Breaking News

ಮುಖ್ಯಮಂತ್ರಿ ಕುಮಾರಸ್ವಾಮಿ ಅಶಕ್ತರಲ್ಲ- ಸಚಿವ ಜಾರ್ಜ

ಬೆಳಗಾವಿ

ಈಗಾಗಲೇ ಕುಮಾರಸ್ವಾಮಿ ಹೇಳಿದ್ದಾರೆ ಕಾಂಗ್ರೆಸನಿಂದ ತೊಂದರೆ ಇಲ್ಲ ಎಂದು. ಆದರೆ ಸಿಎಂ ಸಮಸ್ಯೆಗಳನ್ನು ಸ್ಪಂದಿಸುವ ವಿಚಾರದಲ್ಲಿ ಕಣ್ಣೀರು ಹಾಕಿದ್ದಾರೆ ಅವರು ವೀಕ್ ಸಿಎಂ ಆಗಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ‌.ಜಾಜ್೯ ಹೇಳಿದರು.

ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಕುಮಾರಸ್ವಾಮಿ ಪವರ್ ಫುಲ್ ಇದ್ದಾರೆ. ಯಂಗ್ ಸ್ಟಾರ್ ಇದ್ದಾರೆ ಎಂದು ಯಾರಿಗೂ ಸರಕಾರ ನಡೆಸುವುದು ಸುಲಭವಲ್ಲ. ಕುಮಾರಸ್ವಾಮಿ ಅಷ್ಟೇ ಅಲ್ಲಾ ಎಲ್ಲರಿಗೂ ಸರಕಾರ ನಡೆಸುವುದು ಹೂವಿನ ಹಾಸಿಗೆ ಅಲ್ಲ. ಅದೊಂದು ಮುಳ್ಳಿನ ಹಾಸಿಗೆ ಇದ್ದಂತೆ ಎಂದರು.

ಸಿಎಂ ಹುದ್ದೆ ಎಂಜಾಯ್ ಮಾಡುವ ಪೋಸ್ಟ್ ಅಲ್ಲ. ಸಿಎಂ ಆದವರಿಗೆ ಜನರ ಕಷ್ಟ ಇರುತ್ತವೆ. ಆ ಕಷ್ಟವನ್ನ ಕುಮಾರಸ್ವಾಮಿ ಕಣ್ಣೀರು ಮೂಲಕ ತಮ್ಮ ಅನಿಸಿಕೆ ಹೊರ ಹಾಕಿದ್ದಾರೆ. ಕಣ್ಣೀರು ಹಾಕಿದ್ದಕ್ಕೆ ಕುಮಾರಸ್ವಾಮಿ ಅವರ ಅನಿಸಿಕೆ ಅಷ್ಟೇ ಎಂದು ಹೇಳಿದರು.

ಕುಮಾರಸ್ವಾಮಿ ಕಣ್ಣೀರು ಹಾಕಿರುವುದನ್ನ ಮಾಧ್ಯಮವರು ಒಳ್ಳೆ ರೀತಿಯಿಂದ ತೆಗೆದುಕೊಳ್ಳಬೇಕು. ನೀವು ಮಾಧ್ಯಮದವರು ಅಳ್ತಾರೆ ಅಳ್ತಾರೆ ಅಂದರೆ ಹೇಗೆ ಕುಮಾರಸ್ವಾಮಿ ಸಶಕ್ತರಾಗಿದ್ದಾರೆ ಎಂದರು.

ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ.. ಅವರು ಪತ್ರದ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಾರೆ ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಪತ್ರದ ಮೂಲಕ ಸಮಸ್ಯೆ ತಿಳಿಸುವುದು ತಪ್ಪಲ್ಲ ಎಂದರು.
——–

ಅರುಣ ಜಟ್ಲಿ ಯಾರೂ ?

ಬಿಜೆಪಿ ರಾಷ್ಟ್ರೀಯ ನಾಯಕರು, ಕುಮಾರಸ್ವಾಮಿ ಸ್ಟ್ರಾಂಗ್ ಇದಾರೇ ಅಂತಾ ಹೇಳುತ್ತಾರೆ. ಜೇಟ್ಲಿಯವರು ರಾಜಕೀಯ ಉದ್ದೇಶದಿಂದ ನೀಡದ ಹೇಳಿಕೆ ಉತ್ತರ ಕೊಡುವ ಅವಶಕತ್ಯಯಿಲ್ಲ ಎಂದರು.

Check Also

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು …

Leave a Reply

Your email address will not be published. Required fields are marked *