ಬೆಳಗಾವಿ-ಬೆಳಗಾವಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಏಕಾಏಕಿ ಉಳ್ಳಾಗಡಗಡಿ ಬೆಲೆ ಕುಸಿತಗೊಂಡ ಕಾರಣ ಕುಪಿತಗೊಂಡ ರೈತರು ಮಾರುಕಟ್ಟೆಗೆ ಬೀಗ ಜಡಿದು ರಸ್ತೆ ತಡೆ ಮಾಡಿ ಆಕ್ರೋಶ ವೆಕ್ತ-ಡಿಸಿದರು
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿನ್ನೆ 1300 ರೂ ರಿಂದ 1400 ರೂ ವರೆಗೆ ಪ್ರತಿ ಕ್ವಿಂಟಲ್‍ಗೆ ಬೆಲೆ ಇತ್ತು ಶನಿವಾರ ದರ 450ರಿಂದ600 ರೂಪಾಯಿಗೆ ಕುಸಿದ ಕಾರಣ ಬೆಳಗವಿ ಬಾಗಲಕೋಟ ಹಾಗು ವಿಜಯಪೂರದಿಂದ ಬೆಳಗಾವಿ ಮಾರುಕಟ್ಟೆಗೆ ಈರುಳ್ಳಿ ತಂದಿದ್ದ ರೈತರು ಪ್ರತಿಭಟನೆ ಮಡೆಸಿ ಲೀಲಾವ್ ತಡೆದು ಮಾರುಕಟ್ಟೆಗೆ ಬೀಗ ಹಾಕಿ ಕೆಲ ಕಾಲ ರಸ್ತೆ ತಡೆ ನಡೆಸಿದರು
ಈ ಸಂದರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ರೈತರು ಈರುಳ್ಳಿ ಬೆಲೆ ಏಕಾ ಏಕಿ ಕುಸಿದಿದೆ ರಾಜ್ಯದಲ್ಲಿ ಒಂದು ಕಡೆ ಬರಗಾಲ ಇನ್ನೊಂದು ಕಡೆ ಪ್ರವಾಹ ಪರಿಸ್ಥಿತಿ ಇದ್ದು ರೈತರು ಕಂಗಾಲಾಗಿದ್ದಾರೆ ರಾಜ್ಯ ಹಾಗು ಕೇಂದ್ರ ಸರ್ಕಾರಗಳು ಕೂಡಲೇ ರೈತರ ನೆರವಿಗೆ ಧಾವಿಸಬೇಕು ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು
Check Also
ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…
ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …