Breaking News

ಅವನ ತಾಯಿ ಲವ್ ವಿಷಯ ಅವಳ ತಾಯಿಯ ಮುಂದೆ ಹೇಳಿದ್ದೆ ತಪ್ಪಾಯ್ತಾ‌..????

ಬೆಳಗಾವಿ- ಖಾನಾಪುರ ನಗರ ವ್ಯಾಪ್ತಿಯಲ್ಲಿ ರೇಲ್ವೇ ಟ್ರ್ಯಾಕ್ ಮೇಲೆ ಯುವಕನ ಹೆಣ ಬಿದ್ದಿತ್ತು ರುಂಡ ದೇಹದಿಂದ ಬೇರ್ಪಡೆಯಾಗಿತ್ತು ರೇಲ್ವೇ ಪೋಲೀಸರು ಇದೊಂದು ಆತ್ಮಹತ್ಯೆ ಕೇಸ್ ಅಂತಾ ತಿಳ್ಕೊಂಡಿದ್ರು, ಬೆಳಗಾವಿಯಲ್ಲಿ ಅನ್ಯ ಕೋಮೀನ ಯುವತಿಯ ಜೊತೆ ಪ್ರೀತಿ ಮಾಡಿದ ಯುವಕ ಈಗ ಖಾನಾಪೂರ ರೇಲ್ವೇ ಟ್ರ್ಯಾಕ್ ಮೇಲೆ ಹೆಣವಾಗಿದ್ದು ಇದೊಂದು ಅನುಮಾನದ ಸಾವು ಅಂತಾ ಈಗ ಚರ್ಚೆ ಶುರುವಾಗಿದೆ.

ಅನ್ಯಕೋಮಿನ ಯುವತಿಯ ಪ್ರೀತಿ ಮಾಡಿದ್ದಕ್ಕೆ ಯುವಕನ ಹತ್ಯೆ ಆಯ್ತಾ..?? ಎಂದು ಮಗನ ನೆನೆದು‌ ಯುವಕನ ತಾಯಿ ಕಣ್ಣೀರಿಟ್ಟಿದ್ದುನನ್ನ ಒಬ್ಬನೇ ಮಗನ ಕೊಂದು ವಂಶವನ್ನೇ ನಿರ್ವಂಶ ಮಾಡಿದ್ರು ಅಂತಾ ಕಣ್ಣೀರು ಹಾಕಿದ್ದಾಳೆ.

ಖಾನಾಪುರದಲ್ಲಿ ಕೊಲೆಯಾದ ಅರ್ಬಾಜ್ ಮುಲ್ಲಾ ತಾಯಿ ನಾಸೀಮಾ ಇವತ್ತು ಮಾದ್ಯಮಗಳ ಜೊತೆ ಮಾತನಾಡಿ,ನಾನು ಉರ್ದು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೆಎರಡು ವರ್ಷದಿಂದ ನನ್ನ ಮಗ ಯುವತಿಯನ್ನ ಪ್ರೀತಿ ಮಾಡುತ್ತಿದ್ದ,ಮೊದಲು ಆ ಯುವತಿ ಕುಟುಂಬ ಮೊದಲು ನನ್ನ ಮನೆ ಎದುರೇ ವಾಸವಿದ್ರು,
ಈ ವಿಚಾರವ‌ನ್ನು ಯುವತಿಯ ತಾಯಿಗೆ ನಾನೇ ಹೇಳಿದ್ದೆ, ಯುವತಿ ಕುಟುಂಬಕ್ಕೆ ಹೇಳಿದ್ದಕ್ಕೆ ನನ್ನ ಮಗ ನನ್ನ ಜೊತೆ ಜಗಳವಾಡಿದ್ದ,ಅಂದು ನನ್ನ ಮಗ ಬಂದು ಅವರಿಗೆ ಯಾಕೆ ಹೇಳಿದೆ ಅಂತಾ ಜಗಳವಾಡಿದ್ದ,ಅವರ ಸಮಾಜದವರು ಎಲ್ಲರೂ ಸೇರಿ ನನಗೆ ಉಳಿಸಲ್ಲಾ ಅಂತಾ ಹೇಳಿದ್ದ,ಎಂದು ಯುವಕ ಅರ್ಬಾಜ್ ತಾಯಿ ಮಾದ್ಯಮಗಳ ಎದುರು ಕಣ್ಣೀರು ಸುರಿಸಿದಳು.

ಸೆ.26ರಂದು ಪುಂಡಲೀಕ ಮಹಾರಾಜ ಅನ್ನೋರು ಕಾಂಪ್ರಮೇಸ್‌ಗೆ ಕರೆದಿದ್ದರು ಅಂದು ನನ್ನ ಮಗನ ಮೊಬೈಲ್‌ನಲ್ಲಿದ್ದ ಪೋಟೋ, ಮೆಸೇಜ್, ನಂಬರ್ ಡಿಲಿಟ್ ಮಾಡಿದ್ರು,ಸಿಮ್ ಕೂಡ ಮುರಿದು ಹಾಕಿ, ಯುವತಿ ಸಹವಾಸಕ್ಕೆ ಹೋಗಲ್ಲ ಅಂತಾ ಹೇಳಿ ಬಂದಿದ್ದೇವು,ಅವತ್ತು ಯುವತಿ ಪುಂಡಲೀಕ ಮಹಾರಾಜರ ನಂಬರ್ ಗೆ ಕರೆ ಮಾಡಿ 7 ಸಾವಿರ ಹಣಕ್ಕೆ ಅವರು ಡಿಮ್ಯಾಂಡ್ ಮಾಡಿದ್ದರು,ಎಲ್ಲವೂ ಸರಿ ಆದ ಬಳಿಕ ಸೆ.28ರಂದು ನನ್ನ‌ ಮಗನನ್ನ ಹತ್ಯೆ ಮಾಡಿದ್ದಾರೆ ಎಂದು ಹತ್ಯೆಯಾದ ಯುವಕನ ತಾಯಿ ಕಣ್ಣೀರು ಹಾಕಿದ್ದಾಳೆ.

ನನಗೂ ಜೀವ ಬೆದರಿಕೆ ಇದೆ ಒಬ್ಬಳಿಗೆ ಇರಲು ಹೆದರಿಕೆ ಬರ್ತಿದೆ,ನನಗೆ ರಕ್ಷಣೆ ಕೂಡಲು ಪೊಲೀಸರಿಗೆ ಮನವಿ ಮಾಡಿದ್ದೇನೆ ಎಂದುಖಾನಾಪುರದಲ್ಲಿ ಕೊಲೆಯಾದ ಅರ್ಬಾಜ್ ಮುಲ್ಲಾ ತಾಯಿ ನಾಸೀಮಾ ಹೇಳಿದ್ದಾಳೆ‌.

ಪ್ರಕರಣಕ್ಕೆ ಸಂಬಂಧಿಸಿದಂತೆ 30ಕ್ಕೂ ಅಧಿಕ ಜನರ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.ಯುವತಿ ಸೇರಿ ಯುವತಿಯ ಕುಟುಂಬಸ್ಥರನ್ನ ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ.ಬೆಳಗಾವಿ ರೇಲ್ವೆ ಪೊಲೀಸರಿಂದ ತನಿಖೆ ನಡೆಯುತ್ತಿದೆ‌ಬೆಳಗಾವಿ ಪೊಲೀಸರಿಗೆ ಪ್ರಕರಣ ವರ್ಗಾವಣೆ ಮಾಡಲು ರೇಲ್ವೆ ಪೊಲೀಸರ ನಿರ್ಧಾರ ಮಾಡಿದ್ದಾರೆ.

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.