ಬೆಳಗಾವಿ- ನಾಯಿ ಕಚ್ಚಿದ್ರೆ ಚಿಕಿತ್ಸೆಗೆ ಐದು ಸಾವಿರ, ನಾಯಿ ಕಚ್ಚಿ ಸತ್ತರೆ ಮೃತರ ಕುಟುಂಬಸ್ಥರಿಗೆ ಐದು ಲಕ್ಷ ರೂ ಪರಿಹಾರ ಕೊಡಬೇಕು ಎನ್ನುವ ಆದೇಶವನ್ನು ರಾಜ್ಯ ಸರ್ಕಾರ 2023 ರಲ್ಲಿಯೇ ಜಾರಿ ಮಾಡಿದ್ರೂ ಬೆಳಗಾವಿ ಮಹಾನಗರ ಪಾಲಿಕೆ ಸೇರಿದಂತೆ ಬೆಳಗಾವಿ ಜಿಲ್ಲೆಯ ಯಾವುದೇ ನಗರಸಭೆ ಪುರಸಭೆ ಪಟ್ಟಣ ಪಂಚಾಯ್ತಿಗಳು ಇನ್ನುವರೆಗೆ ಒಬ್ಬರಿಗೂ ಪರಿಹಾರ ನೀಡಿಲ್ಲ.
ಬೆಳಗಾವಿ ಮಹಾನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ ನೂರಾರು ಜನರಿಗೆ ಬೀದಿ ನಾಯಿಗಳು ಕಚ್ಚಿವೆ ಆದ್ರೆ ಇದುವರೆ ನಾಯಿ ಕಚ್ಚಿದವರಿಗೆ ಸಿಗಬೇಕಾಗಿದ್ದ ತಲಾ ಐದು ಸಾವಿರ ಪರಿಹಾರ ಒಬ್ಬರಿಗೂ ಸಿಕ್ಕಿಲ್ಲ.
ಸರ್ಕಾರ ಪರಿಹಾರ ನೀಡುವಂತೆ 2023 ರಲ್ಲಿಯೇ ಆದೇಶ ಜಾರಿ ಮಾಡಿದೆ.ಪರಿಹಾರದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ ಒಂದು ವರ್ಷದ ಹಿಂದೆ ಜಾರಿಯಾಗಿರುವ ಸರ್ಕಾರದ ಆದೇಶ ಬೆಳಗಾವಿ ಜಿಲ್ಲೆಯಲ್ಲಿ ಅನುಷ್ಠಾನ ಆಗದೇ ಇರುವದು ದುರ್ದೈದ ಸಂಗತಿಯಾಗಿದೆ.ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಪರಿಸ್ಥಿತಿ ಬೆಳಗಾವಿ ಜಿಕ್ಲೆಯಲ್ಲಿದೆ.