Home / Breaking News / ಕನ್ನಡದ ಹಬ್ಬಕ್ಕೆ ಸಜ್ಜಾಗುತ್ತಿದೆ ಕ್ರಾಂತಿಯ ನೆಲ ಬೆಳಗಾವಿ…..!

ಕನ್ನಡದ ಹಬ್ಬಕ್ಕೆ ಸಜ್ಜಾಗುತ್ತಿದೆ ಕ್ರಾಂತಿಯ ನೆಲ ಬೆಳಗಾವಿ…..!

ಬೆಳಗಾವಿ-ಗಡಿನಾಡ ಗುಡಿ ಕರ್ನಾಟಕದ ಕೀರೀಟ ಗಂಡು ಮೆಟ್ಟಿನ ನೆಲ ಐತಿಹಾಸಿಕ ಕ್ರಾಂತಿಯ ನೆಲ ಈಗ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ಸಜ್ಜಾಗುತ್ತಿದೆ

ಬೆಳಗಾವಿ ನಗರದ ವೀರಾಣಿ ಚನ್ನಮ್ಮ ವೃತ್ತ , ಸಂಗೊಳ್ಳಿ ರಾಯಣ್ಣ ವೃತ್ತ ,ಜಿಲ್ಲಾಧಿಕಾರಿಗಳ ಕಚೇರಿ ಆವರಣ ಸೇರಿದಂತೆ ನಗರದ  ಎಲ್ಲ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ ಅದಲ್ಲದೆ ನಗರದ ಸಿಪಿಎಡ್ ಮೈದಾನದಲ್ಲಿ ಧ್ವಜಾರೋಹನಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ

ಜಿಲ್ಲಾಧಿಕಾರಿ ಎನ್ ಜೈರಾಮ ಅವರು ಈ ಬಾರಿ ಕನ್ನಡದ ಹಬ್ಬದಲ್ಲಿ ಭಾಗವಹಿಸುವ ಕನ್ನಡದ ಅಭಿಮಾನಿಗಳಿಗೆ ಹೋಳಗಿ ಊಟದ ವ್ಯೆವಸ್ಥೆ ಮಾಡುತ್ತಿದ್ದಾರೆ ಹೋಳಗಿ ರೆಡಿ ಮಾಡಲು ಅಡುಗೆ ಭಟ್ಟರ ತಂಡ ಬೆಳಗಾವಿಗೆ ಆಗಮಿಸಿದೆ

ಬೆಳಗಾವಿ ನಗರದ ತುಂಬೆಲ್ಲ ಜಿಲ್ಲಾಡಳಿತ ಕನ್ನಡ ಭಾಷೆ ನಾಡು, ನುಡಿ , ನೆಲ ಜಲದ ರಕ್ಷಣೆಗೆ ಶ್ರಮೀಸಿದ ಮಹಾಪುರುಷರ ಕಟೌಟಗಳನ್ನು ಬ್ಯಾನರ್ ಗಳನ್ನು ಹಾಕಿ ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಿ ಅವರ ಕನ್ನಡದ ಸೇವೆಯನ್ನು ಸ್ಮರಿಸುವ ಕೆಲಸ ನಡೆದಿದೆ

ವೀರ ರಾಣಿ ಕಿತ್ತೂರ ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಕ್ರಾಂತಿಯ ನೆಲದಲ್ಲಿ ಕನ್ನಡದ ಬಾವುಟ ಬಾನೆತ್ತರದಲ್ಲಿ ಹಾರಾಡುತ್ತಿದೆ ಕನ್ನಡದ ಹಬ್ಬಕ್ಕೆ ಬೆಳಗಾವಿ ನಗರದಲ್ಲಿ ಭರದ ಸಿದ್ಧತೆ ನಡೆದಿದೆ

Check Also

ಬೆಳಗಾವಿಯ 22 ಶಾಲೆಗಳಿಗೆ ಶನಿವಾರವೂ ಚಿರತೆ,ರಜೆ…

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಚಿರತೆ ಆತಂಕ ಮುಂದುವರೆದಿದ್ದು,ನಾಳೆ ಶನಿವಾರವೂ,ಬೆಳಗಾವಿಯ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿಯ ಹನುಮಾನ ನಗರದ …

Leave a Reply

Your email address will not be published. Required fields are marked *