ಬೆಳಗಾವಿ:ನೆರೆಯ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡಿಗರ ಬೃಹತ್ ಮಹಾಮೇಳಾವ್ ನಡೆಸಲು ಬೆಳಗಾವಿ ಕನ್ನಡ ಸಂಘಟನೆಗಳು ಒಟ್ಟಾಗಿ ನಿರ್ಧರಿಸಿದ್ದಾರೆ
ಎಂ ಇ ಎಸ್ ಬೆಳಗಾವಿಯಲ್ಲಿ ಮಹಾಮೇಳಾವ್, ಕರಾಳ ದಿನಾಚರಣೆಯಂಥ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅವರಿಗೆ ನಮ್ಮ ಜಿಲ್ಲಾಡಳಿತ ಅನುಮತಿ ನೀಡುತ್ತದೆ. ಅದರಂತೆ ಕೊಲ್ಲಾಪುರ ಇಲ್ಲವೇ ಸೊಲ್ಲಾಪುರದಲ್ಲಿ ಕನ್ನಡಿಗರ ಮಹಾಮೇಳಾವ್ ನಡೆಸಲಾಗುವುದು ಎಂದು ಒಕ್ಕೂರಲ ನಿರ್ಣಯ ಮಂಡಿಸಲಾಯಿತು.
ರಾಜ್ ಠಾಕ್ರೆ ಎಂ ಇ ಎಸ್ ಕುಚೋದ್ಯಕ್ಕೆ ತಕ್ಕ ಉತ್ತರ ನೀಡಿದ್ದು ರಾಜ್ ಠಾಕ್ರೆ ಕನ್ನಡಿಗರ ಅಭಿನಂದನೆಗೆ ಒಳಗಾಗಿದ್ದಾರೆ. ಎಂ ಇ ಎಸ್ ಮಾದರಿಯಲ್ಲಿ ಕನ್ನಡಿಗರು ಮಹಾರಾಷ್ಟ್ರದಲ್ಲಿ ಯಾಕೆ ಮೇಳಾವ್ ಮಾಡಬಾರದು ಎಂಬ ಪ್ರಶ್ನೆ ಮೂಡುತ್ತಿದ್ದು ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಕೊಲ್ಲಾಪುರ ಇಲ್ಲವೇ ಸೊಲ್ಲಾಪುರದಲ್ಲಿ ಮೇಳಾವ್ ನಡೆಸಲು ಅನುಮತಿ ಕೇಳಲಾಗುವುದು. ಕೊಲ್ಲಾಪುರ ಇಲ್ಲವೇ ಸೊಲ್ಲಾಪುರ ಜಿಲ್ಲಾಧಿಕಾರಿಯನ್ನು ಸದ್ಯದಲ್ಲೇ ಭೇಟಿ ಮಾಡಲು ನಿರ್ಧರಿಸಲಾಯಿತು. ಜತೆಗೆ ರಾಜ್ಯೋತ್ಸವ ಕನ್ನಡಿಗರ ಮಹಾ ಒಕ್ಕೂಟ ರಚಣೆಯ ನಿರ್ಧಾರ ಪ್ರಕಟವಾಯಿತು.
ಸಭೆಯಲ್ಲಿ ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಅನಂತ ಬ್ಯಾಕೂಡ, ಶ್ರೀನಿವಾಸ ತಾಳೂಕರ, ಗಣೇಶ ರೋಕಡೆ, ಬಾಬು ಸಂಗೋಡಿ, ಮಹಾಂತೇಷ ರಣಗಟ್ಟಿಮಠ, ಭೂಪಾಲ ಅತ್ತು ಸೇರಿದಂತೆ ಎಲ್ಲ ಕನ್ನಡ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.