*ಗೋವಾ ಸರ್ಕಾರಕ್ಕೆ ಪ್ರದಾನಿ ಮೋದಿ ಅವರಿಂದ ಖಡಕ್ ವಾರ್ನಿಂಗ್ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಬೆಳಗಾವಿಗೆ ಬಂತು ಗೋವಾ ಕದಂಬ*
*ಬೆಳಗಾವಿ ಸುದ್ಧಿ*
ಬೆಳಗಾವಿ ಗೋವಾದಲ್ಲಿರುವ ಕನ್ನಡಿಗ ಕಾರ್ಮಿಕರು ಅತಂತ್ರ ಪ್ರಕರಣಕ್ಕೆ ಸಮಂಧಿಸಿದಂತೆ ಗೋವಾ ಕನ್ನಡಿಗರ ಬಗ್ಗೆ ಮಾದ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಪ್ರದಾನಿ ನರೇಂದ್ರ ಮೋದಿ ಅವರು ಗೋವಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗೋವಾ ಸರ್ಕಾರಕ್ಕೆ
ಕೇಂದ್ರದಿಂದ ತರಾಟೆ ಬೆನ್ನಲ್ಲೇ ಕನ್ನಡಿಗರ ರಕ್ಷಣೆಗೆ ಗೋವಾ ಸರ್ಕಾರ ಧಾವಿಸಿದೆ.
ಕಣಕುಂಬಿ ಚೆಕ್ ಪೋಸ್ಟ್ ಗೆ ಗೋವಾ ರಾಜ್ಯದ ಅಧಿಕಾರಿಗಳ ದೌಡಾಯಿಸಿದ್ದು ಏ14 ರ ವರೆಗೆ ದೇಶದಲ್ಲಿ ಲಾಕ್ ಡೌನ್ ಹಿನ್ನೆಲೆ ಆಯಾ ರಾಜ್ಯದಲ್ಲಿ ಇರೋ ಅಲ್ಲಿಯೇ ಇರಬೇಕು, ಕಾರ್ಮಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಸ್ಥಳೀಯ ಸರ್ಕಾರದ ಜವಾಬ್ದಾರಿ ಎಂದು ಕೇಂದ್ರ ಸರ್ಕಾರ ಗೋವಾ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಮಾಡಿರುವ ಹಿನ್ನಲೆಯಲ್ಲಿ ಗೋವಾ ಕದಂಬ ವಾಹನ ಕಣಕುಂಬಿ ಚೆಕ್ ಪೋಸ್ಟ್ ಗೆ ಆಗಮಿಸಿದೆ.
ಕದಂಬ ವಾಹನದಲ್ಲಿ 
ಕನ್ನಡಿಗ ಕಾರ್ಮಿಕರನ್ನು ಕರೆದುಕೊಂಡು ಹೋಗಿದೆ. ತಮ್ಮದೇ ವಾಹನದಲ್ಲಿ ಕರೆದುಕೊಂಡು ಹೋಗಿ ಅತಂತ್ರ ಕಾರ್ಮಿಕರ ಸಹಾಯಕ್ಕೆ ಗೋವಾ ಸರ್ಕಾರ ನಿಂತಿದೆ.
ಕನ್ನಡಿಗ ಕಾರ್ಮಿಕರಿಗೆ ಎಲ್ಲ ರೀತಿಯಮೂಲಭೂತ ಸೌಲಭ್ಯ ಒದಗಿಸುವದಾಗಿ ಗೋವಾ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ