ಬೆಳಗಾವಿ- ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದರೆ ಸಾಕು ಘಮ ಘಮ ಮಸಾಲೆಯ ಸುವಾಸನೆ ಮೂಗಿಗೆ ಬಡಿಯುತ್ತದೆ ಏನಪ್ಪ ಇದು ಇಲ್ಲಿ ಪಕ್ಕದಲ್ಲಿ ಮದುವೆಯ ಅಡುಗೆ ನಡೆಯುತ್ತಿದೆ ಎಂದು ಕೆಲವರು ಅಂದುಕೊಳ್ಳುತ್ತಾರೆ ಗೊತ್ತಿದ್ದವರು ಸೀದಾ ಪಕ್ಕದಲ್ಲಿರುವ ನೀಯಾಜ್ ಹೊಟೆಲ್ ಗೆ ಹೋಗಿ ತರಹ ತರಹದ ತಿನಿಸುಗಳ ರುಚಿ ನೋಡಿ ಮುಂದಿನ ಕೆಲಸಕ್ಕೆ ಹೋಗುತ್ತಾರೆ
ಬೆಳಗಾವಿಯ ನಿಯಾಜ್ ಹೊಟೆಲ್ ಎಷ್ಟೊಂದು ಫೇಮಸ್ ಆಗಿದೆ ಎಂದರೆ ಈ ಹೊಟೆಲ್ ಅಡುಗೆಯ ರುಚಿ ಬೆಳಗಾವಿಯಿಂದ ಬೆಂಗಳೂರು ಗೋವಾ ದೆಹಲಿಯವರೆಗೆ ಪಸರಿಸಿದೆ ಬೆಳಗಾವಿಯ ಜನ ಬೇರೆ ಊರಿಗೆ ಹೋದಾಗ ನಾವು ಬೆಳಗಾವಿಯವರು ಎಂದು ಹೇಳಿದರೆ ಸಾಕು ಹೋ ಅಲ್ಲಿ ನಿಯಾಜ್ ಹೊಟೆಲ್ ಇದೆ ಅಲ್ಲಾ ಎಂದು ನೆನಪಿಸುತ್ತಾರೆ
ಇಲ್ಲಿಯ ಬಿರಿಯಾನಿ ಸೇರಿದಂತೆ ಬಗೆ ಬಗೆಯ ತಿನಿಸುಗಳು ಸಾವಿರಾರು ಗ್ರಾಹಕರನ್ನು ಆಕಷರ್ಷಿಸಿದೆ ಶಾಕಾಹಾರಿ ಮೌಂಸಾಹಾರಿ ಚೈನಿಸ್ ಮೊಗಲಾಯಿ ಪಂಜಾಬಿ ಸೇರಿದಂತೆ ಅನೇಕ ಬಗೆಯ ಫುಡ್ ಇಲ್ಲಿ ಸಿಗುತ್ತದೆ ನಿಯಾಜ್ ಹೊಟೆಲ್ ಗೆ ಈಗ ಹೊಸ ಲುಕ್ ಕೊಡುವ ಕೆಲಸ ಭರದಿಂದ ಸಾಗಿದೆ ಹೊಸ ಲುಕ್ ಜೊತೆಗೆ ಹೊಸ ಹೊಸ ಟೇಸ್ಟ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ
ಬಿರಿಯಾನಿ ಖಬಾಬ್ ಸೇರಿದಂತೆ ಸ್ವೀಟ್ ಐಟಂ ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ ಒಟ್ಟಾರೆ ಬೆಳಗಾವಿಯ ನಿಯಾಜ್ ಹೊಟೆಲ್ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿ ಪಡೆದು ಅನೇಕ ರಾಜ್ಯಗಳಲ್ಲಿ ಹೊಟೆಲ್ ಗಳನ್ನು ಆರಂಭಿಸಿ ಬೆಳಗಾವಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಕೊಂಡೊಯ್ಯುವ ಕೆಲಸ ಮಾಡುತ್ತಿದೆ