ಗೋಕಾಕ್ ಫಾಲ್ಸ್ ನಲ್ಲಿ ಮಧ್ಯರಾತ್ರಿ ಮಿರ್ಯಾಕಲ್..!!
ಬೆಳಗಾವಿ- ಬೆಳಗಾವಿ ಜಿಲ್ಲೆಯ ಗೋಕಾಕ್ ಫಾಲ್ಸ್ ನಲ್ಲಿ ಮಧ್ಯರಾತ್ರಿ ಅಚ್ಚರಿಯ ಘಟನೆ ನಡೆದಿದೆ. 140_ಅಡಿ ಆಳಕ್ಕೆ ಬಿದ್ದ ಯುವಕನೊಬ್ಬ ಬದುಕುಳಿದಿದ್ದು ಅಗ್ನಿ ಶಾಮಕ ದಳದ ಸಿಬ್ಬಂಧಿ ಯುವಕನನ್ನು ರಕ್ಷಣೆ ಮಾಡಿದ್ದಾರೆ.
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಈ ಯುವಕ ಸೆಲ್ಫೀ ತೆಗೆಯಲು ಹೋಗಿ ಗೋಕಾಕ್ ಫಾಲ್ಸ್ ನಲ್ಲಿ ಜಾರಿ ಬಿದ್ದಿದ್ದ,ರಾತ್ರಿಹೊತ್ತು ಅಗ್ನಿ ಶಾಮಕದಳದ ಸಿಬ್ಬಂಧಿ ಮತ್ತು ಪೋಲೀಸರು ಯುವಕನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದರೂ ಯುವಕ ಪತ್ತೆ ಆಗಿರಲಿಲ್ಲ, ಮದ್ಯರಾತ್ರಿ 3 ಗಂಟೆಗೆ ಈ ಯುವಕ ಪೋಲೀಸರಿಗೆ ಫೋನ್ ಮಾಡಿ ನಾನು ಕಲ್ಲಿನ ಪೊದರಿನಲ್ಲಿ ಇದ್ದೇನೆ ನನ್ನನ್ನು ರಕ್ಷಿಸಿ ಎಂದು ಅಂಗಲಾಚಿದ್ದ ಈ ಯುವಕ ಕೊನೆಗೂ ಬದುಕುಳಿದಿದ್ದು ಪವಾಡವೇ ಸರಿ…
ಕಲ್ಲು ಬಂಡೆಗಳ ನಡುವೆ 140 ಅಡಿ ಕಂದಕಕ್ಕೆ ಬಿದ್ದರೂ ಬದುಕಿದ ಯುವಕ,ಸ್ನೇಹಿತರೊಂದಿಗೆ ಗೋಕಾಕ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರದೀಪ್ ಸಾಗರ್ ಎಂಬಾತಆಯತಪ್ಪಿ 140 ಅಡಿ ಆಳದ ಕಂದಕಕ್ಕೆ ಬಿದ್ದಿದ್ದ ಪ್ರದೀಪ,ಬೆಳಗಾವಿಯ ಖಾಸಗಿ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡ್ತಿದ್ದ ಪ್ರದೀಪ್ ಸಾಗರ್ ಬದುಕುಳಿದ್ದು ಪವಾಡ.
ಪ್ರದೀಪ್ ಕೆಳಗೆ ಬಿದ್ದ ತಕ್ಷಣ ಪೊಲೀಸರಿಗೆ ಪ್ರದೀಪ ಸ್ನೇಹಿತರ ಮಾಹಿತಿ ನೀಡಿದ್ದರು.ಕೂಡಲೇ ಸ್ಥಳಕ್ಕೆ ಬಂದಿದ್ದ ಗೋಕಾಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ,ರಾತ್ರಿ ವೇಳೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ತಂಡದಿಂದ ಕಾರ್ಯಾಚರಣೆ ನಡೆದಿತ್ತು,ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಿ ವಾಪಸ್ ಆಗಿದ್ರು
140 ಅಡಿ ಆಳದ ಕಂದಕಕ್ಕೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಪ್ರದೀಪ್,ಪೋನ್ ರಿಂಗ್ ಆಗ್ತಿದ್ರೂ ಸಹ ಫೋನ್ ರಿಸಿವ್ ಮಾಡಿರಲಿಲ್ಲ,ಇಡೀ ರಾತ್ರಿ ಕಂದಕದಲ್ಲೆ ಕಳೆದಿದ್ದ ಪ್ರದೀಪ್ ಸಾಗರ್ ನಿಗೆ,ಬೆಳಗ್ಗೆ 4 ಗಂಟೆಗೆ ಪ್ರಜ್ಞೆ ಬಂದ ಮೇಲೆ ತಾನೇ ಸ್ನೇಹಿತರಿಗೆ ಫೋನ್ ಮಾಡಿದ ಪ್ರದೀಪ,ತಾನು ಬದುಕಿರುವ ಬಗ್ಗೆ ಮಾಹಿತಿ ನೀಡಿದ್ದ.
ಬಳಿಕ ಗೋಕಾಕದ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್ ಹಾಗೂ ಪೊಲೀಸರ ತಂಡದಿಂದ ಪ್ರದೀಪ ರಕ್ಷಣೆ ಮಾಡಲಾಗಿದೆ.ಪ್ರದೀಪ ರಕ್ಷಿಸಿ ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವ ಪೊಲೀಸರು ಗೋಕಾಕ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ