Breaking News

ತಾಂತ್ರಿಕ ತೊಂದರೆ ನಿವಾರಣೆಯ ಬಳಿಕ ಕಳಸಾ ಬಂಡೂರಿ ಕಾಮಗಾರಿಗೆ ಚಾಲನೆ- ಡಿಕೆಶಿ

ಬೆಳಗಾವಿ

ಸುಪ್ರೀಂ ಕೋರ್ಟ್ ತಡೆಯಾಜ್ಞೆ, ಗೆಜೆಟ್ ನೋಟಿಪಿಕೇಶನ್, ಕೇಂದ್ರ ಪರಿಸರ ಪೀಠದಿಂದ ನಿರಾಕ್ಷೇಪಣೆ ಪತ್ರ ಸಿಕ್ಕರೇ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಮಾಡಲಾಗುವುದು ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ಬುಧವಾರ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ಇಲ್ಲಿನ ಕಳಸಾ ನಾಲಾ ವೀಕ್ಷಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು.ಮಹದಾಯಿ ಹೋರಾಟ ಜಾರಿಗೆ ರಾಜ್ಯ ಸರಕಾರ ಪರವಾಗಿ ನಿಂತ ರಾಜ್ಯದ ರೈತರು, ಸಂಘಗಳಿಗೆ ನಾನು ಋಣಿಯಾಗಿದ್ದೇನೆ ಎಂದರು.

ಮಹದಾಯಿ ನ್ಯಾಯಾಧೀಕರಣ ತೀರ್ಪಿನಿಂದ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯವಾಗಿದೆ‌. ಇದೊಂದೆ ತೀರ್ಪಿನಿಂದ ದೊಡ್ಡ ಖುಷಿಯಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ.

ತೀರ್ಪಿನ ಅನ್ವಯ ನಮಗೆ ಬಂದಿರುವ ನೀರಿನ ಲಾಭ ಈ ಭಾಗದ ರೈತರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.

ಬೇರೆ ಕೆಲಸ ನಿಂತರೂ, ಮಹದಾಯಿ ಯೋಜನೆ ನಿಲ್ಲಿಸುವುದಿಲ್ಲ. ಆದಷ್ಟು ಬೇಗ ಕಾಮಗಾರಿಯನ್ನು ಆರಂಭಿಸಲಾಗುವುದು.

ಕಳಸಾ‌ ಮತ್ತು‌ ಬಂಡೂರಿಗೆ 431 ಹೆಕ್ಟೇರ್ ಜಮೀನು ಬೇಕು, 191 ಖಾಸಗಿ ಜಮೀನು ಅವಶ್ಯಕತೆ ಇದೆ. ಖಾಸಗಿ ಜಮೀನು ವಶಪಡಿಸಿಕೊಳ್ಳಲು ಸಿದ್ಧತೆ ನಡೆಯುತ್ತಿದೆ.
ರಾಜ್ಯದ ಹಿತ‌ಕಾಪಾಡಲು ಸರಕಾರ ಬದ್ಧವಾಗಿದೆ.

ನ್ಯಾಯಾಲಯಕ್ಕೆ ನಾವು ಗೌರವ ಕೋಡುತ್ತೇನೆ.ಆದರೆ 148 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತಿದೆ. ಈ ನೀರಿನ ಪ್ರಯೋಜನೆ ಈ ಭಾಗದ ರೈತರಿಗೆ ದೊರಕಿಸಿಕೊಡುವ ಏಕೈಕ ಉದ್ದೇಶ ಸರಕಾರದ್ದಾಗಿದೆ.

ಗೋವಾದ ಸಮುದ್ರ ಸೇರಿ ಪೋಲಾಗುತ್ತಿರುವ ನೀರಿನಲ್ಲಿ ನಮಗೂ ಹಕ್ಕಿದೆ. ನಮ್ಮ ಈ ನೀರಿನ ಹಕ್ಕು ಪಡೆಯಲು ಹೋರಾಟ ಮುಂದುವರೆಯಲಿದೆ ಎಂದರು.

ನಾವು ಪರಿಸರ ಪ್ರೇಮಿಗಳು, ಯೋಜನೆ ಜಾರಿಗೆಗೆ ಪರಿಸರ ಪ್ರಮಿಗಳ ವಿರೋಧ ಇಲ್ಲ. ಪರಿಸರ ಸಂರಕ್ಷಣೆಗೆ ನಾವು ಬದ್ಧ ಇದ್ದೇವೆ.

ಈಗಾಗಲೇ ಕಳಸಾ- ಬಂಡೂರಿ ಕಾಮಗಾರಿಗೆ ರಾಜ್ಯ ಸರಕಾರ 250 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ನಾಲೆಯ ಸರ್ವೆ ಮಾಡಲು 50 ಲಕ್ಷ ರು.ವೆಚ್ಚ ಮಾಡಿದೆ. ಇನ್ನೂ ಎಷ್ಟು ಕೋಟಿ ರು. ಬೇಕಾದರೂ ಸರಕಾರ ಖರ್ಚು ಮಾಡಲು ಸನ್ನದ್ದವಾಗಿದೆ ಎಂದರು.
——————–

ಮಹದಾಯಿ ನೀರು ಕುಡಿದ ಡಿಕೆಶಿ

ಖಾನಾಪುರ ತಾಲೂಕಿನ ಕಳಸಾ ನಾಲಾ‌ ವೀಕ್ಷಣೆ ಮಾಡಿದ ಸಚಿವ ಡಿ.ಕೆ.ಶಿವಕುಮಾರ ಮಹದಾಯಿ ನದಿ‌ ನೀರು ಕುಡಿದರು.

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *