ವಿಘ್ನೇಶ್ವರನ ಆಶಿರ್ವಾದ ಪಡೆದ ಡಿಕೆಶಿ- ಲಕ್ಷ್ಮೀ

ಬೆಳಗಾವಿ-ಬೆಳಗಾವಿಯ ಹಿಂಡಲಗಾ ಗಣಪತಿ ಮಂದಿರಕ್ಕೆ ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿ ವಿಘ್ನೇಶ್ವರನ ಆಶಿರ್ವಾದ ಪಡೆದರು.

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಹಲವಾರುಜನ ಕಾಂಗ್ರೆಸ್ ಮುಖಂಡರು ಡಿಕೆ ಶಿವಕುಮಾರ್ ಅವರ ಜೊತೆ ಶ್ರೀಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂಧರ್ಬದಲ್ಲಿ ಮಾದ್ಯಮಗಳ ಮಾತನಾಡಿದ ಡಿಕೆಶಿ,ಎಲ್ಲ ವಿಘ್ನಗಳನ್ನು ನಿವಾರಣೆ ಮಾಡುವ ದೇವರು ವಿನಾಯಕ ರಾಜ್ಯ, ರಾಷ್ಟ್ರದಲ್ಲಿ ವಿಘ್ನ ನಿವಾರಣೆಯಾಗಲಿ ಅಂತಾ ಪೂಜೆ ಮಾಡಿದ್ದೇವೆ ನಮ್ಮ ಅಭ್ಯರ್ಥಿ ಗೆಲ್ಲಲಿ ಅಂತಾ ಪೂಜೆ ಮಾಡಿದ್ದೇವೆ.ವಿಜಯಕ್ಕೆ ನಾಯಕ ವಿನಾಯಕಅಂಥ ದೇವರಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ಜನರಿಗೆ ದೊಡ್ಡ ತೊಂದರೆಯಾಗಿದೆ ಬೆಲೆ ಏರಿಕೆಯಾಗಿ ತೊಂದರೆಯಾಗಿದೆ ಎಲ್ಲ ವರ್ಗದ ಜನರು ಬೆಲೆಯೇರಿಕೆಯಿಂದ ಸಂಕಷ್ಟದಲ್ಲಿದ್ದಾರೆ ಈ ಸಂಕಷ್ಟ ನಿವಾರಣೆಯಾಗಬೇಕಿದೆ.ಅದನ್ನೇ ದೇವರಲ್ಲಿ ಪ್ರಾರ್ಥಿಸಿಕೊಂಡಿರುವೆ ಉಪ ಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಿಗಲಿ ಅಂತಾ ಪ್ರಾರ್ಥಿಸಿದ್ದೇನೆ.

ವಿನಾಯಕ ಹಾಗೂ ಜನರಲ್ಲಿ ಪ್ರಾರ್ಥಿಸಿದ್ದೇನೆ ದೇಶದಲ್ಲಿ ಮಾಧ್ಯಮ ಮತ್ತು ಪ್ರಜಾಪ್ರಭುತ್ವ ಎರಡೂ ಉಳಿಯಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ರು

Check Also

ಬೈಕ್ ಮೇಲೆ ಹೋಗುವಾಗ ಹಣಕಾಸಿನ ಜಗಳ ಕೊಲೆಯಲ್ಲಿ ಅಂತ್ಯ

ಯಮಕನಮರ್ಡಿ- ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಅಂಕಲಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ …

Leave a Reply

Your email address will not be published. Required fields are marked *