಪಿಸ್ಟ್ ಸಂತೋಷ ಬರೋಡೆ ಸಂಗೀತದಿಂದ ಆರೋಗ್ಯದ ಮೇಲೆ ಆಗುವ ಪ್ರಯೋಜನಗಳನ್ನು ಹೇಳಿ ಕೊಟ್ಟರು. ಹಲವಾರು ಹಿಂದಿ ಹಾಡುಗಳನ್ನು ಹಾಡಿದರು.  ಹಾಸ್ಯಬ್ರಹ್ಮ ಗಂಗಾವತಿ ಪ್ರಾಣೇಶ ಅವರ ತಂಡದ ವತಿಯಿಂದ ಹಾಸ್ಯ ಕಾರ್ಯಕ್ರಮ

ಡೆಯಿತು

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸ್ಥಳೀಯ ‌ವಿರಕ್ತಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಶ್ರೀಶೈಲ ಕಾಳಿಶಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರೂಪಕಿ ನವಿತಾ ಜೈನ್ ಅದ್ಭುತವಾಗಿ ಕಾರ್ಯಕ್ರಮ ನಿರೂಪಿಸಿದರು.
ಮಹಾವೀರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಕೆ.ಎಸ್.ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಚನಬಸಪ್ಪ ಶೆಟ್ಟಿ ವೇದಿಕೆ ಮೇಲಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *