Breaking News
Home / Uncategorized / ಡೋಂಟ್ ವರೀ….ಐ ಯಮ್ ಸ್ವಾರೀ……!

ಡೋಂಟ್ ವರೀ….ಐ ಯಮ್ ಸ್ವಾರೀ……!

ಬೆಳಗಾವಿ- ಕೊರೋನಾ ಕಾಲಿಟ್ಟಾಗ,ವೈದ್ಯಕೀಯ ಸಿಬ್ಬಂದಿಗೆ ಸರ್ಕಾರ ಕೊರೋನಾ ವಾರಿಯರ್ಸ್ ಅಂತಾ ಬಿರುದು ಕೊಟ್ಟಿತು,ಕ್ಯಾಂಡಲ್ ಹಚ್ಚಿತು,ಚಪ್ಪಾಳೆ ಬಾರಿಸಿತು,ದಿನ ಕಳೆದಂತೆ ಗೌಡರ ಕುದ್ರೆ ಬರ್ತಾ, ಬರ್ತಾ ,ಕತ್ತೆ ಆಯಿತು ಎನ್ನುವ ಹಾಗೆ ಸರ್ಕಾರ ಈಗ ಬದಲಾಗಿದೆ.ಕೋವಿಡ್ ಟೆಸ್ಟ್ ಮಾಡುವ ವೈದ್ಯಕೀಯ ಸಿಬ್ಬಂಧಿಗೆ ,ಹೊಟೇಲ್ ವಸತಿಯಿಂದ ಹೊರಹಾಕಿ,ಅವರಿಗೆ ಊಟದ ವ್ಯೆವಸ್ಥೆ ಮಾಡದೇ,ಅವರನ್ನು ಅತಂತ್ರರನ್ನಾಗಿ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಪ್ರತಿ ದಿನ ಶಿಪ್ಟ ಮೇಲೆ ಬೆಳಗಾವಿಯ ಕೋವಿಡ್ ಲ್ಯಾಬ್ ನಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂಧಿಗೆ ಬೆಳಗಾವಿಯ ಎರಡು ಖಾಸಗಿ ಹೊಟೇಲ್ ಗಳಲ್ಲಿ ಜಿಲ್ಲಾಡಳಿತ ಸರ್ಕಾರದ ಸೂಚನೆ ಮೇರೆಗೆ ವಸತಿ ಊಟದ ವ್ಯೆವಸ್ಥೆ ಮಾಡಿತ್ತು ಆದ್ರೆ ಇಂದು ಏಕಾ ಏಕಿ ಈ ಸಿಬ್ಬಂಧಿಗಳನ್ನು ಹೊಟೇಲ್ ಗಳಿಂದ ಖಾಲಿ ಮಾಡಿಸಿ,ನೀವು ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಟ್ರೇನಿಂಗ್ ಸೆಂಟರ್ ನಲ್ಲಿ ಇರಿ ನಿಮ್ಮ ಊಟದ ವ್ಯೆವಸ್ಥೆ ನೀವೇ ಮಾಡಿಕೊಳ್ಳಿ, ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟ ಹಿನ್ನಲೆಯಲ್ಲಿ ಈ ವೈದ್ಯಕೀಯ ವಾರಿಯರ್ಸ್ ಗಳು ಈಗ ಹೊಟೇಲ್ ಗಳನ್ನು ಖಾಲಿ ಮಾಡಿ ತಮ್ಮ ಲಗ್ಗೇಜ್ ಗಳನ್ನು ಕ್ಯಾರಿ ಮಾಡಿದ್ದಾರೆ.

ಕೋವಿಡ್ ಲ್ಯಾಬ್ ನಲ್ಲಿ ದಿನನಿತ್ಯ ನೂರಾರು ಶಂಕಿತರ ಕೋವಿಡ್ ಟೆಸ್ಟ್ ಮಾಡುವ,ವೈದ್ಯಕೀಯ ಸಿಬ್ಬಂಧಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬೆಳಗಾವಿಗೆ ಬಂದಿದ್ದಾರೆ,ಹೈ ರಿಸ್ಕನಲ್ಲಿ ಕೆಲಸ ಮಾಡುವ ಈ ಸಿಬ್ಬಂಧಿಗೆ ಸರ್ಕಾರ ನಡು ರಸ್ತೆಯಲ್ಲೇ ಕೈಬಿಟ್ಟಿರುವದು ದುರ್ದೈವ ಎನ್ನಬೇಕೋ.? ಅಥವಾ ಸರ್ಕಾರದ ಚೆಲ್ಲಾಟ ಎನ್ನಬೇಕೋ ತಿಳಿಯುತ್ತಿಲ್ಲ.

ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ವೈದ್ಯಕೀಯ ಸಿಬ್ಬಂಧಿಗೆ ,ಡೋಂಟ್ ವರೀ…ಐ ಯಮ್ ಸ್ವಾರೀ….! ಎಂದು ಹೊಟೇಲ್ ಖಾಲಿ ಮಾಡಿಸಿ ಈ ವೈದ್ಯಕೀಯ ಸಿಬ್ಬಂಧಿಗೆ ಊಟದ ವ್ಯೆವಸ್ಥೆ ಮಾಡದೇ ಸರ್ಕಾರಿ ಟ್ರೇನಿಂಗ್ ಸೆಂಟರ್ ಗೆ ಶಿಪ್ಟ್ ಮಾಡಿದ್ದಾರೆ

About BGAdmin

Check Also

ಜೂನ್ 15 ರವರೆಗೆ ಅಂತರರಾಜ್ಯ ವಲಸೆಗರಿಗೆ ಪಾಸ್ ಇಲ್ಲ.

ಬೆಳಗಾವಿ- ಅಂತರರಾಜ್ಯ ವಲಸೆಗರಿಗೆ ಜೂನ್ 15 ರವರೆಗೆ ಪಾಸ್ ಇಲ್ಲ ಎಂದು ಬೆಳಗಾವಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ