Breaking News

ಹಂಡಿಬಾಗ್ ಕುಟುಂಬಕ್ಕೆ ನಾಲ್ಕು ಲಕ್ಷ ರೂ ಸಹಾಯ

ಬೆಳಗಾವಿ-ಆತ್ಮಹತ್ಯೆಗೆ ಶರಣಾದ ಡಿಎಸ್ಪಿ ದಿ. ಕಲ್ಲಪ್ಪ ಬಸಪ್ಪ ಹಂಡಿಬಾಗ್ ತಂದೆ ಬಸಪ್ಪ ಹಾಗೂ ತಾಯಿ ಬಸಮ್ಮ ಅವರಿಗೆ ಹಿಂದುಳಿದ ಜಾತಿಗಳ ಅಧಿಕಾರಿಗಳ ಅಧಿಕಾರಿಗಳ ಸಂಘದ ವತಿಯಿಂದ ೩ ಲಕ್ಷ ಧನ ಸಹಾಯ ನೀಡಲಾಯಿತು. ಅಲ್ಲದೇ ಕಲ್ಲಪ್ಪ ಅವರ ಪತ್ನಿಗೆ ಪ್ರತ್ಯೇಕ ೧ ಲಕ್ಷ ಕೊಡಲು ಸಂಘ ನಿರ್ಧರಿಸಿತು.
ಈ ಸಂದರ್ಭ ಮಾತನಾಡಿದ ಕಲ್ಲಪ್ಪ ತಂದೆ ಬಸಪ್ಪ ನನ್ನ ಮಗ ಪ್ರಾಮಾಣಿಕ ಆತ ತಪ್ಪು ಮಾಡಲು ಸಾಧ್ಯವೇ ಇಲ್ಲ ನನ್ನ ಮಗನಿಗೆ ಮೋಸವಾಗಿದೆ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸುತ್ತದೆ ಎಂದು ನಂಬಿದ್ದೇನೆ ಅಸಹಾಯಕರಾಗಿದ್ದ ನಮಗೆ ಅನೇಕ ಜನ ಸಹಾಯ ಮಾಡಿದ್ದಾರೆ ಎಂದು ಕಲಪ್ಹ ಹಂಡಿಬಾಗ್ ಅವರ ತಂದೆ ಮತ್ತು ತಾಯಿ ಕಣ್ಣೀರು ಸುರಿಸಿದರು
ನಿವೃತ್ತ ಐಎಎಸ್ ಅಧಿಕಾರಿ ಡಾ. ಡಿ. ಎಸ್. ಅಶ್ವತ್ಥ ಮಾತನಾಡಿ ನಮ್ಮ ಸಂಘ ಸರಕಾರಿ ನೌಕರರ ದುಖಃ ದುಮ್ಮಾನ, ಅವರ ಸಮಸ್ಯೆಗಳಿಗೆ ಸ್ಪಂದನೆಗೆ ಸಿದ್ಧವಾಗಿದೆ. ಸರಕಾರಿ ನೌಕರರ ಮಕ್ಕಳ ಉನ್ನತ ವ್ಯಾಸಂಗ, ಉನ್ನತ ಪರೀಕ್ಷೆಗಳ ತಯಾರಿಗೆ ಸಾಕಷ್ಟು ಸಹಾಯಕ್ಕೆ ನಿಲ್ಲುತ್ತದೆ. ಸರಕಾರಿ ನೌಕರರು ಸ್ಥೈರ್ಯದಿಂದ ಇರಬೇಕು ಎಂದರು. ಸಂಘದ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ಪೋಂಡೆ, ಮಾಧ್ಯಮ ಸಲಹೆಗಾರ ಸಾಂಬ ಸದಾಶಿವರೆಡ್ಡಿ, ಸಿದ್ದಪ್ಪ ಇತರರು ಉಪಸ್ಥಿತರಿದ್ದರು.

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *