Breaking News
Home / ಸಿನೆಮಾ / ಕುಂದಾನಗರಿಯಿಂದ ಗಾಂಧೀನಗರಕ್ಕೆ ಜಯಸೂರ್ಯ

ಕುಂದಾನಗರಿಯಿಂದ ಗಾಂಧೀನಗರಕ್ಕೆ ಜಯಸೂರ್ಯ

 ಬೆಳಗಾವಿ-ಪ್ರತಿಭೆಯೊಂದು ಇದ್ದರೆ ಎಲ್ಲಿಯಾದರೂ ಮನ್ನಣೆ ಸಿಗುತ್ತೆ ಅನ್ನುವ ಮಾತು ಮತ್ತೊಮ್ಮೆ ನಿಜವಾಗಿದೆ. ಕುಂದಾನಗರಿಯಿಂದ ಗಾಂಧಿ ನಗರಕ್ಕೆ ಮತ್ತಷ್ಟೂ ಹೊಸ ಪ್ರತಿಭೆಗಳು ಎಂಟ್ರಿ ಕೊಟ್ಟು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವ ದಿನಗಳು ಸನ್ನೀಹಿತವಾಗಿವೆ. ಬಹುತೇಕ ಬೆಳಗಾವಿಯ ಜಿಲ್ಲೆಯ ಮಾಧ್ಯಮ ಮಿತ್ರರೇ ಸೇರಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಆ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
 ಹೌದು… ಬೆಳಗಾವಿಯ ಪತ್ರಕರ್ತ ಸಂತೋಷ ಶ್ರೀರಾಮುಡು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಟಿಸಿ ನಿರ್ದೇಶಿಸಲಿರುವ ಜಯಸೂರ್ಯ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಸಮಾರಂಭ ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿಂದು ಜರುಗಿತು. ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರದ ನಾಯಕ ನಟ ನಿರ್ಮಾಪಕ ನಿರ್ದೇಶಕ ಸಂತೋಷ ಶ್ರೀರಾಮುಡು ತಾವು ಕೇವಲ ಸಿನೆಮಾ ಮಾಡುವ ಕಲ್ಪನೆಯೊಂದಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿಲ್ಲ , ಉತ್ತರ ಕರ್ನಾಟಕದಲ್ಲೂ ಕಲಾವಿದರಿದ್ದಾರೆ ಅವರ ಕಲೆಯನ್ನು ಗುರುತಿಸುವ ಪ್ರೋತ್ಸಾಹಿಸುವ ಜನರ ಸಂಖ್ಯೆ ಕಡಿಮೆಯಾಗಿದೆ. ಜಯಸೂರ್ಯ ಚಿತ್ರದಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ಪ್ರಾಶಸ್ತ್ಯ ಕೊಟ್ಟಿದ್ದು ದೇಶ ಪ್ರೇಮ, ಸಾಮರಸ್ಯ ಸಾರುವ ಚಿತ್ರಕತೆಯಲ್ಲಿ ಎಲ್ಲರೂ ಹೊಸಬರೇ ಆಗಿದ್ದೇವೆ ಕಲೆ ಸಾಹಿತ್ಯ ಸಂಗೀತ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದು ಚಿತ್ರದ ಚಿತ್ರೀಕರಣ ಅಕ್ಟೋಬರ್ ಮೊದಲ ಚಿತ್ರದ ಮೊದಲ ಹಂತದ ಚಿತ್ರೀಕರಣ ಬೆಳಗಾವಿ ಜಿಲ್ಲೆಯ ವಿವಿಧೆಡೆ ನಡೆಯಲಿದೆ ಅಂದ್ರು.
ಆಡಿಯೋ ಸೀಡಿ ಬಿಡುಗಡೆಯ ವೇಳೇ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಸತೀಶ ಜಾರಕೀಹೋಳಿ ಮಾತನಾಡುತ್ತ ಸಾಧಕರಿಗೆ ವಿಜಯದ ಹೆಬ್ಬಾಗಿಲು ಯಾವತ್ತು ತೆರೆದಿರುತ್ತದೆ. ಕನಸು ಕಾಣುವುದರ ಜೊತೆಗೆ ನಿರಂತರ ಪ್ರಯತ್ನಗಳು ನಮ್ಮದಾದರೆ ಕನಸುಗಳು ನನಸಾಗುತ್ತವೆ ಎಂದ್ರು. ಬೆಳಗಾವಿ ಜಿಲ್ಲೆಯಲ್ಲಿ ಡಾಕ್ಟರ್ ಚಂದ್ರಶೇಖರ ಕಂಬಾರರ ನಿರ್ದೇಶನದ ಕರೀಮ್, ದಿಲೀಪ ಕುಮಾರ ಹಾಗೂ ಅಮಿತಾಬ್ ಸೇರಿದಂತೆ ಹಲವರು ಈ ಭಾಗದಲ್ಲಿ ತಮ್ಮ ಚಿತ್ರಗಳಲ್ಲಿ ನಟಿಸಿದ್ದು ಬೆಳಗಾವಿ ಜಿಲ್ಲೆ ಕಲಾವಿದರ ತವರೂರು ಆಗಿದೆ. ಎಲ್ಲಿ ಕಲೆ ಇರುತ್ತದೆಯೋ ಅಲ್ಲಿ ಜಯ ಇರುತ್ತದೆ. ಜಯಸೂರ್ಯ ಚಿತ್ರ ಯಶಸ್ಸು ಗಳಿಸಲಿ ಎಂದು ಕಲಾವಿದರನ್ನು ಹಾರೈಸಿದರು.
ಇದೆ ವೇಳೆ ತಮಗೂ ಕೂಡಾ ಚಿತ್ರ ರಂಗಕ್ಕೆ ಪ್ರವೇಶ ಮಾಡಬೇಕು ಅನ್ನುವ ಆಸೆ ಇದ್ದು ಅತಿ ಶಿಘ್ರದಲ್ಲೇ ಹೈ ಕಮಾಂಡ ಅನ್ನುವ ಚಿತ್ರ ಸೆಟ್ಟೇರಲಿದೆ ಎಂದ್ರು.
ಇನ್ನು ಸಿನಿಮಾ ರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಳಗಾವಿಯ ಮಾದ್ಯಮ ಮಿತ್ರರೆಲ್ಲರೂ ಸೇರಿ ನಿರ್ಮಿಸುತ್ತಿರುವ ಜಯಸೂರ್ಯ ಚಲನಚಿತ್ರ ಅಸ್ಪೃಶ್ಯತೆ, ಸಮಾಜಿಕ ಕಳಕಳಿ ಜೊತೆಗೆ ದೇಶ ಪ್ರೇಮದ ಕಥೆಯನ್ನ ಒಳಗೊಂಡಿದ್ದು ಇದೇ ಅಕ್ಟೋಬರ್ ಎರಡನೆ ವಾರದಲ್ಲಿ ಚಿತ್ರದ ಚಿತ್ರಿಕರಣ ನಡೆಯಲಿದೆ. ವಿಶೇಷ ಅಂದ್ರೆ ಪತ್ರಕರ್ತ ಸಂತೋಷ್ ನಿರ್ಮಾಣದ ಈ ಚಿತ್ರದಲ್ಲಿ ಬೆಳಗಾವಿ ಜಿಲ್ಲೆಯ ಹೊಸ ಮುಖಗಳೇ ಇದ್ದು ಬಹುತೇಕ ಪತ್ರಕರ್ತರೇ ಚಿತ್ರದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪತ್ರಕರ್ತರ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಅಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಎನ್.ಜಯರಾಮ್ ಹಾರೈಸಿದ್ರು. ಒಟ್ನಲ್ಲಿ ಚಿತ್ರರಂಗದ ಹಲವು ಕನಸುಗಳನ್ನು ಕಟ್ಟಿಕೊಂಡು ಹೊಸ ಕಲಾವಿದರಿಗೆ ಕೊಲ್ಹಾಪೂರ ಮಹಾಲಕ್ಷ್ಮಿ ಸಿನಿ ಕಂಬೈನ್ಸ ಉತ್ತಮ ವೇದಿಕೆಯಾಗಿದ್ದು ಈ ಭಾಗದ ಕಲಾವಿದರು ಮತ್ತು ಕಲಾಸಕ್ತರಿಗೆ ಹರ್ಷ ತಂದಿದ್ದು, ಜಯಸೂರ್ಯ ಚಿತ್ರತಂಡಕ್ಕೆ ನಮ್ಮ ಕಡೆಯಿಂದಲೂ ಶುಭಹಾರೈಕೆ.

Check Also

ಸತೀಶ ಜಾರಕಿಹೊಳಿ ಹೈಕಮಾಂಡ್ ಚಿತ್ರದ ಆಡಿಶನ್ ಗೆ ಸಿದ್ಧರಾಮಯ್ಯ ಹಾಜರ್

ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ನಿರ್ಮಾಣದ ಹೈಕಮಾಂಡ ಚಿತ್ರದ ಆಡಿಶನ್ ಬೆಳಗಾವಿಯಲ್ಲಿ ನಡೆಯಿತು ಇದರಲ್ಲಿ ಜ್ಯುನೀಯರ ಸಿದ್ಧರಾಮಯ್ಯ ಪಾಲ್ಗೊಂಡು ಎಲ್ಲರ …

Leave a Reply

Your email address will not be published. Required fields are marked *