Breaking News
Home / Breaking News / ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ, ಪುಂಡರ ಅರೆಸ್ಟ್..

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ, ಪುಂಡರ ಅರೆಸ್ಟ್..

ಬೆಳಗಾವಿ

ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು‌ ಘೋಷಣೆ ಕೂಗಿದ ಪುಂಡ ಎಂಇಎಸ್ ನಾಯಕರನ್ನು ಪೊಲೀಸರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಂಧಿಸಿದರು.

ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರು ಇಲ್ಲಿನ ಮರಾಠಿ ಭಾಷಿಕರ ಸಮಸ್ಯೆ ಆಗಲಿಸಲು ಬೆಳಗಾವಿಗೆ ಆಗಮಿಸುತ್ತಿದ್ದರು. ಅವರಿಗೆ ಬೆಳಗಾವಿ ಜಿಲ್ಲಾಡಳಿತ ಹಾಗೂ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಸರಕಾರಕ್ಕೆ ಪತ್ರ ಬರೆದು ಬೆಳಗಾವಿ ಗಡಿ ಪ್ರವೇಶಿಸದಂತೆ ಮಾಡಿದ್ದು ಖಂಡನೀಯ ಎಂಇಎಸ್ ಛಾಪಾಗಳು ಮರಾಠಿ ಸುದ್ದಿಗಾರರಿಗೆ ಎಂಇಎಸ್ ಪುಂಡರು ತಿಳಿಸಿದರು.

ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾಗುತ್ತಿದೆ. ನಮಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರನ್ನು ಬೆಳಗಾವಿ ಗಡಿಗೆ ಬಾರದಂತೆ ನೋಡಿಕೊಂಡಿರುವುದು ದುರಂತ ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಆಗಮಿಸುತ್ತಿದ್ದಂತೆ ಗಲಿಬಿಲಿಗೊಂಡ ಬೆರಳಣಿಕೆಯ ಪುಂಡ ಎಂಇಎಸ್ ನಾಯಕರಿಗೆ ಕ್ಯಾರೆ ಎನ್ನದೆ ತಮ್ಮ ಕಚೇರಿಯತ್ತ ತೆರಳಿದರು. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಎಂಇಎಸ್ ಪುಂಡರಿಗೆ ಕೇವಲ ನಾಲ್ಕು ಜನಕ್ಕೆ ಮಾತ್ರ ತೆರಳಿ ಮನವಿ ಸಲ್ಲಿಸುವಂತೆ ಕೊರಿದರೂ ಪೊಲೀಸರ ಮಾತಿಗೆ ಗೌರವ ಕೊಡದೆ ಪುಂಡಾಟ ಮೆರೆಯಲು ಮುಂದಾದರೂ ಅಲ್ಲದೆ, ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು‌ ಘೋಷಣೆ ಕೂಗುತ್ತಿದ್ದಂತೆ ಪ್ರತಿಭಟನೆಗೆ ಆಗಮಿಸಿದ್ದ ಪುಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *