Breaking News

ಬೆಳಗಾವಿಯಲ್ಲಿ ಮರ ಬಿದ್ದು ಮತ್ತೊಂದು ಅನಾಹುತ…!!

ಬೆಳಗಾವಿ- ಬೆಳಗಾವಿ ಮಹಾನಗರದ ಆರ್ ಟಿ ಓ ಸರ್ಕಲ್ ಬಳಿ ಮರ ಬಿದ್ದು ಯುವಕನ ಬಲಿ ಪಡೆದ ಬೆನ್ನಲಿಯೇ ಬೆಳಗಾವಿ ಮಹಾನಗರದಲ್ಲಿ ಮತ್ತೊಂದು ಮರ ಉರುಳಿ ಇನ್ನೊಂದು ಅನಾಹುತ ಆಗಿದೆ.

ನಗರದ ಮಾರ್ಕೆಟ್ ಪೋಲೀಸ್ ಠಾಣೆಯ ಬಳಿ ಬೃಹದಾಕಾರದ ಮರ ಉರುಳಿ ಇನ್ನೋವಾ ವಾಹನ ಸೇರಿದಂತೆ ಇತರ ವಾಹನಗಳು ಜಿಬ್ಬಿಯಾಗಿವೆ.

ಎರಡು ರಿಕ್ಷಾ ಹಾಗೂ ಒಂದು ಇನ್ನೋವಾ ವಾಹನ ಮರದ ಬುಡದಲ್ಲಿ ಸಿಲುಕಿವೆ.ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.ಬೆಳಗಾವಿಯ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿರುವ ಬೃಹದಾಕಾರದ ಮರ ನೆಲಕ್ಕುರುಳಿದ್ದು ವಿಶೇಷ.ಯಾಕಂದ್ರೆ ಬೀಳುವ ಹಂತದಲ್ಲಿರುವ ಮರಗಳನ್ನು ಸರ್ವೆ ಮಾಡಿ ದಶಕ ಗತಿಸಿದರೂ ಅರಣ್ಯ ಇಲಾಖೆ ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದೆ.

ಮರ ಬಿದ್ದು ಯುವಕನೊಬ್ಬ ಬಲಿಯಾಗಿ,ಇವತ್ತು ಎರಡು ಅಟೋ ಹಾಗೂ ಒಂದು ಇನ್ನೋವಾ ಮರದ ಬುಡಕ್ಕೆ ಬಂದಿವೆ.ಮುಂದೆ ಮತ್ತೊಂದು ಅನಾಹುತ ಆಗುವ ಮೊದಲು ಅರಣ್ಯ ಇಲಾಖೆ ಎಚ್ಚೆತ್ರುಕ್ಕೊಂಡು ಶಿಥಿಲಾವಸ್ಥೆಯಲ್ಲಿರುವ ಮರಗಳನ್ನು ನೆಲಕ್ಕೆ ಉರುಳಿಸಿ ಮುಂಜಾಗ್ರತೆ ವಹಿಸುವದು ಅಗತ್ಯ.

Check Also

ಮಹಾರಾಷ್ಟ್ರದ ನಾಗಪೂರದಲ್ಲಿ ಬೆಳಗಾವಿ ಗ್ರಾಮೀಣದ ನಾಗೇಶ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮುಖಂಡ,ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮುನ್ನೋಳಕರ ಕಾಲಿಗೆ ಚಕ್ರ ಕಟ್ಟಕೊಂಡು …

Leave a Reply

Your email address will not be published. Required fields are marked *