ಬೆಳಗಾವಿ: ಮಹೇಶ ಕುಮಟಳ್ಳಿ ಬಾಯಲ್ಲಿ ರಮೇಶ ಜಾರಕಿಹೊಳಿ ನನಗೆ ಅನ್ಯಾಯ ಮಾಡಿದ್ದಾರೆ ಎಂಬ ಶಬ್ದ ಹೊರಬಂದದ್ದೇ ಆದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಹೇಶ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನಾನು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇನೆ. ಅವರ ಹೆಸರಿನಲ್ಲಿ ನಾನು ಅನ್ಯಾಯ ಮಾಡಿಲ್ಲ. ಮಹೇಶ ಕುಮಟಳ್ಳಿ ನಾನು ಅನ್ಯಾಯ ಮಾಡಿದ್ದೇನೆ ಎಂದು ಹೇಳಿದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ನೀರಾವರಿ ಇಲಾಖೆಯ ಬಗ್ಗೆ ಡಿಮ್ಯಾಂಡ್ ಮಾಡಿದಿದ್ದಲ್ಲ. ಉತ್ತರ ಕರ್ನಾಟಕದ ಜನರೇ ನೀರಾವರಿ ಮಂತ್ರಿಯಾಗಿದ್ದರು. ಈ ನಿಟ್ಟಿನಲ್ಲಿ ನಾನು ನೀರಾವರಿ ಮಂತ್ರಿಯಾಗಿದ್ದೇನೆ.
ನನಗೆ ಇದೆ ಖಾತೆ ಬೇಕು ಎಂದು ಬೇಡಿಕೆ ಇಟ್ಡಿದಿಲ್ಲ. ಹೈಕಮಾಂಡ್ ನೀರಾವರಿ ಖಾತೆ ಕೊಟ್ಟಿದ್ದು ಸಂತಸ ತಂದಿದೆ.ಮಹದಾಯಿ ವಿಚಾರವಾಗಿ ಸುಪ್ರೀಂ ಕೋರ್ಟ್ ಗೆಜೆಟ್ ಹೊರಡಿಸಿದೆ. ಶೀಘ್ರದಲ್ಲೇ ಕೇಂದ್ರ ನೀರಾವರಿ ಸಚಿವರನ್ನು ಭೇಟಿಯಾಗುತ್ತೇನೆ.
ಮಹದಾಯಿ ಅನುಷ್ಠಾನಕ್ಕೆ ಸಿಎಂ 200 ಕೋಟಿ ರು. ಅನುದಾನ ಮಿಸಲಿಟ್ಟಿದ್ದಾರೆ. ಗೋವಾ ಹಾಗೂ ಮಹಾರಾಷ್ಟ್ರ ಸರಕಾರ ಖ್ಯಾತೆ ತೆಗೆದರೆ ಕಾನೂನು ಹೋರಾಟ ಮಾಡುವಲ್ಲಿ ರಾಜ್ಯ ಸರಕಾರ ಬದ್ದವಾಗಿದೆ ಎಂದರು.
ಕಳೆದ 20 ವರ್ಷದಿಂದ ನೀರಾವರಿ ಸಚಿವರ ಕೆಲಸದ ಸ್ಟೈಲ್ ಬೇರೆ ಇರುತ್ತದೆ. ಕೆಲವು ಕಾಮಗಾರಿಗಳನ್ನು ತರಾತುರಿಯಲ್ಲಿ ಟೆಂಡರ್ ಮಾಡಿದ್ದಾರೆ. ಗಡಿ ಬಿಡಿ ಮಾಡುವುದಿಲ್ಲ. ಹಂತ ಹಂತವಾಗಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತೇನೆ.
ರಮೇಶ ಜಾರಕಿಹೊಳಿ ಸೇಡಿನ ರಾಜಕೀಯ ಮಾಡುತ್ತಾರೆ ಎಂದು ಆರೋಪ ಮಾಡುವುದು ಸುಳ್ಳು. ಎಲ್ಲರನ್ನೂ ಒಗ್ಗೂಡಿಸಿಕೊಂಡು ನೀರಾವರಿ ಯೋಜನೆ ಅನುಷ್ಠಾನಗೊಳಿಸುತ್ತೇನೆ ಎಂದರು.
ಸಚಿವ ಸಂಪುಟದಲ್ಲಿ ನೆರೆ ಪರಿಹಾರದ ಲೋಪದೋಷಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೆರೆ ಪರಿಹಾರದಲ್ಲಿ ದಾಖಲಾತಿಗಳನ್ನು ಕಳೆದುಕೊಂಡವರಿಗೂ ಪರಿಹಾರ ನೀಡುವಂತೆ ಸಿಎಂ ಆದೇಶ ಮಾಡಿದ್ದಾರೆ ಎಂದು ಹೇಳಿದರು.
ಕಾವೇರಿ, ಕೃಷ್ಣ ನದಿಯ ವಿವಾದ ನ್ಯಾಯಾಲಯದಲ್ಲಿ ಇದೆ. ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥವಾಗಿದೆ. ಶೀಘ್ರದಲ್ಲೇ ಉತ್ತರ ಕರ್ನಾಟಕದ ಭಾಗದಲ್ಲಿ ನೀರಿನ ಅನುಷ್ಠಾನ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಗೊಂದಲ ಇಲ್ಲ. ಜಗದೀಶ್ ಶೆಟ್ಟರ್ ಅವರಿಗೆ ಮಾಡಿದ್ದು ನಾವೇ. ಅವರು ಎಲ್ಲಿಯವರೆಗೂ ಇರುತ್ತಾರೋ ಇರಲಿ. ಅವರು ಇದ್ದರೆ ನಾನೇ ಇದ್ದ ಹಾಗೆ ಎಂದು ಉಸ್ತುವಾರಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾನು ರಮೇಶ ಕತ್ತಿ ಒಂದೇ ಇಬ್ಬರು ಒಂದಾಗಿ ಚುನಾವಣೆ ಎದುರಿಸುತ್ತೇವೆ. ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ಹೊಂದಾಣಿಕೆ ಮಾಡುವು ಪ್ರಶ್ನೆ ಇಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ನಿರ್ಣಯವೆ ಅಂತಿಮ ಎಂದರು.