Breaking News

ಜನಪ್ರತಿನಿಧಿಯಲ್ಲ, ಆದರೂ ಜನಹಿತ ಕಾಯಕ ತಪ್ಪಿಲ್ಲ……..!!!!

‘ಸಿರಿ ಬಂದಾಗ ಕರೆದು ದಾನವ ಮಾಡು’ ಎಂಬುದು ಸರ್ವಜ್ಞನ ಅರಿವಿನ ಮಾರ್ಗವಾದರೆ, ‘ರೊಟ್ಟಿ ಇದ್ದರೆ ಹಂಚಿಕೊಂಡು ತಿನ್ನು, ಕಟ್ಟೆಯಿದ್ದರೆ ಕರೆದುಕೊಂಡು ಕೂಡ್ರು’ ಎಂಬುದು ಹಬೀಬ ಶಿಲೇದಾರ ಅವರ ಬದುಕಿನ ಸರಳ ಸೂತ್ರವಾಗಿದೆ.

ಜನಪ್ರತಿನಿಧಿಯಲ್ಲ,ಆದರೂ    ಜನಹಿತ ಕಾಯಕ ತಪ್ಪಿಲ್ಲ

ಚನ್ನಮ್ಮನ ಕಿತ್ತೂರು: ಯಾವುದೇ ಸಂಸ್ಥೆಯ ಜನಪ್ರತಿನಿಧಿಯಲ್ಲ, ಶಾಸಕರಂತೂ ಅಲ್ಲವೇ ಅಲ್ಲ. ಅದರೆ ಇವರಿಗೆಲ್ಲರಿಗಿಂತ ಬಡವರು, ದೀನದಲಿತರು, ನೊಂದವರು, ಅಲೆಮಾರು ಜನಾಂಗದವರ ಸೇವೆ ಮಾಡುವುದರಲ್ಲಿ ಸದಾ ಮುಂದು. ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಶಿಕ್ಷಣ ಕೊಡಿಸುವುದು, ನಿರುದ್ಯೋಗಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಿ ಅವರನ್ನು ಸ್ವಾವಲಂಬಿಯಾಗಿ ಮಾಡುವುದು ಇವರ ಮಹತ್ವಾಕಾಂಕ್ಷಿ ಕಾರ್ಯಗಳು. ಕುಟುಂಬದ ಆಧಾರಸ್ತಂಭ ಮಹಿಳೆ. ಅವಳು ಆರ್ಥಿಕವಾಗಿ ಬಲಗೊಂಡರೆ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಕುಟುಂಬವನ್ನೂ ಎತ್ತರಕ್ಕೆ ಒಯ್ಯುತ್ತಾರೆ ಎಂಬುದು ಅವರು ಕಂಡುಕೊಂಡು ಬದುಕಿನ ಸಿಂಪಲ್ ಥೀಯರಿ.

ಈ ನಿಟ್ಟಿನಲ್ಲಿಯೇ ತಮ್ಮ ಮಹತ್ಕಾರ್ಯವನ್ನು ಮುಂದುವರೆಸುತ್ತ ಹೊರಟಿರುವ ಗರ್ವರಹಿತ ವ್ಯಕ್ತಿ ಹಬೀಬ ಶಿಲೇದಾರ. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನ ಮತ್ತು ಗರಡಿಯಲ್ಲಿ ಪಳಗಿರುವ ಹುಲಿಮರಿ ಶಿಲೇದಾರ ಅವರು. ಹೀಗಾಗಿಯೇ ಇವರೆಲ್ಲ ರಚನಾತ್ಮಕ ಕೆಲಸಗಳಿಗೆ ಸತೀಶ ಅವರ ಶುಭ ಹರಕೆ ಇದ್ದೇ ಇರುತ್ತದೆ.

ಬಡವರ ಕೈ ಹಿಡಿದರು

ಹಿಂದೆ ಕ್ಷೇತ್ರ ಪ್ರತಿನಿಧಿಸಿದವರು, ಅವರ ಬೆಂಬಲಿಗರು ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲಿ ನೆರವಿನ ಹಸ್ತ ಚಾಚದಿದ್ದಾಗ ಪ್ರಸ್ತುತ ಅವರಿಗೆ ಬಂದಿರುವ ಕಷ್ಟದ ದಿನಗಳ ದಡವನ್ನು ಕೈ ಹಿಡಿದು ನಡೆಸಲು ಶಿಲೇದಾರ ಪಣ ತೊಟ್ಟಿದ್ದಾರೆ. ಶಾಸಕ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಜನಹಿತ ಕಾರ್ಯಕ್ರಮ ರೂಪಿಸಿಕೊಂಡು ದಾಪುಗಾಲು ಹಾಕುತ್ತಿರುವ ಶಿಲೇದಾರ, ಭವಿಷ್ಯದ ಜನಹಿತ ನಾಯಕರಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ.

ಬಡವರು ಕಂಡರೆ ಮನಮಿಡಿಯುವ ಹೃದಯ, ತೊಂದರೆ ಎಂದು ಬಂದವರಿಗೆ ಸಾಧ್ಯವಿದ್ದ ಸಹಾಯ, ಕಿರಿಯರಿಗೆ ಅಣ್ಣ, ಹಿರಿಯರಿಗೆ ಎಲ್ಲಿಯೇ ಸಿಕ್ಕರೂ ಗೌರವಾದರ ನೀಡುವ ಇವರ ಸಮೀಪ ಅಧಿಕಾರ ಬರುತ್ತದೆ ಹೊರತು ಅದರ ಹಿಂದೆ ಎಂದೂ ಹೋಗದಿರುವ ಜಾಯಮಾನ ಶಿಲೇದಾರ ಅವರದು.

ಸಿರಿತನ ಬಂದಾಗ ಕರೆದು ದಾನವ ಮಾಡು ಎಂಬುದು ಸರ್ವಜ್ಞನ ವಚನದ ಆರಂಭ ಸಾಲು. ಇದ್ದುದರಲ್ಲಿಯೇ ಹಂಚಿ ತಿನ್ನೋಣ ಎಂಬುದು ಶಿಲೇದಾರ ಅವರ ಬದುಕಿನ ಸರಳ ಸೂತ್ರವು.

ನೆರೆ ಇರಲಿ, ಬರ ಬರಲಿ, ಇಂದಿನ ಕೋವಿಡ್ 19 ವೈರಾಣುವಿನ ಸೋಂಕಿನ ಪ್ರಹಾರವಿರಲಿ ಅಲ್ಲಿ ಕಂಗೆಟ್ಟು ಕುಳಿತಿರುವ ಬಡಕುಟುಂಬಗಳಿಗೆ ಹಬೀಬ ಶಿಲೇದಾರ ಸದ್ದಿಲ್ಲದೆ, ಪ್ರಚಾರ ಬಯಸದೇ ಸಹಾಯ ಮಾಡುತ್ತ ಹೊರಟಿದ್ದಾರೆ. ಕೊರೊನಾ ವಾರಿಯರ್ಸ್ ರಾದ ಕಂದಾಯ, ಆರೋಗ್ಯ, ಪೊಲೀಸ್, ಆಶಾ ಕಾರ್ಯಕರ್ತೆಯರಿಗೆ ಆಹಾರಧಾನ್ಯದ ಕಿಟ್ ಗಳು, ಮಾಸ್ಕ್, ಸ್ಯಾನಿಟರೈಸರ್ ಹಂಚಿ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

ಬಳಗ ಒಂದು; ಕಾರ್ಯ ಹಲವಾರು

ಕೊರೊನಾ ತನ್ನ ಕಬಂಧ ಬಾಹುಗಳನ್ನು ಚಾಚಿ ತೀವ್ರ ಸಂಕಷ್ಟಕ್ಕೆ ದೂಡಿರುವ ಜನರಿಗೆ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನ, ಹಬೀಬ ಶಿಲೇದಾರ ಅವರ ಸಾರಥ್ಯದಲ್ಲಿ ಸತೀಶಣ್ಣಾ ಅಭಿಮಾನಿ ಬಳಗ ಮಾನವೀಯತೆಯ ನೆಲೆಯಲ್ಲಿ ಸ್ತುತ್ಯಾರ್ಹ ಕೆಲಸ ಮಾಡಿದ್ದಾರೆ.

ಕಿತ್ತೂರು ಮತಕ್ಷೇತ್ರದ 46 ಗ್ರಾಮಗಳಿಗೆ ಅಭಿಮಾನಿ ಬಳಗದ ಮುಖಂಡರು ಸೇರಿ ಮನೆ ಮನೆಗೆ ಖುದ್ದಾಗಿ ಭೇಟಿ ನೀಡಿ ಜನರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಕೊರೊನಾ ಸೋಂಕಿನ ಕುರಿತು ಜಾಗೃತ ಮೂಡಿಸಿದ್ದಾರೆ. ಈ ಕೆಳಕಂಡ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ.

1) 10 ಸಾವಿರ ಮಾಸ್ಕ ವಿತರಣೆ ಮಾಡಿದ್ದಾರೆ.

2) 100 ಅರ್ಧ ಲೀಟರ್ದ ಸ್ಯಾನಿಟೈಸರ್ ಟಿನ್ ಗಳ ವಿತರಣೆ ಮಾಡಿದ್ದಾರೆ.

3) 1 ಸಾವಿರ ದಿನ ನಿತ್ಯದ ಆಹಾರ ಕಿಟ್ ಗಳ ವಿತರಣೆ ಮಾಡಲಾಗಿದೆ.

4) ಅಪಾಯ ಲೆಕ್ಕಿಸದೇ ಫೀಲ್ಡ್ ವರ್ಕ್ ಮಾಡುವ ಕಿತ್ತೂರು ತಾಲೂಕಿನ 123 ಆಶಾ
ಕಾರ್ಯಕರ್ತೆಯರಿಗೆ ಆಹಾರ ಪದಾರ್ಥ ಕಿಟ್ ವಿತರಿಸಿ ಅವರ ಶ್ರಮಕ್ಕೆ ಮೆಚ್ಚುಗೆ ಸೂಚಿಸಿ ಬರಲಾಗಿದೆ.

5) ತಾಲೂಕಿನ ಸರಕಾರಿ ಪಿಎಚ್ ಸಿ ಯಲ್ಲಿ ಕತ೯ವ್ಯ ನಿವ೯ಹಿಸುತ್ತಿರುವ ವೈದ್ಯರನ್ನು ಗೌರವ

ಪೂರ್ವಕವಾಗಿ ಸತ್ಕರಿಸಿ ಅಭಿನಂದಿಸಲಾಗಿದೆ.

6) ಪವಿತ್ರ ರಮ್ಜಾನ್ ಹಬ್ಬದ ಪ್ರಯುಕ್ತ ರೋಜಾ ಇದ್ದ ಮುಸ್ಲಿಮ್ ಸಮುದಾಯದ 500 ಕುಟುಂಬಗಳಿಗೆ
ಹಣ್ಣು-ಹಂಪಲಗಳ ಕಿಟ್ ಮೊನ್ನೆ ವಿತರಿಸಿದ್ದಾರೆ.

7) ಜೋಪಡಪಟ್ಟಿಯಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಜನರು ಸಂಕಷ್ಟದಲ್ಲಿದ್ದಾಗ ನೆರವಿಗೆ ಖುದ್ದಾಗಿ ಧಾವಿಸಿ ಅವರಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ನಗದು ಹಣ ನೀಡಲಾಗಿದೆ.
8) ವಿವಿಧ ಜಿಲ್ಲೆಗಳಿಂದ ಕೂಲಿ ಕೆಲಸಕ್ಕೆ ಆಗಮಿಸಿ ಲಾಕಡೌನಲ್ಲಿ ಸಿಲುಕಿಕೊಂಡ ಕೂಲಿ ಕಾಮಿ೯ಕರಿಗೆ
ದಿನ ನಿತ್ಯದ ಕಿರಾಣಿ ವಸ್ತುಗಳು ಹಾಗೂ ತರಕಾರಿಗಳನ್ನು ವಿತರಿಸಲಾಗಿದೆ.

9) ಲಾಕ್ ಡೌನ್ ಹಿನ್ನೆಲೆಯಲ್ಲಿ ಕತ೯ವ್ಯ ನಿವ೯ಹಿಸುತ್ತಿರುವ ವಿವಿಧ ಜಿಲ್ಲೆಗಳಿಂದ ಬಂದ 40 ಪೊಲೀಸ್ ಸಿಬ್ಬಂದಿಗಳಿಗೆ 10 ದಿವಸದ ರಾತ್ರಿ ವೇಳೆಯ ಊಟದ ಸೇವೆ ಮಾಡಲಾಗಿದೆ.
10) ಅಂಬಡಗಟ್ಟಿಯಲ್ಲಿರುವ ಶ್ರೀ ಸತೀಶಣ್ಣಾ ಕಲ್ಯಾಣ ಮಂಟಪ, ಶ್ರೀ ಸತೀಶಣ್ಣಾ ಗಾರ್ಮೆಂಟ್ ನಲ್ಲಿ
ಕೆಲಸ ಮಾಡುತ್ತಿರುವ 85 ಸಿಬ್ಬಂದಿಗಳಿಗೆ 2 ಲಕ್ಷ ಆಥಿ೯ಕ ನೆರವು ನೀಡಿ, 1 ಲಕ್ಷ ರೂ. ಗಳ ದಿನ ನಿತ್ಯದ ಆಹಾರ ಸಾಮಗ್ರಿಗಳನ್ನು ನೀಡಿದ್ದಾರೆ.

11) ಶ್ರೀ ಸತೀಶಣ್ಣಾ ಗಾರ್ಮೆಂಟ್ ನಲ್ಲಿ 54 ಸಾವಿರ ಮಾಸ್ಕ್ ಸಿದ್ಧಪಡಿಸಿ ಯಮಕನಮರಡಿ, ಗೋಕಾಕ ಹಾಗೂ ಬೆಳಗಾವಿ ನಗರ ಮತ್ತು ಕಿತ್ತೂರು ಕ್ಷೇತ್ರಗಳಿಗೆ ಉಚಿತವಾಗಿ ವಿತರಿಸಿದ್ದಾರೆ.
ಈ ಹಿಂದೆ ಪ್ರವಾಹ ಬಂದು ಅನೇಕ ಕುಟುಂಬಗಳು ಮನೆ ಕಳೆದುಕೊಂಡ ಸಮಯದಲ್ಲಿ ಕಿತ್ತೂರು ತಾಲೂಕಿನ 12 ಗಂಜಿ ಕೇಂದ್ರಗಳಿಗೆ ಭೇಟಿ ಕೊಟ್ಟು ಸಾಂತ್ವನ ಹೇಳಿ ಪ್ರತಿ ಗಂಜಿ ಕೇಂದ್ರಗಳಿಗೆ ನಗದು
ಹಣ, ಅಗತ್ಯ ಕಿರಾಣಿ ಮತ್ತು 8 ಲಕ್ಷದ ಮೌಲ್ಯದ ಸಾಮಗ್ರಿಗಳನ್ನು ನೀಡಿದ್ದಾರೆ..

ಅನೇಕ ಶಾಲೆ, ಕಾಲೇಜುಗಳ ಕುಡಿಯುವ ನೀರಿನ ತೊಂದರೆ ನೀಗಿಸಲು ಕೊಳವೆಬಾವಿ ತೋಡಿಸಿದ್ದಾರೆ. ಕುಡಿಯುವ ಶುದ್ದ ನೀರಿನ ಘಟಕ ಸ್ಥಾಪಿಸಿದ್ದಾರೆ. ಕಂಪ್ಯೂಟರ್ ಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಶಾಲಾ ಕಟ್ಟಡ ದುರಸ್ತಿ ಮಾಡಿಸಿ ಬಣ್ಣ ಹಚ್ಚಿಸಿ ಅಂದಗೊಳಿಸಲು ಆರ್ಥಿಕ ಸಹಾಯ ನೀಡಿದ್ದಾರೆ.
120 ಮಕ್ಕಳ ಶಿಕ್ಷಣದ ಖಚ೯ನ್ನು ಪ್ರತಿವರ್ಷ ಭರಿಸುತ್ತಾ ಬರುತ್ತಿದ್ದಾರೆ.

*****

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.