ಬೆಳಗಾವಿ-ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ವಲಯದ ಜಿಲ್ಲೆಗಳಾದ ಬೆಳಗಾವಿ ಬಾಗಲಕೋಟೆ,ವಿಜಯಪೂರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ೧೧ ಹೊಸ ಪೋಲೀಸ್ ಠಾಣೆಗಳನ್ನು ಸರ್ಕಾರ. ಮಂಜೂರು ಮಾಡಿದೆ ಎಂದು ಉತ್ತರ ವಲಯದ ಐಜಿಪಿ ರಾಮಚಂದ್ರ ರಾವ್ ತಿಳಿಸಿದ್ದಾರೆ
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬೆಳಗಾವಿ ಜಿಲ್ಲೆಯ ಹಾರೂಗೇರಿ,ಖಡಕಲಾಟ, ಚಿಕ್ಕೇಡಿ ಸಂಚಾರ ಮತ್ತು ಮಹಿಳಾ ಠಾಣೆಗಳು ಮಂಜೂರಾಗಿದೆ ಬಾಗಲಜೋಟೆ ಜಿಲ್ಲೆಗೆ ಎರಡು ವಿಜಯಪೂರ ಜಿಲ್ಲೆಗೆ ಮೂರು ಧಾರವಾಡ ಮತ್ತು ಗದಗ ಜಿಲ್ಲೆಗೆ ತಲಾ ಒಂದು ಪೋಲೀಸ್ ಠಾಣೆ ಮಂಜೂರಾಗಿದೆ
ಉತ್ತರ ವಲಯದ ಜಿಲ್ಲೆಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಆದರೆ ರಸ್ತೆ ಅಪಘಾತ ಪ್ರಕರಣಗಳಲ್ಲಿ ನೂರಾರು ಜನ ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು ರಸ್ತೆ ಸುರಕ್ಷತಾ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಪಘಾತ ನಡೆಯುವ ಸ್ಥಳಗಳನ್ನು ಗುರುತಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಐಜಿಪಿ ತಿಳಿಸಿದರು
ಪೋಲೀಸ್ ಇಲಾಖೆಯ ಸಿಬ್ಬಂಧಿಗಳಿಗೆ ಸೇವಾ ಅರ್ಹತೆಗೆ ಅನುಸಾರವಾಗಿ ಪದೋನ್ನತಿ ನೀಡಲಾಗುತ್ತಿದೆ ಉತ್ತರ ವಲಯದ ೧೦೨೩ ಸಿಬ್ಬಂಧಿಗಳಿಗೆ ಪದೋನ್ನತಿ ನೀಡಲಾಗಿದೆ ಎಂದು ಐಜಿಪಿ ತಿಳಿಸಿದರು
ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಅ ವೈಜ್ಞಾನಿಕ ಸ್ಪೀಡ್ ಬ್ರೆಕ್ ಗಳು ಇವೆ ಇವುಗಳನ್ನು ತೆರವು ಮಾಡಿ ವೈಜ್ಞಾನಿಕ ಸ್ಪೀಡ್ ಬ್ರೆಕ್ ಗಳನ್ನು ನಿರ್ಮಿಸುವಂತೆ ಸಮಂಧಿಸಿದ ಇಲಾಖೆಗೆ ಸೂಚಿಸಲಾಗಿದೆ