Breaking News

ವಂಡರ್ಫುಲ್ ಕ್ಯಾಚ್….ರೋಚಕ ಮ್ಯಾಚ್…..ಕಪ್ ನಮ್ದೇ…!

ಬ್ರಿಡ್ಜ್‌ಟೌನ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ಎರಡನೇ ಟಿ20 ವಿಶ್ವಕಪ್ ಅನ್ನು ಗೆದ್ದು ಬೀಗಿದೆ.

ಬ್ರಿಡ್ಜ್‌ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ವಿರಾಟ್ ಕೊಹ್ಲಿ 76 ರನ್ ಹಾಗೂ ಅಕ್ಷರ್ ಪಟೇಲ್ 47 ರನ್ ಗಳ ನೆರವಿನಿಂದ 176 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಷ್ಟೇ ಶಕ್ತವಾಗಿದ್ದು 7 ರನ್ ಗಳಿಂದ ಸೋಲು ಕಂಡಿದೆ.

ದಕ್ಷಿಣ ಆಫ್ರಿಕಾ ಪರ ಹೆಂಡ್ರಿಕ್ಸ್ 4 ರನ್ ಗಳಿಸಿ ಔಟಾದರೆ ಮಾರ್ಕ್ರಾಮ್ ಸಹ 4 ರನ್ ಗಳಿಸಿ ಔಟಾದರು. ನಂತರ ಬಂದ ಸ್ಟಬ್ಸ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದು 31 ರನ್ ಬಾರಿಸಿ ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಇನ್ನು ಡಿಕಾಕ್ 39 ರನ್ ಗಳಿಸಿದ್ದಾಗ ಅರ್ಷ ದೀಪ್ ಔಟ್ ಮಾಡಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಕ್ಲಾಸೆನ್ 52 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿಟ್ಟರು. ಆದರೆ ಪಂದ್ಯ ಸೋತಿದೆ. ಭಾರತದ ಪರ ಹಾರ್ದಿಕ್ ಪಾಂಡ್ಯ 3, ಅರ್ಷ್ ದೀಪ್ ಸಿಂಗ್ಮತ್ತು ಜಸ್ ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ ಅಕ್ಷರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.

ಮೊದಲ ಓವರ್ ನಲ್ಲಿ 15 ರನ್ ಗಳ ಭರ್ಜರಿ ಆರಂಭ ಪಡೆದರೂ ಭಾರತಕ್ಕೆ ಎರಡನೇ ಓವರ್ ನಲ್ಲಿ ಕೇಶವ್ ಮಹಾರಾಜ್ ಆಘಾತ ನೀಡಿದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮಹಾರಾಜ್ ಒಂದೇ ಓವರ್ ನಲ್ಲಿ 9 ರನ್ ಗಳಿಸಿದ್ದ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ರನ್ನು ಶೂನ್ಯಕ್ಕೆ ಔಟ್ ಮಾಡಿದರು. ನಂತರ ತಾಳ್ಮೆಯ ಆಟವಾಡಿದ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ 106 ರನ್ ಗಳ ಜೊತೆಯಾಟ ನೀಡಿದರು.

47 ರನ್ ಗಳಿಸಿದ್ದ ಅಕ್ಷರ್ ಪಟೇಲ್ ರನ್ ಔಟ್ ಗೆ ಬಲಿಯಾದರು. ನಂತರ ಬಂದ ಶಿವಂ ದುಬೆ 27 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ ಮತ್ತು ನಾರ್ಟ್ಜೆ ತಲಾ 2 ವಿಕೆಟ್ ಪಡೆದಿದ್ದಾರೆ.

Check Also

ಮೀಸಲಾತಿಗಾಗಿ ಹೆಬ್ಬಾಳಕರ್ ಮನೆಯಲ್ಲಿ ಆಗ್ರಹ ಪತ್ರ…

ಬೆಳಗಾವಿ ಕೂಡಲಸಂಗಮ ಮಹಾಪೀಠದ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ನೇತ್ರತ್ವದಲ್ಲಿ ನಡೆಯುತ್ತಿರುವ ಶಾಸಕರುಗಳ ಮನೆಯಲ್ಲಿ ಪಂಚಮಸಾಲಿ …

Leave a Reply

Your email address will not be published. Required fields are marked *