Breaking News

ಗೋಮೌಂಸ ಸಾಗಿಸುತ್ತಿದ್ದ ನಾಲ್ಕು ವಾಹನಗಳು ಫೋಲೀಸರ ವಶಕ್ಕೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಿಂದ ಪಕ್ಕದ ಗೋವಾ ರಾಜ್ಯಕ್ಕೆ ಗೋಮೌಂಸ ಸಾಗಾಟ ಅವ್ಯಾಹತವಾಗಿ ನಡೆದಿದೆ.ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆ ವ್ಯಾಪ್ತಿಯ ಕರ್ಲೇ ಗ್ರಾಮದ ಬಳಿ ಗೋಮೌಂಸ ತುಂಬಿದ ವಾಹನಕ್ಕೆ ಬೆಂಕಿ ಹಚ್ಚಿದ ಬೆನ್ನಲ್ಲೇ, ಹಿರೇಬಾಗೇವಾಡಿ ಗ್ರಾಮದ ಬಳಿ ಮತ್ತೆ ನಾಲ್ಕು ವಾಹನಗಳು ಸಿಕ್ಕಿಬಿದ್ದಿವೆ.

ಗೋಮೌಂಸ ತುಂಬಿಕೊಂಡು ಬರುತ್ತಿದ್ದ ನಾಲ್ಕು ವಾಹನಗಳನ್ನು ಹಿರೇಬಾಗೇವಾಡಿ ಗ್ರಾಮದ ಟೋಲ್ ಬಳಿ ಪೋಲೀಸರು ವಶಕ್ಕೆ ಪಡೆದಿದ್ದಾರೆ.

ನಾಲ್ಕು ವಾಹನಗಳನ್ನು ವಶಕ್ಕೆ ಪಡೆದಿರುವ ಪೋಲೀಸರು,ನಾಲ್ಕು ವಾಹನಗಳ ಚಾಲಕರನ್ನು ವಿಚಾರಣೆಗೊಳಪಡಿಸಿದ್ದಾರೆ.

ಆಕ್ರಮವಾಗಿ ಗೋಮೌಂಸ ಸಾಗಿಸುತ್ತಿದ್ದ ನಾಲ್ಕು ವಾಹನಗಳು ಪೋಲೀಸರ ವಶದಲ್ಲಿದ್ದು ಇವರ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ಹಿರೇಬಾಗೇವಾಡಿ ಠಾಣೆಯಲ್ಲಿ ನಡೆದಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *