Breaking News

ಗುಜರಾತ ಸರ್ಕಾರದ ಮನವಿಗೆ ಸ್ಪಂದಿಸಿದ ಕರ್ಣಾಟಕ ಸರ್ಕಾರ,

ಬೆಳಗಾವಿ- ಗುಜರಾತ ರಾಜ್ಯಪಾಲರು ಹಾಗು ಗುಜರಾತಿನ ಸಂಸದರ ಮನವಿಗೆ ಕರ್ನಾಟಕ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದ ನರ್ಸಿಂಗ್ ಸ್ಟುಡೆಂಟ್ ಗಳಿಗೆ ಅಹ್ಮದಾಬಾದ್ ಗೆ ತೆರಳಲು ಅನುಮತಿ ನೀಡಿದೆ‌.

ಸಾರಿಗೆ ಸಂಸ್ಥೆಯ ಮೂರು ರಾಜಹಂಸ ಬಸ್ ಗಳಲ್ಲಿ ಸುಮಾರು 45 ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಗುಜರಾತಿಗೆ ತೆರಳಿದ್ದಾರೆ.

ನಿನ್ನೆ ಸಂಜೆ ಈ ಮೂರು ಬಸ್ಸು ಗಳು ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಡಿಸೈಲ್ ತುಂಬಿಸಿಕೊಂಡು ಮುಂದಕ್ಕೆ

ಸಾಗಿವೆ ಗುಜರಾತಿನಲ್ಲಿ ಕೊರೋನಾ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ನರ್ಸಿಂಗ್ ವಿಧ್ಯಾರ್ಥಿಗಳನ್ನು ಅಹ್ಮದಾಬಾದ್ ಗೆ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಗುಜರಾತ ಸರ್ಕಾರದ ಮನವಿ ಮತ್ತು ರಾಜೀವ ಗಾಂಧಿ ವಿಶ್ವ ವಿಧ್ಯಾಲಯದ ನಿರ್ದೇಶನದ ಮೇರೆಗೆ ಗುಜರಾತಿನ ನರ್ಸಿಂಗ್ ವಿದ್ಯಾರ್ಥಿಗಳನ್ನು ಗುಜರಾತಿಗೆ ರವಾನಿಸಿದೆ

ದಾವಣಗೇರೆಯ ಅಶ್ವಿನಿ ಆಯುರ್ವೇದ ಕಾಲೇಜು,ಹಾವೇರಿಯ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ಕಾಲೇಜ,ಬಾಗಲಕೋಟೆಯ B V V S ಆಯುರ್ವೇದ ಮೆಡಿಕಲ್ ಕಾಲೇಜುಗಳಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ನರ್ಸಿಂಗ್ ಸ್ಟುಡೆಂಟ್ ಗಳನ್ನು ಅವರ ತವರೂರಿಗೆ ಕಳುಹಿಸುವ ಮೂಲಕ ಕರ್ನಾಟಕ ಸರ್ಕಾರ ಗುಜರಾತ ಸರ್ಕಾರದ ಮನವಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದೆ.

Check Also

ಕರ್ನಾಟಕದ ಜೊತೆ ಮಹಾರಾಷ್ಟ್ರದ ಮಹಾ ಪುಂಡಾಟಿಕೆ

ಬೆಳಗಾವಿ -ಆರೋಗ್ಯದ ವಿಚಾರದಲ್ಲಿ ಮಹಾರಾಷ್ಟ್ರ ಬೌಂಡರಿ ಕ್ರಾಸ್ ಮಾಡಿ ಬೆಳಗಾವಿ ಗಡಿಗೆ ನುಗ್ಗಿ ಆಯ್ತು, ಈಗ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *