ಬೆಳಗಾವಿ- ಆಹಾ ಕಮಲ..ಓಹೋ ಕಮಲ..ಜೈ ಹೋ ಜಾರಕಿಹೊಳಿ ಎಂಬ ಘೋಷಣೆಗಳು ಮೊಳಗಿದ್ದು ಗೋಕಾಕಿನಲ್ಲಿ ನಡೆದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರ ರೋಡ್ ಶೋ ರ್ಯಾಲಿಯಲ್ಲಿ
ಸಿಎಂ ಯಡಿಯೂರಪ್ಪ ಬುಧವಾರ ಅರಭಾಂವಿ ಮತ್ತು ಗೋಕಾಕಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ರು ಅರಭಾಂವಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಾವಿರಾರು ಜನ ಸೇರಿದ್ದರು.ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಬಾಲಚಂದ್ರ ಜಾರಕಿಹೊಳಿ ಮಾತನಾಡಿ,ನಿಮಗೋಸ್ಕರ ರಾಜಕಾರಣಕ್ಕೆ ಬರಬೇಡಿ, ಇನ್ನೊಬ್ಬರ ಕಣ್ಣಿರೊರೆಸಲು ರಾಜಕಾರಣಕ್ಕೆ ಬನ್ನಿ ಅಂತಾ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ರು,ಸುರೇಶ್ ಅಂಗಡಿ ಪ್ರೀತಿ ವಿಶ್ವಾಸದಿಂದ ನಮ್ಮ ಜೊತೆ ಚೆನ್ನಾಗಿದ್ದರು.ಸದಾ ಹಸನ್ಮುಖಿಯಾಗಿದ್ದರು ಎಂದು ಸುರೇಶ್ ಅಂಗಡಿಯವರನ್ನು ಬಾಲಚಂದ್ರ ಜಾರಕಿಹೊಳಿ ಸ್ಮರಿಸಿದರು.
ರೇಲ್ವೆ ಸಚಿವರಾದ ಬಳಿಕ ನಮಗೆ ಇನ್ನೂ ಹೆಚ್ಚಿನ ಶಕ್ತಿ ಬಂದಿತ್ತು, ವಿಧಿಯಾಟ ಇಂದು ಲೋಕಸಭಾ ಉಪಚುನಾವಣೆ ಮಾಡುವ ಕಾಲ ಬಂದಿದೆ.ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ್ ಅಂಗಡಿಗೆ ಮತ ಹಾಕಿ ಅಂತಾ ಮನವಿ ಮಾಡಿಕೊಂಡ ಅವರು,ನೀವೆಲ್ಲರೂ ಮತ ಹಾಕ್ತೀರಿ ಅಂತಾ ನಾವು ನಂಬಿದ್ದೇವೆ.ನಾವೆಲ್ಲಾ ಬಿಜೆಪಿ ಬಿ ಫಾರಂ ಮೇಲೆ ಗೆದ್ದಿದ್ದೇವೆ,ಬಿಜೆಪಿಗೆ ಮೋಸ ಮಾಡುವ ಕೆಲಸ ನಾನು ಮಾಡಬಾರದು ನೀವೂ ಮಾಡಬಾರದು ಎಂದರು.
ನಮ್ಮದು ವ್ಯಕ್ತಿಯ ವಿರುದ್ಧ ಹೋರಾಟ ಅಲ್ಲ ಕಾಂಗ್ರೆಸ್ ವಿರುದ್ಧ ಹೋರಾಟ,ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂದು ಮನವಿ ಮಾಡ್ತೇನೆ.ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಅರಭಾವಿಯಿಂದ 55 ಸಾವಿರ ಲೀಡ್ ಬಂದಿತ್ತು,ಆಗ ಸುರೇಶ್ ಅಂಗಡಿ, ನಾನು, ಈರಣ್ಣ ಕಡಾಡಿ ಮೂರೇ ಜನ ಓಡಾಡಿದ್ದೇವು.ಈಗ ಸಿಎಂ ಬಂದಿದ್ದರಿಂದ 10 ಸಾವಿರ ಹೆಚ್ಚಿಗೆ ಮಾಡಿ 65 ಸಾವಿರ ಲೀಡ್ ತರಬೇಕುಮನೆಮಗಳು ಮಂಗಲ ಅಂಗಡಿಗೆ ಮತ ನೀಡಿ ದೆಹಲಿಗೆ ಕಳಿಸಿ ಕೊಡಿ ಎಂದು ಬಾಲಚಂದ್ರ ಜಾರಕಿಹೊಳಿ,ಮತಯಾಚಿಸಿದರು.
ನಾನು ಮಂಗಲ ಅಂಗಡಿಯವರ ಅಣ್ಣನಾಗಿ ಕೆಲಸ ಮಾಡುವೆ,ನೀವು ನಮ್ಮನ್ನ ನಂಬಿದೀರಾ, ಅದೇ ರೀತಿ ಮಂಗಲ ಅಂಗಡಿರನ್ನು ನಂಬಿ ಮತ ಹಾಕಿ, ಎಂದರು ಬಾಲಚಂದ್ರ.
ಅರಭಾಂವಿಯಲ್ಲಿ ರಾಜಾಹುಲಿ ಹೇಳಿದ್ದು…
ಮಂಗಲ ಅಂಗಡಿರವರು ಸುರೇಶ್ ಅಂಗಡಿ ಗೆದ್ದ ಅಂತರಗಿಂತ ಹೆಚ್ಚಿನ ಅಂತರದಿಂದ ಗೆಲ್ಲಿಸಲು ಮನವಿ ಮಾಡ್ತೇನೆ,ಬಾಲಚಂದ್ರ ಜಾರಕಿಹೊಳಿ ಪ್ರಯತ್ನ ದಿಂದ ಈ ಕ್ಷೇತ್ರದಲ್ಲಿ ಶೇಕಡ 90ರಷ್ಟು ಮತ ಬರುವ ವಿಶ್ವಾಸ ಇದೆ.ಕಾಂಗ್ರೆಸ್ ಮುಳುಗುವ ಹಡಗುಮೊನ್ನೆ ನಡೆದ 17 ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ 14 ಕ್ಷೇತ್ರ ಬಿಜೆಪಿ ಗೆದ್ದಿತ್ತು.28 ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದೇ ಒಂದು,ಹಗುರವಾಗಿ ಮಾತನಾಡಿ ಓಡಾಡುತ್ತಿದ್ದರೆ ಕಾಂಗ್ರೆಸ್ ಇನ್ನೂ ದಯನೀಯ ಸ್ಥಿತಿ ಹೋಗುತ್ತೆ ಎಂದು ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿ ಲೋಕಾಭಾ ಕ್ಷೇತ್ರ, ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ತೇವೆ.ಯಡಿಯೂರಪ್ಪ ಏನಾದರೂ ಹೇಳಿದ್ರೆ ಹತ್ತಾರು ಬಾರಿ ಯೋಚನೆ ಮಾಡಿ ಹೇಳೋದು.ಕೇವಲ ಪ್ರಚಾರಕ್ಕೆ ಮಾತನಾಡಲ್ಲ.ಸುರೇಶ್ ಅಂಗಡಿ ರೇಲ್ವೆ ಸಚಿವರಾಗಿ ಕೆಲಸ ಮಾಡಿದ ರೀತಿ ನಮ್ಮ ಜೀವನದಲ್ಲೇ ಮರಿಯಲು ಸಾಧ್ಯವಿಲ್ಲ.ನರೇಂದ್ರ ಮೋದಿ ಸಹ ಸುರೇಶ್ ಅಂಗಡಿ ನಿಧನರಾದಾಗ ಕಣ್ಣೀರಿಟ್ಟಿದ್ರು,ಮಂಗಲ ಅಂಗಡಿರನ್ನು ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿ,ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿ ಮಾಡ್ತಿದೇವೆ.ಮಂಗಲ ಅಂಗಡಿ ಗೆದ್ದ ಬಳಿಕ ವಿಜಯೋತ್ಸವ ಆಚರಣೆ ಮಾಡೋಣಬೆಳಗಾವಿ ಮಾದರಿ ಜಿಲ್ಲೆಯನ್ನಾಗಿಸಲು ಸರ್ವಾಂಗೀಣ ಅಭಿವೃದ್ಧಿ ಮಾಡ್ತೇವೆ.ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬಂದಿದ್ದು ಆನೆ ಬಲ ಬಂದಂತಾಗಿದೆ.ಇನ್ನೂ ಎರಡು ದಿನ ಬಾಲಚಂದ್ರ ಜಾರಕಿಹೊಳಿ ಕ್ಷೇತ್ರದಲ್ಲಿದ್ದು ಪ್ರಚಾರ ಮಾಡ್ತಾರೆ.ಎಂದು ಯಡಿಯೂರಪ್ಪ ಹೇಳಿದ್ರು
ಗೋಕಾಕಿನಲ್ಲಿ ಮಂಗಲಾ ಅಂಗಡಿ ಕಣ್ಣೀರು….
ಗೋಕಾಕ ಮಂಗಲಾ ಅಂಗಡಿ ಅವರ ತವರುಮನೆ.ಇಲ್ಲಿ ಮಾತನಾಡುವ ಮೊದಲೇ ಭಾವುಕರಾಗಿದ್ದ ಅವರು,ನಮ್ಮ ಯಜಮಾನ್ರು ಚುನಾವಣೆಗೆ ನಿಂತಾಗ,ಗೋಕಾಕಿನಲ್ಲಿ ನಾನು ನಿಮ್ಮ ತಾಲ್ಲೂಕಿನ ಅಳಿಯ ನನ್ನನ್ನು ಗೆಲ್ಲಿಸಿ ಅಂತಾ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು.ನಾನು ನಿಮ್ಮ ಮನೆಯ ಮಗಳು ನನ್ನನ್ನು ಗೆಲ್ಲಿಸಿ ಎಂದು ಕಣ್ಣೀರು ಹಾಕುತ್ತಲೇ ಭಾಷಣ ಮಗಿಸಿದರು.
ರಮೇಶ್ ಅನುಪಸ್ಥಿತಿಯಲ್ಲಿ ಅಳಿಯ ಅಂಬಿರಾವ್ ಕರಾಮತ್ತು…
ಮಾಜಿ ಸಚಿವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಕೋವೀಡ್ ಸೊಂಕು ತಗಲಿದ ಕಾರಣ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದು ಅವರ ಅನುಪಸ್ಥಿತಿಯಲ್ಲಿ ಅಳಿಯ ಅಂಬಿರಾವ್ ಅವರು ಗೋಕಾಕಿನಲ್ಲಿ ಸಾವಿರಾರು ಜನರನ್ನು ಸೇರಿಸುವ ಮೂಲಕ ಗೋಕಾಕ್ ರೋಡ್ ಶೋ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸೊದರು.