Breaking News

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದಿದ್ದೇನು….??

ಬೆಳಗಾವಿ- ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಜೈಲು ಈಗ ಫುಲ್ ಸಸ್ಪೆನ್ಸ್ ಜೈಲಿನ ಗೋಡೆಗಳ ಆಚೆ ಏನು ನಡೆಯುತ್ತಿದೆ,ಎನ್ನುವದು ನಿಗೂಢವಾಗಿದೆ.ಹಿಂಡಲಗಾ ಜೈಲಿನ ಕೈದಿಯೊಬ್ಬ ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ಆಗಿದೆಯೋ ಅಥವಾ ಇಬ್ಬರು ಕೈದಿಗಳು ಹೊಡೆದಾಡಿಕೊಂಡಿದ್ದಾರೋ ಗೊತ್ತಿಲ್ಲ ಆದ್ರೆ ಆಸ್ಪತ್ರೆಗೆ ದಾಖಲಾಗಿರುವ ಕೈದಿ, ಬಿದ್ದು ಗಾಯವಾಗಿದೆ ಎಂದು ಹೇಳಿಕೊಂಡಿದ್ದಾನೆ.

ಕೈದಿಯ ಹೇಳಿಕೆಯಿಂದ ಪೋಲೀಸರಿಗೆ ಅನುಮಾನ ಬಂದಿದೆ,ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ವಿಚಾರಣೆ ಶುರು ಮಾಡಿದ್ದಾರೆ. ನಿಜವಾಗಿಯೂ ಜೈಲಿನ ಒಳಗೆ ನಡೆದಿದ್ದಾರೂ ಏನು ? ಕೈದಿ ನಿಜವಾಗಿಯೂ ಬಿದ್ದು ಗಾಯಗೊಂಡಿದ್ದಾನೆಯೋ ಅಥವಾ ಜೈಲಿನ ಒಳಗೆ ಮಾರಾಮಾರಿ ನಡೆದಿದೆಯೋ ಎನ್ನುವದನ್ನು ಪೋಲೀಸರು ಪರಶೀಲನೆ ನಡೆಸಿದ್ದಾರೆ..

ಹಿಂಡಲಗಾ ಜೈಲಿನಲ್ಲಿ ಮಾರಾಮಾರಿ ಸಾಮಾನ್ಯವಾಗಿದೆ. ಪೋಲೀಸ್ ಅಧಿಕಾರಿಗಳು ಹತ್ತು ಹಲವು ಬಾರಿ ಜೈಲಿನ ಮೇಲೆ ದಾಳಿ ಮಾಡಿದ್ದಾರೆ ಆದ್ರೆ ಪೋಲೀಸರ ಕೈಗೆ ಏನೂ ಸಿಕ್ಕಿಲ್ಲ ಒಳಗಿನ ಮರ್ಮ ಇನ್ನುವರೆಗೆ ಬೆಳಕಿಗೆ ಬಂದಿಲ್ಲ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *