Breaking News
Home / Breaking News / 100 ಕುಟುಂಬಗಳಿಗೆ ಆಹಾರ ಸಾಮುಗ್ರಿಗಳ ಕಿಟ್ ವಿತರಿಸಿದ ಹುಕ್ಕೇರಿ ಹಿರೇಮಠದ ಶ್ರೀಗಳು

100 ಕುಟುಂಬಗಳಿಗೆ ಆಹಾರ ಸಾಮುಗ್ರಿಗಳ ಕಿಟ್ ವಿತರಿಸಿದ ಹುಕ್ಕೇರಿ ಹಿರೇಮಠದ ಶ್ರೀಗಳು

ನಾಳೆ ಬೆಳಗಾವಿ ‌ಹುಕ್ಕೇರಿ ಹಿರೇಮಠದ ಶಾಖೆಯಿಂದ ಅಗತ್ಯ ‌ದಿನಸಿ ಕಾರ್ಯಕ್ರಮ ವಿತರಣೆ

ಬೆಳಗಾವಿ

ನಗರದ ಹುಕ್ಕೇರಿ ಹಿರೇಮಠ ಶಾಖೆಯ ಸುವಿಚಾರ ಚಿಂತನ ಬಳಗದಿಂದ ಪ್ರತಿ ತಿಂಗಳು ಮೊದಲ ಭಾನುವಾರ ನಡೆಸುವ ಸುವಿಚಾರ ಚಿಂತನ ಕಾರ್ಯಕ್ರಮ ರದ್ದಾಗಿದ್ದು ಅದರ ಬದಲು ಕೊರೋನೊ ವೈರಸ್ ಭೀತಿಯಿಂದ ಪ್ರಧಾನಿ ನರೇಂದ್ರ ‌ಮೋದಿ ಭಾರತವನ್ನು ಲಾಕ್ ಡೌನ ಮಾಡಿದ ಹಿನ್ನೆಲೆಯಲ್ಲಿ ಹುಕ್ಕೇರಿ‌ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಏ.5 ಭಾನುವಾರ ಜಿಲ್ಲಾಧಿಕಾರಿಗಳ ಆದೇಶದಂತೆ ನಗರ ಪಾಲಿಕೆಗೆ ಒಂದ ನೂರು ಕುಟುಂಬಗಳಿಗೆ ಅಗತ್ಯ ಸಮಾಗ್ರಿ ಕಿಟ್ ವಿತರಿಸಲಾಗುತ್ತಿದೆ.

ಚೀನಾದಿಂದ ಆರಂಭವಾದ ಕೊರೋನೊ‌ ವೈರಸ್ ಇಡೀ ವಿಶ್ವದಾದ್ಯಂತ ರಣಕೇಕೆ ಹಾಕುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏ.14ರ ವರೆಗೆ ಭಾರತವನ್ನು ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಬಡ ಕುಟುಂಬಗಳಿಗೆ ಅಗತ್ಯ ದಿನಸಿ ವಸ್ತುಗಳನ್ನು ಕೊಂಡುಕೊಳ್ಳು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ವತಿಯಿಂದ ಹುಕ್ಕೇರಿ, ರಾಯಬಾಗ, ಚಿಕ್ಕೋಡಿ ಸೇರಿದಂತೆ ವಿವಿಧ ಕಡೆಯಲ್ಲಿ ಬಡವರಿಗೆ ಅಗತ್ಯ ದಿನಸಿಯ ಕಿಟ್ ನ್ನು ವಿತರಿಸಲಾಗಿದೆ. ಬೆಳಗಾವಿ ನಗರದ ಹುಕ್ಕೇರಿ ಹಿರೇಮಠದ ಶಾಖೆಯ ಸುವಿಚಾರ ಚಿಂತನ ಬಳಗದಿಂದ ಮಹಾನಗರ ಪಾಲಿಕೆಗೆ ಸುಮಾರು 100 ಕುಟುಂಬಗಳಿಗೆ ಅಗತ್ಯ ದಿನಸಿಯನ್ನು ಶ್ರೀಮಠ ನೀಡುತ್ತಿದೆ.
ಭಾನುವಾರ ಬೆಳಗ್ಗೆ 10.30ಕ್ಕೆ ಕೇಂದ್ರ ಸಚಿವ ಸುರೇಶ ಅಂಗಡಿ, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಜಿಲ್ಲಾಡಳಿತದ ಆದೇಶದ ಅನ್ವಯ ಬೆಳಗಾವಿ ಮಹಾನಗರ ಪಾಲಿಕೆಗೆ ಅಗತ್ಯ ದಿನಸಿ ಕೊಡುವ ಕಾರ್ಯವನ್ನು ಶ್ರೀಮಠ ಮಾಡುತ್ತಿದೆ.
ಸುವಿಚಾರ ಚಿಂತನ ಕಾರ್ಯಕ್ರಮದಲ್ಲಿ ಪ್ರತಿ ತಿಂಗಳು ಭಾಷಣ ಮತ್ತು ಮಹಾಪ್ರಸಾದ ಕಾರ್ಯಕ್ರಮ ಇರುತ್ತದೆ. ಆದರೆ ಈ ಬಾರಿ ಅದು ಇಲ್ಲ. ಆದರೆ ಸೇವೆ ಮಾತ್ರ ಸುವಿಚಾರ ಚಿಂತನ ಬಳಗ ಮರೆತಿಲ್ಲ.
ಪ್ರತಿ ತಿಂಗಳ ಮೊದಲ ಭಾನುವಾರ ಸುವಿಚಾರ ಚಿಂತನ ಕಾರ್ಯಕ್ರಮ ಜರಗುತ್ತದೆ. ಆದರೆ ಈ ಬಾರಿ ಕೊರೋನೊ ವೈರಸ್ ಭೀತಿ ಇರುವುದರಿಂದ ಆ ಕಾರ್ಯಕ್ರಮ ರದ್ದು ಮಾಡುತ್ತಿಲ್ಲ. ಬದಲಾಗಿ ನಿರ್ಗತಿಕರಿಗೆ, ಬಡವರಿಗೆ ಅಗತ್ಯ ದಿನಸಿ ಗಳನ್ನು ನೀಡುವ ಮೂಲಕ ಕಾರ್ಯಕ್ರಮ ನಡೆಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ವೀರುಪಾಕ್ಷಯ್ಯ ನೀರಲಗಿಮಠ, ಅರವಿಂದ ಜೋಶಿ, ಅರವಿಂದ ಪಾಟೀಲ, ಚಂದ್ರಶೇಖರಯ್ಯ ಸಾಲಿಸವಡಿಮಠ, ಮಂಜುಳಾ ಬಳ್ಳಾರಿ ಈಗಾಗಲೇ ಸೇವೆಯನ್ನು ಶ್ರೀಮಠಕ್ಕೆ ಮಾಡಿದ್ದಾರೆ. ಅವರು ಮಾಡಿರುವ ಧನವನ್ನು ದಿನಸಿ ಸಾಮಾಗ್ರಿಗೆ ವಿನಿಯೋಗಿಸಲಾಗುವುದು.

ಕನ್ನಡ ಕ್ರೀಯಾ ಸಮಿತಿಯ ಅಧ್ಯಕ್ಷ ಅಶೋಕ‌ ಚಂದರಗಿ ಮಾರ್ಗದರ್ಶನ ಮಾಡಲಿದ್ದಾರೆ. ಎಲ್ಲರೂ ಸೇರಿ ಕೊರೋನೊ ವೈರಸ್ ವಿರುದ್ದ ಹೊರಾಡುವ ಅಗತ್ಯವಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಹುಕ್ಕೇರಿ ಹಿರೇಮಠದ ಸುವಿಚಾರ ಚಿಂತನ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.

Check Also

ಕಾಂಗ್ರೆಸ್ ಪಾರ್ಟಿಯಲ್ಲೂ ಚಹಾ ಪೇ ಚರ್ಚಾ ವೀದೌಟ್ ಖರ್ಚಾ…!!!

ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ …

Leave a Reply

Your email address will not be published. Required fields are marked *