Breaking News

ಪ್ರಲ್ಹಾದ್ ಜೋಶಿ ಸೈಡ್ ಆ್ಯಕ್ಟರ್,ಸಿದ್ರಾಮಯ್ಯ ಲೇವಡಿ

ಬೆಳಗಾವಿ-ಮೋದಿ ಸರ್ಕಾರದಲ್ಲಿ ಏನು .ನಡೆಯುತ್ತಿದೆ,ಬೆಲೆ ಏರಿಕೆಯಿಂದ ಜನರಿಗೆ ಎಷ್ಟು ತೊಂದರೆ ಆಗಿದೆ,ಯಾವುದು ಬಸ್ ಸ್ಟ್ಯಾಂಡ್ ಆಗಿದೆ ಪಾಪ ಪ್ರಲ್ಹಾದ್ ಜೋಶಿ ಅವರಿಗೆ ಗೊತ್ತಿಲ್ಲ,ಮೋದಿ ಸರ್ಕಾರದಲ್ಲಿ ಜೋಶಿ ಒಬ್ನ ಸೈಡ್ ಆ್ಯಕ್ಟರ್ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಲೇವಡಿ ಮಾಡಿದ್ದಾರೆ‌.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಯಡಿಯೂರಪ್ಪ ಸರಕಾರ ಹೇಡಿ ಸರಕಾರ ಎಂದು ಕಿಡಿಕಾರಿದ ಸಿದ್ದರಾಮಯ್ಯ,ಬೆಳಗಾವಿ ಚುಣಾವಣೆ ನೂರಕ್ಕೆ‌ ನೂರು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೆ ಎಂದರು.

ಕೇಂದ್ರದ ಮೋದಿ‌ ಸರಕಾರ ದೇಶವನ್ನು ಹಾಳು ಮಾಡಿದ್ದಾರೆ,ಬಡವರು, ರೈತರು ಬದುಕಲು ಸಾಧ್ಯವಾಗುತ್ತಿಲ್ಲ,ತೈಲಬೆಲೆ ಹೆಚ್ಚಳ ವಾಗಿದೆ, ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಸರಕಾರನೂ ಕೂಡಾ ಎಲ್ಲ ವಿಚಾರಗಳಲ್ಲಿ ವಿಫಲವಾಗಿದೆ ಎಂದು ಸಿದ್ರಾಮಯ್ತ ಆರೋಪಿಸಿದರು.

ಕೇಂದ್ರ ಸರಕಾರ ಸವಾರ್ಧಿಕಾರ ಧೋರಣೆ ಮಾಡುತ್ತಿದೆ, ಕೇಂದ್ರದಿಂದ ರಾಜ್ಯಕ್ಕೆ ಬರೋ ಗ್ರ‌್ಯಾಂಟ್ ಕಡಿಮೆ‌ಯಾಗಿದೆ,ಯಡಿಯೂರಪ್ಪ ಸರಕಾರ ಹೇಡಿ ಸರಕಾರ,ಬಿಜೆಪಿ ಸಂಸದರು ಕೇಂದ್ರ ಸರಕಾರದ ಗುಲಾಮರು,ಎಂದರು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಮೇಶ್ ಜಾರಕಿಹೊಳಿ‌ ಬೆಂಬಲಿಗರು ಗುಂಡಾಗಿರಿ ಮಾಡಿದ್ದಾರೆ,ಗುಂಡಾಗಿರಿ ಮಾಡೋದು ಸರಿ ಅಲ್ಲ,ಪ್ರಜಾಪ್ರಭುತ್ವ ವಿರೋಧ ನಿತಿಯನ್ನ ರಮೇಶ ಜಾರಕಿಹೋಳಿ ಬೆಂಬಲಿಗರು ಮಾಡುತ್ತಿದ್ದಾರೆ.ಎಂದುಬೆಳಗಾವಿಯಲ್ಲಿ ಸಿದ್ದರಾಮಯ್ಯ ಹೇಳಿದರು.

ಸಿಡಿ ಲೇಡಿ ನನಗೆ ರಕ್ಷಣೆ ಕೊಡಿ ಎಂದು ಸಿದ್ರಾಮಯ್ಯನವರಲ್ಲಿ ಮನವಿ ಮಾಡಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು

ನಾನು ರಕ್ಷಣೆ ಕೊಡೊದಲ್ಲ ಸರಕಾರದಿಂದ ರಕ್ಷಣೆ ಕೊಡಸಲಿ ಎಂದು ಕೇಳಿದ್ದಾಳೆ,ಯಡಿಯೂರಪ್ಪ ಅವರು ಇದರ ಬಗ್ಗೆ ಮಾತನಾಡಬೇಕು,ದೇಶತುಂಬಾ ಚರ್ಚೆ ನಡಿತಾ ಇದೆ, ಅವರು ಮಾತನಾಡಬೇಕು ಈ ಬಗ್ಗೆ,ಅವರು ಮುಖ್ಯಮಂತ್ರಿ ಯಾಗಿದ್ದಾರೆ ಎಂದು ಸಿದ್ರಾಮಯ್ಯ ಹೇಳಿದರು.

Check Also

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ …

Leave a Reply

Your email address will not be published. Required fields are marked *