ಸಹೋದರರ ಸ್ಪರ್ದೆ ಸಪೋಟರ್ಸಗೆ ಸವಾಲ್…..!!!
ಬೆಳಗಾವಿ- ಗೋಕಾಕ ಕ್ಷೇತ್ರದ ಉಪ ಸಮರ ಜಾರಕಿಹೊಳಿ ಸಪೋಟರ್ಸಗೆ ಧರ್ಮಸಂಕಟ ತಂದಿದೆ ಯಾರಿಗೆ ಬೆಂಬಲಿಸಬೇಕೋ,ಯಾರ ವಿರೋಧ ಕಟ್ಟಿಕೊಳ್ಳಬೆಕೋ ಎನ್ನುವ ಸಮಸ್ಯೆ ಜಾರಕಿಹೊಳಿ ಬೆಂಬಲಿಗರಿಗೆ ಎದುರಾಗಿದೆ.
ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಮನೆತನದ ಇಬ್ಬರು ಸಹೋದರರು ಕಣದಲ್ಲಿದ್ದಾರೆ ಲಖನ್ ಕಾಂಗ್ರೆಸ್ ಅಭ್ಯರ್ಥಿ, ರಮೇಶ್ ಬಿಜೆಪಿ ಅಭ್ಯರ್ಥಿ ಈ ಚುನಾವಣೆಯಲ್ಲಿ ಒಬ್ಬರನ್ನು ಬೆಂಬಲಿಸಿದರೆ ಇನ್ನೊಬ್ಬರು ಸಿಟ್ಟಾಗುತ್ತಾರೆ.ಸುಮ್ಮನೇ ವಿರೋಧ ಕಟ್ಟಿಕೊಳ್ಳುವದು ಯಾರಿಗೆ ಬೇಕು ಅಂತ ಹಲವಾರು ಜನ ಜಾರಕಿಹೊಳಿ ಸಹೋದರರ ಬೆಂಬಲಿಗ ನಾಯಕರು ಚುನಾವಣೆಯ ಕಣದಿಂದ ದೂರ ಉಳಿಸಿದ್ದಾರೆ.
ಲಖನ್ ಜಾರಕಿಹೊಳಿ,ರಮೇಶ್ ಜಾರಕಿಹೊಳಿ ಇಬ್ಬರೂ ಜತೆಜೊತೆಯಾಗಿ ರಾಜಕಾರಣ ಮಾಡುತ್ತ ಬಂದಿದ್ದಾರೆ ಇಬ್ಬರೂ ಕಾಂಗ್ರೆಸ್ ಗರಡಿಯಲ್ಲಿ ಪಳಗಿದ್ದಾರೆ,ಈ ಇಬ್ಬರು ಸಹೋದರರ ಬೆಂಬಲಿಗರು ಒಂದೇ ಆದ್ರೆ ಈಗ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ದಾರೆ.ಲಖನ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ ಇಂತಹ ಸಂಧರ್ಭದಲ್ಲಿ ಇಬ್ಬರೂ ನಾಯಕರು ಬೆಂಬಲಿಗರ ಮೇಲೆ ಒತ್ತಡ ಹೇರುತ್ತಿರುವದರಿಂದ ಬೆಂಬಲಿಗರಿಗೆ ಈಗ ಧರ್ಮ ಸಂಕಟ
ಗೋಕಾಕ ಕ್ಷೇತ್ರದಲ್ಲಿ ಈಗ ಬಾಲಚಂದ್ರ ಜಾರಕಿಹೊಳಿ ಅವರೇ ಸೂತ್ರಧಾರಿ ಎಲ್ಲ ಸಮುದಾಯಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.ಗೋಕಾಕಿನ ದಾನಶೂರ ಎಂದೇ ಪ್ರಸಿದ್ದಿ ಪಡೆದಿರುವ ಬಾಲಚಂದ್ರ ಜಾರಕಿಹೊಳಿ ಸಹಜವಾಗಿ ಗೋಕಾಕಿನಲ್ಲಿ ಪ್ರಭಾವ ಬೀರುತ್ತಿದ್ದಾರೆ ಭೀಮಶಿ ಜಾರಕಿಹೊಳಿ ಅವರು ಈಗ ರಮೇಶ್ ಜಾರಕಿಹೊಳಿ ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿರುವದರಿಂದ ರಮೇಶ್ ಜಾರಕಿಹೊಳಿ ಅವರಿಗೆ ಈಗ ಭೀಮ ಬಲ ಬಂದಿದ್ದು ನಿಜ
ಕಾಂಗ್ರೆಸ್ ಅಭ್ಯರ್ಥಿ ಲಖನ್ ಕೂಡಾ ಚುನಾವಣೆಯ ಕಣದಲ್ಲಿ ತಮ್ಮ ಹಾಸ್ಯಭರಿತ ಭಾಷಣಗಳ ಮೂಲಕ ಮತದಾರರನ್ನು ಆಕರ್ಷಿಸುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರಿಗೆ ಸತೀಶ್ ಜಾರಕಿಹೊಳಿ ಫುಲ್ ಸಪೋರ್ಟ್ ಮಾಡುತ್ತಿದ್ದು ಲಖನ್ ,ಸತೀಶ್ ಗೋಕಾಕ್ ಕ್ಷೇತ್ರದಲ್ಲಿ ಮತಬೇಟೆಯಾಡುತ್ತಿದ್ದಾರೆ.
ಒಟ್ಟಾರೆ ಸಹೋದರರ ನಡುವಿನ ಸ್ಪರ್ದೆ ಬೆಂಬಲಿಗರಿಗೆ ಸಮಸ್ಯೆ ಮಾಡಿದ್ದು ಸತ್ಯ