ಬೆಳಗಾವಿ-ಗೋಕಾಕನಲ್ಲ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಸುದ್ದಿಘೋಷ್ಠಿ, ನಡೆಸಿ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಚುನಾವಣೆ ಮುಗಿದ ಬಳಿಕ ರಮೇಶ್ ಒಂದು ವಾರ ಬಿಜೆಪಿ ಇದ್ದು ತೋರಿಸಲಿ ನಾನೂ ನೋಡುವೆ ಎಂದು ದಿನೇಶ್ ಗುಂಡುರಾವ್ ರಮೇಶ್ ಜಾರಕಿಹೊಳಿ ಅವರಿಗೆ ಸವಾಲು ಹಾಕಿದ್ದಾರೆ
ಚುನಾವಣೆ ಮುಗಿದ ಬಳಿಕ ರಮೇಶ್ ಅತಂತ್ರರಾಗುತ್ತಾರೆ ಅವರಿಗಾಗಿ ಕಾಂಗ್ರೆಸ್ ಬಾಗಿಲು ಬಂದ್ ಆಗಿದೆ ಜೆಡಿಎಸ್ ನಲ್ಲೂ ಜಾಗವಿಲ್ಲ ಮುಂದೆ ಅವರು ಸ್ವಂತ ಪಕ್ಷ ರಚಿಸಿಕೊಳ್ಳುವ ಪರಿಸ್ಥಿತಿ ಬರಲಿದೆ ಎಂದು ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.
ಸಿದ್ದಾಂತಕ್ಕಲ್ಲದೆ, ಮಹತ್ತರವಾದ ಬೆಳವಣಿಗೆಯಿಂದ ಅಥವಾ ಜನರ ಒಳಿತಿಗಾಗಿ ಈ ಚುನಾವಣೆ ಬಂದಿಲ್ಲ
ಶಾಸಕರು ಪಕ್ಷಾಂತರ ಮಾಡಿದ್ದನ್ನು ಜನರು ನೋಡಿದ್ದಾರೆ
ಯಾವುದೇ ನೀತಿ ನಿಯಮವಿಲ್ಲದೆ, ಸ್ವಾರ್ಥ ಮನೋಭಾವನೆಯಿಂದ ಬಿಜೆಪಿ ಸರ್ಕಾರ ರಚನೆ ಮಾಡಿದೆ ಎಂದು ಗುಂಡೂರಾವ್ ಟೀಕಿಸಿದರು
ರಾಜ್ಯದ ಜನ ಬುದ್ದಿ ಜೀವಿಗಳು ಈ ರೀತಿಯ ಬೆಳಗಣಿಗೆಯಾದರೆ ನಮ್ಮ ರಾಜ್ಯಕ್ಕೆ ಒಳಿತಾಗೊಲ್ಲ ಎಂದಿದ್ದಾರೆ,
ರಾಜ್ಯಕ್ಕೆ ಪ್ರವಾಹ ಬಂತು ಬರಗಾಲ ಬಂತು ಆದರೂ ಸಹ ಸರ್ಕಾರ ಇದೇಯೊ ಇಲ್ಲವೊ ಎಂಬ ಪ್ರಶ್ನೆ ಮಾಡುವ ಕಾಲ ಬಂದಿದೆ
*ವಿಧಾನಸೌಧದಲ್ಲಿ ಸತ್ತ ಮನೆಯ ಸೂತಕ ಆವರಿಸಿದೆ ಅಲ್ಲಿ ಯಾರು ಇಲ್ಲ*
ಸಚಿವರೆಲ್ಲರೂ ಚುನಾವಣೆ, ವರ್ಗಾವಣೆ,ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಗುಂಡೂರಾವ್ ಆರೋಪಿಸಿದರು
ಗೋಕಾಕನಲ್ಲಿ ಕಳೆದ ಮೂರು ತಿಂಗಳಿನಿಂದಲೂ ಸಹ ಸತೀಶ್ ಲಖನ್ ಕೆಲಸ ಮಾಡ್ತಿದ್ದಾರೆ
ಲಖನ್ ಜಾರಕಿಹೊಳಿಯವರು ಭಾರಿ ಅಂತರದಲ್ಲಿ ಗೆಲ್ತಾರೆ ಎಂಬ ನಂಬಿಕೆ ಇದೆ
ಶಾಸಕರೆಲ್ಲರೂ ಸಹ ಸ್ವಾರ್ಥಕ್ಕಾಗಿ, ರಾಜೀನಾಮೆ ನೀಡಿದ್ದಾರೆ,
ರಮೇಶ್ ಈಗಾಗಲೇ ಕಾಂಗ್ರೇಸ್ನಲ್ಲಿ ಮಂತ್ರಿಯಾಗಿದ್ದರು, ಅವರ ಬಗ್ಗೆ ಎಲ್ಲರಿಗೂ ವಿಶ್ವಾಸವಿತ್ತು,
ಅವರು ಮಂತ್ರಿಯಾಗಿದ್ದಾಗ ಈ ರಾಜ್ಯಕ್ಕೊಸ್ಕರ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ? ಪ್ರಶ್ನೆ ಮಾಡಿದ ದಿನೇಶ,
ಪೌರಾಡಳಿತ,ಸಹಕಾರ,ಸಣ್ಣ ಕೈಗಾರಕೆ ಮಂತ್ರಿಯಾಗಿ ಯಾವ ಜಿಲ್ಲೆಗೂ ಹೋಗಿಲ್ಲ ಸ್ವಂತ ಜಿಲ್ಲೆಗೂ ಎನು ಮಾಡಿಲ್ಲ,
ರಮೇಶ್ ನಮ್ಮ ಲೀಡರ್ ಅಂತ ನಾವು ಸಹ ಕಾಂಗ್ರೇಸ್ ಪಕ್ಷದಲ್ಲಿ ಇದ್ದಾಗ ನಾವು ಸಹಿಸಿಕೊಂಡ್ವಿ, ಎಂದರು
ಸಿ ಎಂ ಆಗಬೇಕು ಪಿ ಎಂ ಆಗಬೇಕು ಅಂತ ಎಲ್ಲರಿಗೂ ಆಸೆ ಇರುತ್ತೆ,
ಆದರೆ ಇವರು ಕ್ಯಾಬಿನೇಟ್ ಮೀಟಿಂಗ್ ಬರಲ್ಲ, ಸದನಕ್ಕೆ ಬರೋಲ್ ಎಂದರೆ ಹ್ಯಾಗೆ,
ಇಂಥವರು ಉಪಮುಖ್ಯಮಂತ್ರಿ ಆಗೋಕೆ ಹೊರಟಿರುವ ಉದ್ದೇಶ ಎನು ಎಂದು ಪ್ರಶ್ನೆ ಮಾಡಿದ ದಿನೇಶ್,
ರಮೇಶ್ರಂತಹ ರಾಜಕಾರಣಿಗಳನ್ನು ಜನ ತಿರಸ್ಕರಿಸಬೇಕು,ಎಂದು ದಿನೇಶ್ ಕರೆ ನೀಡಿದರು