Breaking News

ಅಧಿಕಾರ ಇಲ್ಲದಿದ್ದರೂ ಜನಸೇವೆ ಹೇಗೆ ಮಾಡಬಹುದು ಅನ್ನೋದನ್ನು ಇವರನ್ನು ನೋಡಿ ಕಲಿಯಬೇಕು..!!

ಬೆಳಗಾವಿ- ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ತಾಲ್ಲೂಕಿನ ಬಿಜೆಪಿ ಉಸ್ತುವಾರಿ ಹುದ್ದೆ ಪಡೆದ ತಕ್ಷಣ ತಾಲ್ಲೂಕಿನಲ್ಲಿ ಜನ ಸ್ಪಂದನ ಕಚೇರಿ ಆರಂಭಿಸಿ ಈ ಕ್ಷೇತ್ರದ ಜನರ ಜೊತೆ ಬೆರೆತು,ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಅವರು ಖಾನಾಪೂರ ಕ್ಷೇತ್ರದ ಮನೆಯ ಮಗಳಾಗಿ ಸೇವೆ ಮಾಡುತ್ತಿದ್ದಾರೆ.

ಡಾ.ಸೋನಾಲಿ ಸರ್ನೋಬತ್ ಅವರ ಹತ್ತಿರ ಯಾವುದೇ ಅಧಿಕಾರ ಇಲ್ಲ, ಆದ್ರೆ ಅವರ ಪಕ್ಷ ಅಧಿಕಾರದಲ್ಲಿದ್ದು ಖಾನಾಪೂರ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಡಾ‌.ಸೋನಾಲಿ ಯಶಸ್ವಿಯಾಗಿದ್ದಾರೆ.

ಖಾನಾಪೂರ ತಾಲ್ಲೂಕಿನ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಿಗೆ,ರೇಷನ್ ಅಂಗಡಿ,ಬಸ್ ಸೌಲಭ್ಯ, ಇನ್ನೀತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ವಿಚಾರದಲ್ಲಿ ಸಂಭಂದಿಸಿದ ಸಚಿವರನ್ನು ಭೇಟಿಯಾಗಿ ಹತ್ತು ಹಲವು ಸೌಕರ್ಯಗಳನ್ನು ಒದಗಿಸುವ ಮೂಲಕ ಡಾ. ಸೋನಾಲಿ ಖಾನಾಪೂರ ಕ್ಷೇತ್ರದ ಜನರ ಧ್ವನಿಯಾಗಿ ಸೇವೆ ಮಾಡುತ್ತಿದ್ದಾರೆ.

ಖಾನಾಪೂರ ಕ್ಷೇತ್ರದಲ್ಲಿ ಯಾವುದೇ ರೀತಿಯ ಘಟನೆಗಳು ಸಂಭವಿಸಿ ಸಾವು,ನೋವು ಆದಲ್ಲಿ ತಕ್ಷಣ ಅಲ್ಲಿಗೆ ಧಾವಿಸುವ ಡಾ.ಸೋನಾಲಿ ಸರ್ನೋಬತ್ ತಮ್ಮ ನಿಯತಿ ಫೌಂಡೇಶನ್ ಮೂಲಕ ವ್ಯಯಕ್ತಿಕವಾಗಿ ಸ್ಥಳದಲ್ಲೇ ಆರ್ಥಿಕ ಸಹಾಯ ಮಾಡಿರುವ ಉಧಾಹರಣೆಗಳು ಸಾಕಷ್ಟಿವೆ.ಖಾನಾಪೂರ ತಾಲ್ಲೂಕಿನ ಪ್ರತಿಭಾವಂತ ಬಡ ವಿಧ್ಯಾರ್ಥಿಗಳಿಗೆ ಹಲವಾರು ರೀತಿಯಲ್ಲಿ ಪೌಂಡೇಶನ್ ಮೂಲಕ ಸಹಾಯ ಮಾಡುತ್ತಿದ್ದು,ಡಾ‌ಸೋನಾಲಿ ಅವರ ಜನ ಸ್ಪಂದನ ಕಚೇರಿ ಖಾನಾಪೂರ ಕ್ಷೇತ್ರದ ಜನರ ಪಾಲಿಗೆ ತವರು ಮನೆ ಆಗಿದೆ.ಈ ವಿಚಾರದಲ್ಲಿ ಯಾವುದೇ ಅನುಮಾನ ಇಲ್ಲ.

ಡಾ.ಸೋನಾಲಿ ಸರ್ನೋಬತ್ ಅವರು ಖಾನಾಪೂರ ಕ್ಷೇತ್ರದ ವಿಧ್ಯಾರ್ಥಿಗಳ ಬೆನ್ನಿಗೆ ನಿಂತಿದ್ದಾರೆ.ಈ ಕ್ಷೇತ್ರದ ಹಲವಾರು ಹಳ್ಳಿಗಳಿಗೆ ಬಸ್ ಗಳು ಹೋಗುತ್ತಿಲ್ಲ.ಸಾವಿರಾರು ವಿಧ್ಯಾರ್ಥಿಗಳು ಬಸ್ ಗಾಗಿ ಪರದಾಡುತ್ತಿರುವದನ್ನು ಗಮನಿಸಿರುವ ಡಾ. ಸೋನಾಲಿ ಬುಧವಾರ ಸುವರ್ಣ ವಿಧಾನಸೌಧದಲ್ಲಿ ಸಾರಿಗೆ ಸಚಿವ ಶ್ರೀರಾಮಲು ಅವರನ್ನು ಭೇಟಿಯಾಗಿ ಖಾನಾಪೂರ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದು, ಇದಕ್ಕೆ ಸಾರಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ‌.

ವಿವಿಧ ಸಾಮಾಜಿಕ,ಶೈಕ್ಷಣಿಕ,ಹಲವಾರು ಮಾನವೀಯ ಕಾರ್ಯಗಳನ್ನು ಮಾಡುತ್ತಿರುವ ಡಾ.ಸೋನಾಲಿ ಖಾನಾಪೂರ ಕ್ಷೇತ್ರದ ಜನರ ಮೆಚ್ವುಗೆ ಗಳಿಸುವಲ್ಲಿ ಯಶಸ್ವಿಯಾಗುವ ಜೊತೆಗೆ ರಾಜ್ಯದ ಬಿಜೆಪಿ ನಾಯಕರ ಗಮನ ಸೆಳೆದಿದ್ದಾರೆ.

ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಜನರಿಗೆ ಯಾವ ರೀತಿ ಸಹಾಯ ಮಾಡಬಹುದು,ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಕ್ಷೇತ್ರದ ಜನರಿಗೆ ಯಾವ ರೀತಿಯಲ್ಲಿ ಸವಲತ್ತುಗಳನ್ನು ಒದಗಿಸಿ ಕೊಡಬಹುದು ಎನ್ನುವ ವಿಚಾರದಲ್ಲಿ ಡಾ. ಸೋನಾಲಿ ಸರ್ನೋಬತ್ ಮಾದರಿಯಾಗಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *