Breaking News
Home / Breaking News / ಬೆಳಗಾವಿಗೆ ನೀರು ಹರಿಸಿದ ಭಗೀರಥ

ಬೆಳಗಾವಿಗೆ ನೀರು ಹರಿಸಿದ ಭಗೀರಥ

ಬೆಳಗಾವಿ- ಬೆಳಗಾವಿ ನಗರದ ಕೆಲವು ಬಡವಾಣೆಯ ಹಾಗು ಸುತ್ತಮುತ್ತಲಿನ ಗ್ರಾಮಗಳ ಜನ ಅಶುದ್ಧ ನೀರು ಕುಡಿಯುತ್ತಿರುವದನ್ನು ಗಮನಿಸಿದ ಸ್ಥಳೀಯ ಶಾಸಕ ಫಿರೋಜ್ ಸೇಠ ಬೆಳಗಾವಿ ಸಮೀಪದ ಬಸವನಕೊಳ್ಳ ಗ್ರಾಮದಲ್ಲಿ

ನೀರು ಶುದ್ಧೀಕರಣ ಘಟಕ ನಿರ್ಮಿಸಿ ಕೇವಲ ಒಂದುವರೆ ವರ್ಷದಲ್ಲಿ ಬೆಳಗಾವಿ ನಗರಕ್ಕೆ ಶುದ್ಧ ನೀರು ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ
ಮಂಗಳವಾರ ಬೆಳ್ಳಂ ಬೆಳಿಗ್ಗೆ ಬಸವನಕೊಳ್ಳ ಗ್ರಾಮದಲ್ಲಿ ಪಂಪ್ ಹೌಸ್ ಗೆ ಪೂಜೆ ನೆರವೇರಿಸಿ ಅಟೋ ನಗರದ ಓವರ್ ಹೆಡ್ ಟ್ಯಾಂಕ್ ಗೆ ನೀರು ಬಿಡುಗಡೆ ಮಾಡಿದರು
ಈ ಸಂಧರ್ಭದಲ್ಲಿ ಪಾಲಿಕೆ ಆಯುಕ್ತ ಶಶಿಧರ ಕುರೇರ ಜಲ ಮಂಡಳಿಯ ಪ್ರಸನ್ನಮೂರ್ತಿ ನಗರ ಸೇವಕರಾದ ಪುಷ್ಪಾ ಪರ್ವತರಾವ,ಗಂಡಗುದರಿ,ಭೈರೇಗೌಡ,ಕಶಕತಿಕರ ,ಲೋಕೇಶ್ ಸೇರಿದಂತೆ ಹಲವಾರು ಜನ ನಗರ ಸೇವಕರು ಉಪಸ್ಥಿತರಿದ್ದರು
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಫಿರೋಜ್ ಸೇಠ ಬೆಳಗಾವಿ ಉತ್ತರ ಮತಕ್ಚೇತ್ರದ ಬಡಾವಣೆಗಳಿಗೆ ಮತ್ತು ಕೆಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರದ 35.94 ಕೋಟಿ ರೂ ವೆಚ್ಚದಲ್ಲಿ ಜಲ ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ ಈ ಘಟಕಕ್ಕೆ ಹಿಡಕಲ್ ಜಲಾಶಯದಿಂದ ನೀರನ್ನು ಪಂಪ್ ಮಾಡಲು ಸರ್ಕಾರಕ್ಕೆ 22 ಕೋಟಿ ರೂ ಗಳ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಸೇಠ ತಿಳಿಸಿದರು
ಬಸವನಕೊಳ್ಳ ಜಲಶುದ್ಧೀಕರಣ ಘಟಕದಿಂದ ಬೆಳಗಾವಿಯ ರಾಮತೀರ್ಥ ನಗರ ಮಾಳಮಾರುತಿ ಬಡಾವಣೆ ಆಂಜನೇಯ ನಗರ ಅಟೋ ನಗರ ರುಕ್ಮೀಣಿ ನಗರ ಗಾಂಧೀ ನಗರ ಕಣಬರ್ಗಿ,ಬಸವನಕೊಳ್ಳ,ಮುತ್ತ್ಯಾನಟ್ಟಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಆಗುತ್ತದೆ ಜೊತೆಗೆ ಈ ಭಾಗದ ನೀರಿನ ಸಮಸ್ತೆ ಬಗೆ ಹರಿಯುತ್ತದೆ ಎಂದು ಶಾಸಕ ಫಿರೋಜ್ ಸೇಠ ಹೇಳಿದರು
ಮೇ ತಿಂಗಳ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ಧ ರಾಮಯ್ಯ ಅವರನ್ನು ಕರೆಯಿಸಿ ಅವರ ಅಮೃತ ಹಸ್ತ ದಿಂದ ಜಲ ಶುದ್ಧೀಕರಣ ಘಟಕ ಉದ್ಘಾಟಿಸಲಾಗುವದು ಎಂದು ತಿಳಿಸಿದ ಸೇಠ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸಿ ಸಕಾಲದಲ್ಲಿ ಬೆಳಗಾವಿ ನಗರಕ್ಕೆ ನೀರು ಹರಿಸಿದ ಜಲ ಮಂಡಳಿಯ ಅಧಿಕಾರಿಗಳ ಸೇವೆಯನ್ನು ಶ್ಲಾಘಿಸಿದರು

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *