ಕೇವಲ ಡಿಕೆ ಶಿವಕುಮಾರ್ ಅವರನ್ನು ಅಭಿನಂಧಿಸಿ ,ಸತೀಶ್ ಸಲೀಂ ಅವರನ್ನು ಮರೆತ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ- ಇಂದು ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅದ್ಯಕ್ಷರಾಗಿ ಸತೀಶ್ ಜಾರಕಿಹೊಳಿ,ಖಂಡ್ರೆ, ಮತ್ತು ಸಲೀಂ ಅಹ್ಮದ ಅವರು ಕೆಪಿಸಿಸಿ ಅದ್ಯಕ್ಷರಾಗಿ ನೇಮಕಗೊಂಡರೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕೇವಲ ಡಿ ಕೆ ಶಿವಕುಮಾರ್ ಅವರನ್ನು ಅಭಿನಂದಿಸಿದ್ದಾರೆ
ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಅದ್ಯಕ್ಷರಾಗಿ ನೇಮಕವಾದ ಮೇಲೆ ಡಿಕೆಶಿ ಟ್ರಬಲ್ ಶೂಟರ್, ಎಂದು ಲಕ್ಷ್ಮೀ ಹೆಬ್ಬಾಳಕರ ಫೇಸ್ ಬುಕ್ ನಲ್ಲಿ ಹಾಡಿ ಹೊಗಳಿದ್ದು ರಾಜ್ಯದ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ,ಮತ್ತು ಮುಸ್ಲೀಂ ಸಮಾಜದ ನಾಯಕ ಸಲೀಂ ಅಹ್ಮದ ಅವರನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅಭಿನಂಧಿಸುವ ಅವರಿಗೆ ಗೌರವ ಕೊಡುವ ಮನಸ್ಸು ಮಾಡಲಿಲ್ಲ ಅನ್ನೋದು ಅವರ ಪೇಸ್ ಬುಕ್ ಪೋಸ್ಟ ಹೇಳುತ್ತದೆ
ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅದ್ಯಕ್ಷರಾದ ಮೇಲೆ ಕಾಂಗ್ರೆಸ್ ಶಾಸಕರೇ ಕೇವಲ ಅದ್ಯಕ್ಷರಿಗೆ ಗೌರವ ಕೊಡಬೇಕಾದರೆ ಕಾರ್ಯಾದ್ಯಕ್ಷ ಸ್ಥಾನ ಯಾರುಗೆ ಬೇಕು ಒಬ್ಬ ಕಾಂಗ್ರೆಸ್ ಶಾಸಕಿ ಮಾಜಿ ಕೆಪಿಸಿಸಿ ಮಹಿಳಾ ಅದ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರೇ ಕಾರ್ಯಾದ್ಯಕ್ಷರಿಗೆ ಅಗೌರವ ತೋರಿಸಿದ್ದು ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಾದ್ಯಕ್ಷರಿಗೆ ಬೆಲೆ ಇಲ್ಲ ಎನ್ನುವ ಸಂದೇಶ ರವಾನೆ ಆಗುತ್ತದೆ
ಲಕ್ಷ್ಮೀ ಹೆಬ್ಬಾಳಕರ ಅವರು ಪೇಸ್ ಬುಕ್ ನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಮಾಡಿದ ಗುಣಗಾಣ ಮತ್ತು ಅಭಿನಂಧನೆ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶಾಸಕರೇ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದು ಈ ಕುರಿತು ಡಿಕೆ ಶಿವಕುಮಾರ್ ಅವರೇ ಉತ್ತರಿಸಬೇಕು ಯಾಕಂದ್ರೆ ಕ್ರಮ ಕೈಗೊಳ್ಳುವ ಅಧಿಕಾರ ಅವರಿಗೆ ಮಾತ್ರ ಇದೆ. ಪಕ್ಷದ ಶಿಷ್ಟಾಚಾರವನ್ನು ಶಿಷ್ಟಾಚಾರಿಗಳು ಮಾತ್ರ ಪಾಲಿಸುತ್ತಾರೆ ಬಿಡಿ ಶಿಷ್ಟಾಚಾರ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿ ಇದೆಯೋ ಇಲ್ಲವೋ ಅನ್ನೋದು ಗೊತ್ತಿಲ್ಲ .
ಲಕ್ಷ್ಮೀ ಹೆಬ್ಬಾಳಕರ ಅವರು ವಯಕ್ತಿಕ ವಾಗಿ ಈರೀತಿ ಅಭಿನಂಧನೆ ಸಲ್ಲಿಸಿರಬಹುದು ,ಆದ್ರೆ ಅವರು ಮಾಜಿ ಕೆಪಿಸಿಸಿ ಅದ್ಯಕ್ಷರಾಗಿದ್ದು,ಹಾಲಿ ಶಾಸಕರಾಗಿದ್ದು ಬೆಳಗಾವಿ ಜಿಲ್ಲೆಯವರಾಗಿದ್ದು ಬೆಳಗಾವಿ ಜಿಲ್ಲೆಯ ಒಬ್ಬ ಪ್ರಭಾವಿ ನಾಯಕ ಕಾರ್ಯಾದ್ಯಕ್ಷರಾಗಿ ನೇಮಕರಾಗಿದ್ದು ಅವರ ಹೆಸರನ್ನೂ ಪ್ರಸ್ತಾಪಿಸದೇ ಇರುವದು ಮುಸ್ಲೀಂ ನಾಯಕ ಸಲೀಂ ಅಹ್ಮದ ಅವರು ಲಕ್ಷ್ಮೀ ಹೆಬ್ಬಾಳಕರ ಅವರ ಲೆಕ್ಕಕ್ಕಿಲ್ಲ ಅನ್ನೋದು ಸ್ಪಷ್ಠವಾಗುತ್ತದೆ