ಬೆಳಗಾವಿ- ನೈರುತ್ಯ ರೇಲ್ವೆ ಇಲಾಖೆ ಇತ್ತೀಚಿಗೆ ಕರ್ನಾಟಕದ ರೇಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡಿರುವ ಅನುದಾನದ ವಿವರ ಹೊಂದಿರುವ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಧಾರವಾಡ- ಕಿತ್ತೂರು- ಬೆಳಗಾವಿ ಹೊಸ ರೈಲು ಮಾರ್ಗಕ್ಕೂ ಕೇಂದ್ರ ಕೇವಲ 20 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ.
ರಾಜ್ಯ ಸರ್ಕಾರ ಇನ್ನುವರೆಗೆ ಧಾರವಾಡ- ಕಿತ್ತೂರು- ಬೆಳಗಾವಿ ಹೊಸ ರೈಲು ಮಾರ್ಗದ ಯೋಜನೆಗೆ ಇನ್ನುವರೆಗೆ ಭೂಸ್ವಾಧೀನ ಮಾಡಿಲ್ಲ, ವರ್ಕ್ ಶುರು ಆಗಿಲ್ಲ ಅಂತಾ ಈ ಯೋಜನೆಗೆ ನಾಮಕೇ ವಾಸ್ತೆ ಕೇವಲ 20 ಕೋಟಿ ಅನುದಾನ ನೀಡಿದೆ.
ಈ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ 50+50 ಸಹಯೋಗದಲ್ಲಿ ನಡೆಯುತ್ತದೆ. ಒಟ್ಟು 927 ಕೋಟಿ ರೂ ಯೋಜನೆ ಇದಾಗಿದ್ದು ಕೇಂದ್ರ ಸರ್ಕಾರ 50% ರಾಜ್ಯ ಸರ್ಕಾರ 50 % ಅನುದಾನ ನೀಡುವ ಪ್ರೋಜೆಕ್ಡ್ ಇದಾಗಿದೆ.ಈ ಯೋಜನೆ ದಿವಂಗತ ಸುರೇಶ್ ಅಂಗಡಿ ಅವರ ಕನಸಿನ ಯೋಜನೆಯಾಗಿದ್ದು ಇದನ್ನು ಅನುಷ್ಠಾನ ಗೊಳಿಸುವ ವಿಚಾರದಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ತಮ್ಮ ಇಚ್ಛಾಶಕ್ತಿಯನ್ನು ತೋರಿಸಬೇಕಾಗಿದೆ.
ರಾಜ್ಯ ಸರ್ಕಾರ ಇನ್ನುವರೆಗೆ ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿಲ್ಲ, ಭೂಸ್ವಾಧೀನ ಆಗಲಿ, ಆಮೇಲೆ ಕೆಲಸ ಶುರು ಆಗುತ್ತೆ ಅನ್ನೋದು ರೇಲ್ವೆ ಇಲಾಖೆಯ ಹೇಳಿಕೆ, ಸಂಸದ ಜಗದೀಶ್ ಶೆಟ್ಟರ್ ಈ ವಿಚಾರದಲ್ಲಿ ಅನೇಕ ಬಾರಿ ಬೆಳಗಾವಿ ಡಿಸಿ ಕಚೇರಿಯಲ್ಲಿ ಸಭೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆ ಬೇಗ,ಬೇಗ ಮುಗಿಸಿ ಎಂದು ತಾಕೀತು ಮಾಡಿದ್ದಾರೆ ಆದ್ರೂ ಸಹ ಈ ಕಾರ್ಯ ಇನ್ನುವರೆಗೆ ವೇಗ ಪಡೆದಿಲ್ಲ
ರೇಲ್ವೆ ಇಲಾಖೆ, ಕಂದಾಯ ಇಲಾಖೆ, ಮತ್ತು ಈ ಯೋಜನೆಗೆ ಭೂಮಿ ಕೊಡಲು ವಿರೋಧ ಮಾಡುತ್ತಿರುವ ರೈತರ ಜಂಟಿ ಸಭೆಯನ್ನು ಕರೆದು ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರ ಮೇಲಿದೆ.
ಭೂಸ್ವಾಧೀನ ವಿಚಾರದಲ್ಲಿ ಕೆಕೆ ಕೊಪ್ಪ ಹತ್ತಿರ ರೂಟ್ ಚೇಂಜ್ ಆಗಿದೆ ರೂಟ್ ಸರಿಪಡಿಸಿಕೊಳ್ಳಬೇಕು ಎನ್ನುವದು ರೈತರ ಬೇಡಿಕೆಯಾಗಿದೆ.ಭೂಮಿ ಕಳೆದುಕೊಂಡ ರೈತರಿಗೆ ಏಕರೂಪದ ಪರಿಹಾರ ಕೊಡುತ್ತಿರುವದರಿಂದ ಬೆಳಗಾವಿ ನಗರ ವಲಯದ ರೈತರು ಏಕರೂಪದ ಪರಿಹಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಬೆಳಗಾವಿ ವಕಯದಲ್ಲಿ ಭೂಮಿ ಬೆಲೆ ಜಾಸ್ತಿ ಇದೆ ನಮಗೆ ಜಾಸ್ತಿ ಪರಿಹಾರ ಕೊಡಬೇಕು ಎನ್ನುವದು ಬೆಳಗಾವಿ ರೈತರ ವಾದವಾಗಿದೆ ಈ ಎಲ್ಲ ವಾದಗಳು ಈಗ ವಿವಾದದ ಸ್ವರೂಪ ಪಡೆದುಕೊಂಡಿವೆ, ಸ್ಥಳೀಯ ಜನಪ್ರತಿನಿಧಿಗಳು ಪಕ್ಷಪಾತ ಮರೆತು ಈ ಎಲ್ಲ ವಾದ ವಿವಾಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಮ್ಮ ಇಚ್ಛಾಶಕ್ತಿ ತೋರಿಸಿ ಜನಮನ ಗೆಲ್ಲುವ ಪ್ರಯತ್ನ ಮಾಡುವದು ಅತ್ಯಗತ್ಯವಾಗಿದೆ.