ಬೆಳಗಾವಿ- ಹಿರಿಯ ರಂಗಭೂಮಿ ಕಲಾವಿಧ , ಚಿತ್ರನಟ, ನಾಟಕ ರಚಣೆಕಾರ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ರಂಗಭೂಮಿಯಲ್ಲಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಗುರುತಿಸಿ
ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ವತಿಯಿಂದ ನಾಟ್ಯಭೂಷಣ, ರಂಗಕಲಾವಿದ ಶತಾಯುಷಿ ಏಣಗಿ ಬಾಳಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ.
ಏಣಗಿ ಬಾಳಪ್ಪ ಅವರಿಗೆ
ಅನಾರೋಗ್ಯದ ಹಿನ್ನೆಲೆ ಅವರ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದಲ್ಲಿರುವ ಏಣಗಿ ಬಾಳಪ್ಪನವರ ನಿವಾಸದಲ್ಲಿ ಡಾಕ್ಟರೇಟ್ ಪ್ರಧಾನ ಮಾಡಲಾಯಿತು. ಈ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳಾ ಶಂಕರ ಅವರಿಂದ ಗೌರವ ಡಾಕ್ಟರೇಟ್ ಪ್ರದಾನ ಪ್ರಧಾನ ಮಾಡಲಾಯಿತು. ಶತಾಯುಷಿ ಏಣಗಿ ಬಾಳಪ್ಪನವರಿಂದ ಗೌರವ ಡಾಕ್ಟರೇಟ್ ಸ್ವೀಕಾರ ಮಾಡಿಕೊಂಡರು. ರಂಗಭೂಮಿಯನ್ನೆ ನಂಬಿಕೊಂಡಿದ್ದ ಏಣಗಿ ಬಾಳಪ್ಪ ಅವರು ಸಾವಿರಾರು ನಾಟಕ ಪ್ರದರ್ಶನ ಮಾಡಿದ್ದು ಅಲ್ಲದೆ ಚಲನಚಿತ್ರ ದಲ್ಲಿ ತನ್ನದೆ ಛಾಪು ಪುಡಿಸಿದ್ದರು. ಸಮಾರಂಭದಲ್ಲಿ ಹಿರಿಯ ನಾಟಕಕಾರರು, ಸಾಹಿತಿಗಳು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು..