Breaking News
Home / LOCAL NEWS / ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಖನ್ ಸ್ಪರ್ದೆ ಇಲ್ಲ-ಸಹೋದರರ ಸ್ಪಷ್ಠನೆ

ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಖನ್ ಸ್ಪರ್ದೆ ಇಲ್ಲ-ಸಹೋದರರ ಸ್ಪಷ್ಠನೆ

ಬೆಳಗಾವಿ:
ಮುಂಬರುವ 2018 ರ ವಿಧಾನ ಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಟಿಕೇಟ್ ಖಚಿತ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ಕೈಗಾರಿಕಾ ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿ ತಾಲೂಕಿನ ಹಿರೇಭಾಗೇವಾಡಿ ಗ್ರಾಮದ ಫಡಿ ಬಸವೇಶ್ವರ ದೇವಸ್ಥಾನದ ಕಲ್ಯಾಣಮಂಟಪದಲ್ಲಿ ಶನಿವಾರ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಘಟಕದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಪಂ, ತಾಪಂ ಹಾಗೂ ವಿವಿಧ ಸಂಘ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಕರ್ನಾಟಕ ಸರ್ಕಾರದ ನಾಮ ನಿರ್ದೇಶಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಳೆದ ಬಾರಿ ಅತೀ ಕಡಿಮೆ ಮತಗಳ ಅಂತರದಿಂದ ಪರಾಭಾವಗೊಂಡಿದ್ದ ಲಕ್ಷ್ಮೀ ಹೆಬ್ಬಾಳಕರ್ ಅವರೇ ಈ ಬಾರಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಫರ್ಧೆ ಮಾಡುವುದು ಖಚಿತ. ಅಲ್ಲದೇ, ಈ ಕ್ಷೇತ್ರದಿಂದ ಲಖನ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ಸ್ಫರ್ಧೆ ಒಡ್ಡುವುದಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಇದರಿಂದ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಂತೋಷ ಕೂಡ ಆಗಿದೆ ಎಂದರು.
ಈ ಕ್ಷೇತ್ರದ ಜನರೊಂದಿಗೆ, ಕಾರ್ಯಕರ್ತರೊಂದಿಗೆ ಈಗಿನಿಂದಲೇ ಲಕ್ಷ್ಮೀ ಹೆಬ್ಬಾಳಕರ್ ಅವರು ಸಂಘಟನೆಯ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಸಂಪರ್ಕ ಬೆಳಿಸಿಕೊಳ್ಳುವುದು ಉತ್ತಮ. ಅದರ ಜೊತೆಯಲ್ಲಿ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾವುಟ ಹಾರುವುದು ಖಚಿತ. ಮತದಾರರು ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಆರ್ಶಿವಾದ ಮಾಡಬೇಕು ಎಂದರು.
ಮುಂಬರುವ 2018 ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‍ನಿಂದ 10 ರಿಂದ 12 ಶಾಸಕರನ್ನು ಆಯ್ಕೆಯಾಗುವುದು ಖಚಿತ. ಇದಕ್ಕೆ ಕಾರ್ಯಕರ್ತರು ಮತದಾರರು ಒಗ್ಗಟ್ಟಾಗಿ ಜಿಲ್ಲೆಯಲ್ಲಿ ಪಕ್ಷ ಕಟ್ಟುವ ಕಾರ್ಯ ಮಾಡಬೇಕು. ಕಳೆದ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಜೆಪಿಯಿಂದ ಸೋತಿಲ್ಲ, ನಮ್ಮ ತಪ್ಪಿನಿಂದ ಸೋಲು ಅನುಭವಿಸಬೇಕಾಯಿತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಶಕ್ತಿ ಯಾಗಲಿದೆ. ಜಿಲ್ಲೆಗೆ 10 ರಿಂದ 12 ಶಾಸಕರನ್ನು ಆಯ್ಕೆ ಮಾಡಬೇಕಾದ ಮಹತ್ತರ ಜವಾಬ್ದಾರಿ ನನ್ನ ಮೇಲಿದೆ. ಒಂದು ವೇಳೆ ಅದು ಆಗದಿದ್ದರೇ ನಾನು ವಿಧಾನಸೌಧ ಮೆಟ್ಟಿಲು ಹತ್ತಿಯು ಉಪಯೋಗವಿಲ್ಲ. ಅದು ನನ್ನ ಸೋಲಾಗುತ್ತದೆ. ಎಂದರು.
ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ನನಗೆ ಎರಡು ಬಾರಿ ಚುನಾವಣೆಯಲ್ಲಿ ಸೋಲಾಗಿದೆ ಆದರೆ ನಾನು ಎಂದೆಂದಿಗೂ ದೈರ್ಯವನ್ನು ಕಳೆದುಕೊಂಡಿಲ್ಲ ಅಧಿಕಾರದಲ್ಲಿ ಇರುವವರು ಸಾಮಾಜಿಕ ಸೇವೆ ಮಾಡುವದು ಸಹಜ ಅಧಿಕಾರ ಇಲ್ಲದಿದ್ದರೂ ನಾನು ಇದು ಈಶ್ವರನ ಸೇವೆ ಎಂದು ತಿಳಿದು ಸೇವೆ ಮಾಡುತ್ತಿದೇನೆ ನಾನು ನಿಮ್ಮ ಮನೆಯ ಮಗಳು ಸಾಯುವವರೆಗೂ ನಿಮ್ಮ ಮನೆಯ ಮಗಳಾಗಿ ನಿಮ್ಮ ಸೇವೆ ಮಾಡುವ ಸಂಕಲ್ಪ ಮಾಡಿದ್ದೇನೆ.ಬೆಳಗಾವಿ ಗ್ರಾಮೀಣ ಕ್ಷೇತ್ರ ಅಭಿವೃದ್ದೀಯ ದೃಷ್ಠಿಯಿಂದ ತೀರಾ ಹಿಂದುಳಿದಿದ್ದು ಈ ಬಾಗದ ಶಾಸಕರಿಗೆ ಕ್ಷೇತ್ರದ ಕುಡಿಯು ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದರು

ಬೆಳಗಾವಿ ಉತ್ತರ ಶಾಸಕ ಫಿರೋಜ್ ಸೇಠ್ ಅವರು ಮಾತನಾಡಿ ನಮ್ಮದು ಒಂದೇ ಒಂದು ಬೇಡಿಕೆ ಎಂದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಶಾಸಕಿಯಾಗಿ ನೋಡುವುದು. ಅದು ಮತದಾರಾರದ ನಿಮ್ಮಲ್ಲಿ ಇದೆ. ಆದ್ದರಿಂದ ಅವರನ್ನು ಶಾಸಕಿಯಾಗಿ ಆಯ್ಕೆ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು.
ಕಾಂಗ್ರೆಸ್ ಯುವ ಧುರೀಣ ಲಖನ್ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ನಾನೂ ಸ್ಫರ್ಧಿಸುವುದಿಲ್ಲ. ಕಳೆದ ಬಾರಿ ಆಯ್ಕೆ ಬಯಸಿದ್ದ ಲಕ್ಷ್ಮೀ ಹೆಬ್ಬಾಳಕರ್ ಅವರೇ ಈ ಬಾರಿಯೂ ಕೂಡ ಸ್ಫರ್ಧೆ ಮಾಡಲಿದ್ದು, ಮತದಾರರು ಅವರಿಗೆ ಅವಕಾಶ ಕೊಟ್ಟು ಬಹುಮತದಿಂದ ಆಯ್ಕೆ ಮಾಡಬೇಕು. ಕಳೆದ ಬಾರಿ 2 ಸಾವಿರ ಮತ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಆದರೆ ಈ ಬಾರಿ 20 ಸಾವಿರಕ್ಕಿಂತ ಹೆಚ್ಚು ಅಂತರದಿಂದ ಜಯ ಕೊಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಡೇಕೊಳ್ಳಮಠದ ನಾಗೇಂದ್ರ ಸ್ವಾಮಿ, ಮುತ್ನಾಳ ಕೇದಾರ ಮಠದ ಶಿವಾನಂದ ಸ್ವಾಮಿ, ಹಿರೇಭಾಗೇವಾಡಿ ದರ್ಗಾ ಅಜ್ಜಾನವರು, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ವಿನಯ ನಾವಲಗಟ್ಟಿ, ಡಿಸಿಸಿ ಬ್ಯಾಂಕ್ ನರ್ದೆಶಕ ಶಿವಾನಂದ ಡೋಣಿ ರಾಜು ತಳವಾರ ಶಂಕರ ಮಾಡಲಗಿ, ಶಂಕರಗೌಡ ಪಾಟೀಲ, ಸಿ.ಸಿ. ಪಾಟೀಲ ಸೇರಿದಂತೆ ಮತ್ತೀತರರ ಮುಖಂಡರು ಇದ್ದರು.

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *