ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ಏರ್ಪೋರ್ಟ್ ಅಧಿಕಾರಿಗಳ ಸಭೆ ನಡೆಸಿದ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ಇಂಟರ್ನ್ಯಾಷನಲ್ ಏರ್ಪೋರ್ಟ್ ಮಾಡಲು ,ಡಿಮಾಂಡ್ ಸರ್ವೆ” ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲು ಅವಶ್ಯಕವೆನಿಸುವ ‘ಡಿಮಾಂಡ್ ಸರ್ವೆ’ ಕೈಗೊಳ್ಳುವಂತೆ ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಇವರು ಬೆಳಗಾವಿಜಿಲ್ಲಾಧಿಕಾರಿಗಳ ಜೊತರ ದಿನಾಂಕ 21-08-2024 ರಂದು ನಡೆಸಿದ ಏರ್ಪೋರ್ಟ್ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದರು.
ಬೆಳಗಾವಿ ವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು, ಬೆಂಗಳೂರು ನಂತರ ಎರಡನೇ ರಾಜಧಾನಿ ಎನಿಸಿಕೊಂಡಿದೆ. ವಿಮಾನ ಸೇವೆಯಲ್ಲಿ ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ನಂತರ ಮೂರನೆಯ ಅತಿ ದೊಡ್ಡ ನಿಲ್ದಾಣವಾಗಿ ಹೆಸರು ಮಾಡಿದ್ದು, ಇಲ್ಲಿಂದ ಈಗಾಗಲೇ ದಿನನಿತ್ಯ 10 ವಿಮಾನಗಳು ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಯಶಸ್ವಿಯಾಗಿವೆ. ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ನಗರದಿಂದ ಹಾಗೂ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಗೆ ಹತ್ತಿರವಿರುವ ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಯಿಂದಲೂ ಸಹ ವಿಮಾನ ಪ್ರಯಾಣಿಕರು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿವಿಧ ನಗರಗಳಿಗೆ ಪ್ರವಾಸ ಮಾಡುತ್ತಿರುವುದು ವಿಶೇಷ ಎಂದು ಜಗದೀಶ್ ಶೆಟ್ಟರ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಬೆಳಗಾವಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿಸಲು ಎಲ್ಲ ಅರ್ಹತೆ ಹೊಂದಿದ್ದು ಹಾಗೂ ಸಾರ್ವಜನಿಕರ ಬೇಡಿಕೆಯು ಸಹ ಆಗಿದ್ದು, ಈ ಕುರಿತು ಪ್ರಾರಂಭದಲ್ಲಿ ಅಗತ್ಯವೆನಿಸಿರುವ ‘ಡಿಮಾಂಡ್ ಸರ್ವೆ’ ಕೈಗೊಳ್ಳುವ ಬಗ್ಗೆ ಬೆಳಗಾವಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ಮುಂದಿನ ಕ್ರಮವನ್ನು ಜರುಗಿಸಲು ಸಭೆಯಲ್ಲಿ ಸೂಚಿಸಿದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯರು ಈರಣ್ಣ ಕಡಾಡಿ ಅವರು ಬೆಳಗಾವಿ ನಗರ (ಉತ್ತರ) ಶಾಸಕರು ಆಸಿಫ್ (ರಾಜು) ಸೇಠ, ಜಿಲ್ಲಾಧಿಕಾರಿಗಳು ಮಹಮದ ರೋಶನ್, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ತ್ಯಾಗರಾಜನ್ ಹಾಜರಿದ್ದರು.
ಬೆಳಗಾವಿ ದಂಡು ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ
ಬೆಳಗಾವಿ : ದಂಡು ಮಂಡಳಿ ಸೇರಿದ ನಾಗರಿಕ ಪ್ರದೇಶವನ್ನು ಗುರುತಿಸುವ ವ ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆಯೂ ನಡೆದು ಸುದೀರ್ಘವಾದ ಚರ್ಚೆಯಲ್ಲಿ ಸಂಸದರು ಭಾಗವಹಿಸಿ ರಕ್ಷಣಾ ಇಲಾಖೆ ಪ್ರಸ್ತಾಪಿಸಿದ ನಿಯಮಾವಳಿಯಂತೆ ನಿಯಮಾವಳಿಯಂತೆ ದಂಡು ಮಂಡಳಿ ಸೇರಿದ ಎಲ್ಲ ನಾಗರಿಕ ಪ್ರದೇಶವನ್ನು ಬೆಳಗಾವಿ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗುವಂತೆ ಗುರುತಿಸಿ, ಕೂಡಲೇ ರಾಜ್ಯ ಸರ್ಕಾರಕ್ಕೆ ವರದಿಯನ್ನು ಜಿಲ್ಲಾಧಿಕಾರಿಗಳು ಕಳುಹಿಸುವ ಬಗ್ಗೆ ಮುಂದಿನ ಕ್ರಮವನ್ನು ಜರುಗಿಸುವಂತೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಇವರು ಸಭೆಯಲ್ಲಿ ತಿಳಿಸಿದರು.
ಈ ಸಭೆಯಲ್ಲಿ ರಾಜ್ಯಸಭಾ ಸದಸ್ಯರು ಈರಣ್ಣ ಕಡಾಡಿ ಅವರು, ಬೆಳಗಾವಿ ನಗರ (ಉತ್ತರ) ಶಾಸಕರು ಆಸಿಫ್ (ರಾಜು) ಸೇಠ, ಜಿಲ್ಲಾಧಿಕಾರಿಗಳು ಮಹಮದ ರೋಶನ್, ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.