ಬೆಳಗಾವಿ:
ಶಹಾಪುರದಲ್ಲಿ ನಡೆದ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಇಬ್ಬರು ಮುಖ್ಯ ಬೆಟ್ಟಿಂಗ್ ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಕುಳಿತು ಬೆಳಗಾವಿಯ ಬೆಟ್ಟಿಂಗ್ ದಂಧೆಯನ್ನು ಮೆಂಟೈನ್ ಮಾಡುತ್ತಿದ್ದ ಹುಬ್ಬಳ್ಳಿಯ ಬುಕ್ಕಿಗಳಾದ ಕೇಶ್ವಾಪುರದ ಕೃಷ್ಣಾ ಸಾ, ರಘುನಾಥ್ ಸಾ ಕಬಾಡಿ(೨೭), ನೇಕಾರ ನಗರದ ದೇವೇಂದ್ರ ವಾಸುದೇವ ಜಡಿ(೨೧) ಇವರನ್ನು ಬಂಧಿಸಿರುವ ಪೊಲೀಸರು ೪೭,೨೬೦ ನಗದು ಹಣ, ೧೧ ಸಾವಿರ ಕಿಮ್ಮತ್ತಿನ ಮೊಬೈಲ್, ಟಿವಿ ಸೆಟಪ್ ಬಾಕ್ಸ್ ಸೇರಿದಂತೆ ಬೆಟ್ಟಿಂಗ್ ದಂಧೆಗೆ ಬಳಿಸುತ್ತಿದ್ದ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ಯಲ್ಲಿ ಸಿಪಿಐ ಗಡ್ಡೇಕರ, ಸಿಪಿಐ ಡಿ.ಸಿ.ಲಕ್ಕಣ್ಣವರ, ಸಿಬ್ಬಂದಿ ಗಳಾದ ಎಲ್ ಎಲ್ ದೇಸನೂರ, ದೀಪಕ ಮಾಳಗಿ, ಎನ್.ಬಿ.ನವಿನಕುಮಾರ ಸೇರಿದಂತೆ ಶಹಾಪುರ ಪೊಲೀಸ ಸಿಬ್ಬಂಧಿ ಇದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ