ಗೋಕಾಕ ಅ, 15 ;- ಇಲ್ಲಿಗೆ ಸಮೀಪದ ಗೋಕಾಕ ಟೆಕ್ಸ್‍ಟೈಲ್ ಮಿಲ್ಲಿನ ಕಾರ್ಮಿಕರ ದಿನದಿನಕ್ಕೆ ಜಟೀಲಗೊಳ್ಳುತ್ತ ನಡೆದಿದ್ದು, ಸೋಮವಾರದಂದು ಸಂಜೆಯಷ್ಟೇ ಮಿಲ್‍ನ ಕಾರ್ಮಿಕನನ್ನು 8 ರಿಂದ 10 ಜನರ ಗುಂಪೊಂದು ಹಲ್ಲೆ ನಡೆಸಿ ತೀವೃ ಗಾಯಗೊಳಿಸಿದ ಘಟನೆ ಗೋಕಾಕ ಫಾಲ್ಸ್‍ನಲ್ಲಿ ನಡೆದಿದೆ.
ಫಾಲ್ಸ್‍ನ 8 ನೇ ಓಣಿಯ ರಹವಾಸಿ ಮಿಲ್ಲಿನ ಕಾರ್ಮಿಕನಾದ ಇಬ್ರಾಹಿಮ್ ಪಾಶ್ಚಾಪೂರ ಎಂಬಾತನ ಮೇಲೆ 8 ರಿಂದ 10 ಜನರ ಗುಂಪೊಂದು ಹಠಾತ್ತನೇ ಹಲ್ಲೆ ನಡೆಸುತ್ತಿದ್ದಾಗ ಈತನ ಮಾವ ರಾಜೇಸಾಬ ಯಮಕನಮರ್ಡಿ ಎಂಬಾತನು ಬಿಡಿಸಲು ಹೋದಾಗ ಆತನ ಮೇಲೆಯೂ ಹಲ್ಲೆ ನಡೆಸಲಾಗಿದೆ. ಈ ಇಬ್ಬರನ್ನೂ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಾಜೇಸಾಬನ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಯ ಸುದ್ಧಿ ತಿಳಿಯುತ್ತಲೇ ಡಿವೈಎಸ್‍ಪಿ ವೀರಭದ್ರಯ್ಯ, ಸಿಪಿಐ ಎಸ್.ಆರ್.ಕಟ್ಟೀಮನಿ, ಶಹರ ಠಾಣೆ ಪಿಎಸ್‍ಐ ಬಸಗೌಡ ಪಾಟೀಲ, ಹಾಗೂ ಸಿಬ್ಬಂದಿ ವರ್ಗ ಘಟನಾ ಸ್ಥಳಕ್ಕೆ ಧಾವಿಸಿ ಪೊಲೀಸ್ ಬಂದೋಬಸ್ತನ್ನು ಆಯೋಜಿಸಿದ್ದಾರೆ. ಸಧ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
