ಬೆಳಗಾವಿ-ಸಾರ್ವಜನಿಕ ಆಡಳಿತದಲ್ಲಿ ಉತ್ಕರ್ಷ ಸೇವೆ ಸಲ್ಲಿಸಿದ್ದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿ ಎನ್. ಜಯರಾಮ ಅವರಿಗೆ IIMM ಸಂಸ್ಥೆಯ 2022 ನೇ ಸಾಲಿನ ‘Best CEO’ ಅವಾರ್ಡ್ ದೊರೆತಿದೆ.
ಇತ್ತೀಚೆಗೆ ಚೆನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ Indian Institute of Material Management ನ ರಾಷ್ಟ್ರೀಯ ಅಧ್ಯಕ್ಷ ಎಚ್. ಕೆ. ಶರ್ಮ ಈ ಪ್ರಶಸ್ತಿ ನೀಡಿದರು.
ಸಾರ್ವಜನಿಕ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ, ಪೌರಾಡಳಿತ, ಸ್ಕಿಲ್ ಡೆವಲಪಮೆಂಟ್, ಬೆಂಗಳೂರು ಜಲಮಂಡಳಿ ಮುಖ್ಯಸ್ಥರಾಗಿ ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಆರ್ಥಿಕ ಸೋರಿಕೆ ತಡೆಗಟ್ಟಿ ಮಂಡಳಿಗೆ ಆದಾಯ ಸಂಗ್ರಹ, ಮಂಡಳಿ ಸ್ವತ್ತುಗಳ ರಕ್ಷಣೆ, ಜಲಮಂಡಳಿಯಲ್ಲಿ ನೇರ ನೇಮಕಾತಿ ಹೊಂದಿದ ಅಭಿಯಂತರರು & ನೌಕರರ ಹಲವಾರು ವರ್ಷಗಳ ಸಮಸ್ಯೆಗಳ ಇತ್ಯರ್ಥ.
ಪ್ರಾದೇಶಿಕ ಆಯುಕ್ತರಾಗಿ, ಜಿಲ್ಲಾಧಿಕಾರಿಯಾಗಿ ಭೂ ಕಂದಾಯ ಸುಧಾರಣೆಗಳು, ಸಾರ್ವಜನಿಕ ಸಮಸ್ಯೆಗಳ ನಿರ್ವಹಣೆ, ಅಭಿವೃದ್ಧಿ ಆಡಳಿತ ಹಾಗೂ ಕಾನೂನು ಸುವ್ಯವಸ್ಥೆಯ ಅದ್ಭುತ ನಿರ್ವಹಣೆ ಗಮನಿಸಿ 2004 ನೇ ಬ್ಯಾಚ್ ಐಎಎಸ್ ಅಧಿಕಾರಿ ಎನ್. ಜಯರಾಮ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಎನ್. ಜಯರಾಮ ಪ್ರಸ್ತುತ ರಾಜ್ಯ ಕಂದಾಯ ಕಾರ್ಯದರ್ಶಿ( Revenue Secretary) ಹಾಗೂ ಬೆಂಗಳೂರು ಜಲಮಂಡಳಿ ಚೇರಮನ್ ಆಗಿ ಸರಕಾರದಲ್ಲಿ ಕಾರ್ಯದರ್ಶಿ ಶ್ರೇಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.