ನಕಲಿ ಎಸಿಬಿ ಅಧಿಕಾರಿಗಳು ಸೈಬರ್ ಬಲೆಗೆ….
ಬೆಳಗಾವಿ-ಅಧಿಕಾರಿಗಳಿಗೆ ಫೋನ್ ಮಾಡಿ ಅಕೌಂಟ್ ಗೆ ದುಡ್ಡು ಹಾಕುವಂತೆ ಬೆಸರಿಸುತ್ತಿದ್ದ ನಕಲಿ ಎಸಿಬಿ ಅಧಿಕಾರಿಗಳು ಬೆಳಗಾವಿಯ ಸೈಬರ್ ಕ್ರೈಂ ಪೋಲೀಸರ ಬಲೆಗೆ ಬಿದ್ದಿದ್ದಾರೆ.
ಬೆಳಗಾವಿ ಜಿಲ್ಲೆ ಸೇರಿದಂತೆ ಬೇರೆ,ಬೇರೆ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳೆಂದು ನಂಬಿಸಿ ವಂಚಿಸುತ್ತಿದ್ದ,
ಮುರುಗೆಪ್ಪಾ ನಿಂಗಪ್ಪ ಪೂಜಾರ 56 ಸದಲಗಾ ಚಿಕ್ಕೋಡಿ,ರಾಜೇಶ್ ಬಾಪುಸು ಚೌಗಲೇ ಬಸ್ತವಾಡ ಶಿರೋಳ ಕೊಲ್ಹಾಪೂರ,ರಜನಿಕಾಂತ ತಂದೆ ನಾಗರಾಜ್ ಸಾ ಮುಗಳಿ ಸಕಲೇಶಪೂರ ಹಾಸನ ಜಿಲ್ಲೆ ಈ ಮೂವರು ಖದೀಮರನ್ನು ಸೈಬರ್ ಠಾಣೆಯ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಪೋಲೀಸರ ವಶದಲ್ಲಿರುವ ಈ ಮೂವರು ಜನ ಆರೋಪಿಗಳು,ಆರ್ ಟಿ ಓ, ರಜಿಸ್ಟಾರ್, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಫೋನ್ ಮಾಡಿ,ನಾವು ಎಸಿಬಿ ಅಧಿಕಾರಿಗಳು,ಅಕೌಂಟ್ ಗೆ ದುಡ್ಡು ಟ್ರಾನ್ಸಫರ್ ಮಾಡದಿದ್ದರೆ,ಕಚೇರಿಯ ಕಡತಗಳನ್ನು ಪರಶೀಲನೆ ಮಾಡುವದಾಗಿ ಬೆದರಿಸಿ ಹಲವಾರು ಜನ ಅಧಿಕಾರಿಗಳನ್ನು ವಂಚಿಸಿ ಲಕ್ಷಾಂತರ ರೂ ಲಪಟಾಯಿಸಿದ್ದಾರೆ.
ಸೈಬರ್ ಠಾಣೆಯ ಇನ್ಸಫೆಕ್ಟರ್ ಗಡ್ಡೇಕರ ಮತ್ತು ತಂಡ ಕಾರ್ಯಾಚರಣೆ ನಡೆಸಿ ಮೂವರು ಜನ ವಂಚಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.