Breaking News

ಡ್ರಾಯ್ ಡೇ..ದಿನ ಮಾರಾಟ ಮಾಡಲು ತಂದ,ಗೋವಾ ಸಾರಾಯಿ ಬಾಟಲ್ ಸೀಜ್…!!!

ಬೆಳಗಾವಿ-ಬೆಳಗಾವಿ ನಗರ ಸಿಸಿಬಿ ಪೊಲೀಸರ ದಾಳಿ; ಗೋವಾ ರಾಜ್ಯದಿಂದ ಅಕ್ರಮವಾಗಿ ಸಾರಾಯಿ ತಂದು ಮಾರಾಟ ಮಾಡುತ್ತಿದ್ದವರ ಜಾಲವನ್ನು ಪತ್ತೆ ಮಾಡಿದ್ದಾರೆ.ಖಚಿತ ಮಾಹಿತಿ ಆದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ನಿಂಗನಗೌಡ ಪಾಟೀಲ್ ರವರ ನೇತೃತ್ವದ ತಂಡ ಬೆಳಗಾವಿ ತಾಲೂಕಿನ ಬಾದರಾವಾಡಿ ನಿವಾಸಿ *ಲಕ್ಷ್ಮಣ @ಬಾಳ್ಯಾ ತಂದೆ ಸಾತೆರಿ ಪಾಟೀಲ* ಇವನ ಕಾರಿನ ಮೇಲೆ ದಾಳಿ ಮಾಡಿದೆ.

ಗೋವಾದಿಂದ ಅಕ್ರಮವಾಗಿ ವಿವಿಧ ಬ್ರಾಂಡ್ ನ ಸರಾಯಿ ಬಾಟಲಿಗಳನ್ನು ತೆಗೆದುಕೊಂಡು ಬಂದು ಕಾರ್ ಡಿಕ್ಕಿಯಲ್ಲಿರಿಸಿಕೊಂಡು ತನ್ನ ಮಕ್ಕಳ ಮೂಲಕ ಕರ್ಲೆ ಗ್ರಾಮದಲ್ಲಿ ಮಾರಾಟ ಮಾಡುತ್ತಿದ್ದಾಗ ದಾಳಿ ಕೈಗೊಂಡು,. ಸಾಹಿಲ ಲಕ್ಷ್ಮಣ ಪಾಟೀಲ, ವಯಸ್ಸು 19 ವರ್ಷ ಸಾ: ಬಾದರವಾಡಿ, ತಾ: ಬೆಳಗಾವಿ* ಅಪ್ರಾಪ್ತ ಬಾಲಕ,ಇವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಮಾತ್ರ ಇರುವ 189 ಸರಾಯಿ ಬಾಟಲಿಗಳು, 108 ಲೀ ದಷ್ಟು ಮದ್ಯ ಟೊಯೊಟಾ ಇಟಿಯೋಸ್ ಕಾರು,. ಮೋಪೆಡ್ ಬೈಕ್ ವಶಪಡಿಸಿಕೊಂಡಿದ್ದಾರೆ.

ಈಗಾಗಲೇ ಅಕ್ರಮ ಸರಾಯಿ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ *ಲಕ್ಷ್ಮಣ ಸಾತೇರಿ ಪಾಟೀಲ,ಸಾ: ಬಾದರವಾಡಿ* ಇವನು ಗೋವಾ ರಾಜ್ಯದಿಂದ ಅಕ್ರಮವಾಗಿ ಸರಾಯಿ ಬಾಟಲಿಗಳನ್ನು ತೆಗೆದುಕೊಂಡು ಬಂದು ತಾನು ಮತ್ತು ತನ್ನ ಮಕ್ಕಳ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಕಂಡು ಬಂದಿದ್ದು, ಈ ಸಂಬಂಧವಾಗಿ ಪಿಐ, ಸಿಸಿಬಿ ರವರು ನೀಡಿದ ಮೇರೆಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಮುಂದುವರೆದಿರುತ್ತದೆ.

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *